ಬೆಳ್ಳಾರೆ ಮಸೀದಿಯ ಘಟನೆ : ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಪಿ ಕುಂಞಗುಡ್ಡೆ ಸ್ಪಷ್ಟೀಕರಣ

Advertisement

ಬೆಳ್ಳಾರೆ: ರಂಝಾನ್ ಪ್ರಭಾಷಣಕ್ಕೆ ಶಾಫಿ ಅವರು ಈ ಬಾರಿ ಯಾವುದೇ ಅನುಮತಿಯನ್ನು ಕೋರಿ ಆಡಳಿತ ಸಭೆಗೆ ಅರ್ಜಿ ಸಲ್ಲಿಸಲಿಲ್ಲ.ಹೀಗಾಗಿ ಭಾಷಣದ ಬಗ್ಗೆ ಪ್ರಶ್ನಿಸಿದಾಗ ಈ ಘಟನೆ ನಡೆದಿದೆ ಎಂದು ಮಸೀದಿಯ ಪ್ರಧಾನ ಕಾರ್ಯ ದರ್ಶಿ ಇಬ್ರಾಹಿಂ ಪಿ ಕುಂಞಗುಡ್ಡೆ ಪತ್ರಿಕಾ ಪ್ರಕಟಣೆಯಲ್ಲಿ  ಸ್ಪಷ್ಟೀಕರಣ ನೀಡಿದ್ದಾರೆ.

Advertisement

ಶಾಫಿ ಬೆಳ್ಳಾರೆ ಅವರು ಸುಮಾರು 10 ವರ್ಷಗಳಿಂದ ಭಾಷಣ ಮಾಡುತ್ತಾ ಬಂದಿದ್ದು, ಅವರು ಬೆಳ್ಳಾರೆ ಮಸೀದಿಯ ಒಬ್ಬ ಸದಸ್ಯನಾಗಿದ್ದರೂ,ಅವರಿಗೆ ಭಾಷಣಕ್ಕೆ ಈ ಹಿಂದೆ ಅನುಮತಿ ನೀಡಲಾಗಿತ್ತು. ನಂತರ ಅದು ವಾಟ್ಸಾಪ್ ಗಳಲ್ಲಿ ರಾಜಕೀಯ ಪಕ್ಷದ ಕಾರ್ಯದರ್ಶಿಯ ಭಾಷಣ ಬೆಳ್ಳಾರೆ ಮಸೀದಿ ಯಲ್ಲಿದೆ ಎಂಬ ಪೋಸ್ಟರ್ ಗಳು ಬರಲಾರಂಭಿಸಿದ ನಂತರ ಅವರ ಭಾಷಣಕ್ಕೆ 2 ವರುಷಗಳ ಮೊದಲೆ ವಿರೋಧವಾಗಿತ್ತು. ಆಗ ಆಡಳಿತ ಸಮಿತಿಯು ಇನ್ನು ಮುಂದೆ ಯಾವುದೇ ಕಾರ್ಯಕ್ರಮವಿದ್ದರೂ ಆಡಳಿತ ಸಮಿತಿಯ ಸಭೆಗೆ ಅರ್ಜಿಯನ್ನು ಸಲ್ಲಿಸಬೇಕು. ಅದಲ್ಲದೆ ಆಡಳಿತ ಸಮಿತಿಯ ತೀರ್ಮಾನ ದಂತೆ ಅವರಿಗೆ ಅನುಮತಿ ನೀಡಲಾಗುದೆಂದು ತೀರ್ಮಾನ ಮಾಡಲಾಗಿತ್ತು. ಆದರೆ ಈ ವರುಷ ರಂಝಾನ್ ಪ್ರಭಾಷಣಕ್ಕೆ ಶಾಫಿ ಯಾವುದೇ ಅನುಮತಿಯನ್ನು ಕೋರಿ ಆಡಳಿತ ಸಭೆಗೆ ಅರ್ಜಿ ಸಲ್ಲಿಸಲಿಲ್ಲ. ಆದರೆ ಜೂನ್ 1 ರಂದು ಬೆಳಗ್ಗೆ ಭಾಷಣಕ್ಕೆ ಅನುಮತಿ ಇದೆ ಎಂದು ಗೊತ್ತಾಗಿದ್ದು ಅದರಂತೆಯೆ ರಾತ್ರಿ ತರಾವೀಹ್ ನಮಾಝಿನ ನಂತರ ಶಾಫಿ ಪ್ರಭಾಷಣಕ್ಕೆ ಎದ್ದು ನಿಂತಾಗ ಕಾರ್ಯದರ್ಶಿ ನಾನು ಮತ್ತು ಉಪಾಧ್ಯಕ್ಷ ರಾದ ಯು ಹೆಚ್ ಅಬೂಬಕ್ಕರ್ ಎಂಬುವವರು  ಅನುಮತಿ ನೀಡದಿರುವ ಬಗ್ಗೆ ವಿಚಾರಿಸಿದಾಗ ಘಟನೆ ನಡೆದಿದ್ದು ಅದಕ್ಕೆ ಆ ರಾಜಕೀಯ ಪಕ್ಷದ ಕಾರಣವಾಗಿರುತ್ತದೆ ಎಂದು ಈ ರಂಝಾನ್ ತಿಂಗಳ ಮೇಲೆ ಸತ್ಯ ಮಾಡಿ ಹೇಳುತ್ತೇನೆ ಹಾಗೂ ಎಲ್ಲಿ ಬೇಕಾದರೂ ಪ್ರಮಾಣಕ್ಕೂ ಸಿದ್ದನಿದ್ದೇನೆ ಎಂದು ಇಬ್ರಾಹಿಂ ಪಿ ಕುಂಞಗುಡ್ಡೆ  ಪತ್ರಿಕಾ  ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Advertisement
Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಬೆಳ್ಳಾರೆ ಮಸೀದಿಯ ಘಟನೆ : ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಪಿ ಕುಂಞಗುಡ್ಡೆ ಸ್ಪಷ್ಟೀಕರಣ"

Leave a comment

Your email address will not be published.


*