ಬೆಳ್ಳಾರೆ : ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ಶಾಫಿ ಬೆಳ್ಳಾರೆಯವರ ಭಾಷಣಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳು ಬೇಕಾಗಿಲ್ಲ. ಎಲ್ಲಾ ವರ್ಷದಂತೆ ಈ ವರ್ಷವೂ ಭಾಷಣಕ್ಕೆ ಅನುಮತಿ ಕೋರಿ ನನಗೆ ಲಿಖಿತವಾಗಿ ಅರ್ಜಿ ಸಲ್ಲಿಸಿದ್ದರು ಎಂದು ಬೆಳ್ಳಾರೆ ಝಕರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಕೆ. ಎಮ್. ಮಹಮ್ಮದ್ ಹಾಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾಷಣಕ್ಕೆ 17 ಮಂದಿ ಜಮಾಅತ್ ಸದಸ್ಯರಲ್ಲಿ 6 ಮಂದಿಗೆ ಮಾತ್ರವೇ ಆಕ್ಷೇಪವಿದ್ದು ಇತರರ ಬಹುಮತದ ಅಭಿಪ್ರಾಯವನ್ನು ಪರಿಗಣಿಸಿ ಭಾಷಣಕ್ಕೆ ನಾನು ಲಿಖಿತವಾಗಿ ಅನುಮತಿ ನೀಡಿರುತ್ತೇನೆ. ಶಾಫಿ ಬೆಳ್ಳಾರೆಯವರು ನಮ್ಮ ಜಮಾಅತಿನ ಆಡಳಿತ ಮಂಡಳಿ ಸದಸ್ಯರಾಗಿರುತ್ತಾರೆ. ಆದರೆ ಕೆಲವರು
ರಾಜಕೀಯ ಉದ್ದೇಶಕ್ಕಾಗಿ ಅವರು ಪ್ರತಿನಿಧಿಸುವ ಸಂಘಟನೆ ಮತ್ತು ಪಾರ್ಟಿಯನ್ನು ಎಳೆದು ತಂದು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ನಮ್ಮ ಜಮಾಅತಿನಲ್ಲಿ ವಿವಿಧ ಪಾರ್ಟಿ ಮತ್ತು ಸಂಘಟನೆಗೆ ಸೇರಿದವರಿದ್ದು ಅವರೆಲ್ಲರೂ ನಮ್ಮ ಜಮಾಅತಿಗರೇ ಹೊರತು ಅವರು ಪ್ರತಿನಿಧಿಸುವ ಪಾರ್ಟಿ ಹೆಸರಿನಲ್ಲಿ ಗುರುತಿಸಿಕೊಂಡಿರುವುದಲ್ಲ. ಭಾಷಣಕ್ಕೆ ಅನುಮತಿ ನೀಡಿರುವಾಗ ಅದನ್ನು ತಡೆಯಲು ಕೆಲವರು ಯತ್ನಿಸಿದಾಗ ಅಲ್ಲಿ ಸೇರಿದ ಜಮಾಅತಿಗರಾದ
ಎಲ್ಲರೂ (ವಿವಿಧ ಪಾರ್ಟಿ& ಸಂಘಟನೆಗೆ ಸೇರಿದವರಾದ) ಅವರನ್ನು ಮಸೀದಿಯಿಂದ ಹೊರ ಹೋಗುವಂತೆ ಮನವಿ ಮಾಡಿ ಹೊರಕಳುಹಿಸಿ ಶಾಫಿ ಬೆಳ್ಳಾರೆಯವರ ಭಾಷಣ ನಡೆದಿರುತ್ತದೆ. ಹೀಗಾಗಿ ಯಾವುದೇ ಗೊಂದಲಗಳು ಬೇಡ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.