ಬೆಳ್ಳಾರೆ ಸದಾಶಿವ ಶಿಶುಮಂದಿರದ ದಶಮಾನೋತ್ಸವ

Advertisement

ಬೆಳ್ಳಾರೆ: ಜೀವನದಲ್ಲಿ ಬರುವ ಎಲ್ಲಾ ವಿಧದ ಸವಾಲುಗಳನ್ನು ಎದುರಿಸಲು ಸಿದ್ಧನಿರುವವನು ಜಗತ್ತಿನೆಲ್ಲೆಡೆ  ಬದುಕುವ ಸಾಮರ್ಥ್ಯ  ಹೊಂದುವನು ಎಂದು ವಿವೇಕಾನಂದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ| ಎಚ್.ಮಾಧವ ಭಟ್ ಹೇಳಿದರು.

Advertisement

ಅವರು ಬೆಳ್ಳಾರೆ ಶ್ರೀ ಸದಾಶಿವ ಶಿಶುಮಂದಿರದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಂಗಳೂರು ವಿಭಾಗದ ಗೋ ಸೇವಾ ಪ್ರಮುಖ್ ಪುಂಡರೀಕಾಕ್ಷ ಮಾತನಾಡಿ, ಸಮಾಜದೊಂದಿಗೆ ಇರಬೇಕಾದ ಶೈಲಿಯನ್ನು ಕಲಿತೊಕೊಳ್ಳಬೇಕು. ಹಿಂದು ಧರ್ಮದ ಸಂಸ್ಕೃತಿಯನ್ನು ಮಕ್ಕಳಿಗೆ ಪ್ರಥಮವಾಗಿ ಹೇಳಿಕೊಡಲೇಬೇಕು. ಅಂತಹ ಕೆಲಸಗಳನ್ನು ಶಿಶುಮಂದಿರಗಳು ಮಾಡುತ್ತಿರುವು ಶ್ಲಾಘನೀಯ ಎಂದರು.

Advertisement
Advertisement

ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಿ.ಎಸ್ ಚಿದಾನಂದ ರಾವ್ ಪುಸ್ತಕಗಳು ಮನುಷ್ಯನ ನಿಜವಾದ ಮಿತ್ರ. ವಿಷಯಗಳು ಪುಸ್ತಕದ ಮೂಲದಲ್ಲಿದ್ದರೆ ಜನರ ಮನಸ್ಸಿನಲ್ಲಿ ದೀರ್ಘ ಸಮಯ ಉಳಿದಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವೈದಿಕ ಕ್ಷೇತ್ರದಲ್ಲಿ ಸಾಧನೆಗೈದಿರುವ ಚೂಂತಾರು ವೇ|ಮೂ ಶಿವಪ್ರಸಾದ್ ಭಟ್ ಹಾಗೂ ಜಿಲ್ಲಾ ಕೃಷಿ ಪಂಡಿತ ಪುರಸ್ಕೃತ ವಿವೇಕ್ ಆಳ್ವ ಅವರನ್ನು ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾದ ಶಶಿಕಿರಣ್ ಎಂಬವರಿಗೆ ಟ್ರಸ್ಟ್ ವತಿಯಿಂದ ಹನ್ನೊಂದು ಸಾವಿರ ರೂಪಾಯಿಗಳ ಸಹಾಯ ಧನ ವಿತರಿಸಲಾಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ದಶಮಾನೋತ್ಸವ ಸಮಿತಿಯ ಅಧ್ಯಕ್ಷ  ಬಿ.ಸುಬ್ರಹ್ಮಣ್ಯ ಜೋಶಿ ವಹಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್‍ಕುಮಾರ್ ರೈ ಪುಡ್ಕಜೆ, ಶಿಶುಮಂದಿರ ಸಂಚಾಲಕ ಕುರುಂಬುಡೇಲು ಮಹಾಲಿಂಗ ಭಟ್ ಉಪಸ್ಥಿತರಿದ್ದರು. ಕೇಶವಮೂರ್ತಿ ಕಾವಿನಮೂಲೆ ವಂದಿಸಿದರು.  ತೇಜೇಶ್ವರಿ ವಾರ್ಷಿಕ ವರದಿ ವಾಚಿಸಿದರು. ಪ್ರದೀಪ್‍ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಬೆಳ್ಳಾರೆ ಸದಾಶಿವ ಶಿಶುಮಂದಿರದ ದಶಮಾನೋತ್ಸವ"

Leave a comment

Your email address will not be published.


*