ಭೂಕುಸಿತದ ಇಫೆಕ್ಟ್ ಇದು : ಮಳೆ ಬಂದಾಗ ಪಯಸ್ವಿನಿಯಲ್ಲಿ ಕೆಸರು ನೀರಿನ ಆತಂಕ

Advertisement

ಸುಳ್ಯ: ಸಣ್ಣ ಮಳೆ ಬಂದಾಗ ಪಯಸ್ವಿನಿ ನದಿಯಲ್ಲಿ ಕೆಸರು ನೀರು ಹರಿಯುತ್ತಿದೆ. ಇದು ಈಗ ನದಿ ಪಾತ್ರದ ಜನರಿಗೆ ಆತಂಕಕ್ಕೆ ಕಾರಣವಾಗಿದೆ.
ಕಳೆದ ಮಳೆಗಾಲದ ಅವಧಿಯಲ್ಲಿ ಸಂಪಾಜೆ , ಮಡಿಕೇರಿ ಭಾಗದಲ್ಲಿ ಭೂಕುಸಿತದ ಪರಿಣಾಮವಾಗಿ ಸಂಪಾಜೆ, ಊರುಬೈಲು, ಚೆಂಬು, ಸಂಪಾಜೆ ಗ್ರಾಮಗಳಲ್ಲಿ ಪಯಸ್ವಿನಿ ನದಿಯ ಸ್ವರೂಪದಲ್ಲೇ ಬದಲಾವಣೆ ಉಂಟಾಗಿದೆ. ಇದೀಗ ಬೇಸಿಗೆಯಲ್ಲಿ ಸುರಿದ ಮಳೆಯಲ್ಲಿಯೇ ನೀರಿನ ಜೊತೆಯಲ್ಲಿ ಕೆಸರು, ಮರಳು, ಮಣ್ಣು ಹರಿದು ಬರುತಿದೆ. ಇದರಿಂದ ನೀರು ಕೃಷಿಗೆ ನೀರು ಹಾಯಿಸಲು ನದಿಯಲ್ಲಿ ಅಲ್ಲಲ್ಲಿ ಕೃಷಿಕರು ತೋಡಿದ ಹೊಂಡಗಳು ಮುಚ್ಚಿ ಹೋಗುತಿದೆ. ಈ ಹೊಂಡಗಳಲ್ಲಿ ಪಂಪ್ ಇರಿಸಿ ನೀರು ಪಂಪ್ ಮಾಡಿ ಕೃಷಿಗೆ ನೀರು ಹಾಯಿಸುತ್ತಿದ್ದರು. ಆದರೆ ಕೆಸರು ಮಣ್ಣು ಬರುವ ಕಾರಣ ಈ ಹೊಂಡಗಳು ದಿನಂಪ್ರತಿ ಮುಚ್ಚಿ ಹೋಗಿ ಪಂಪ್‍ಗಳು ಕೆಸರಲ್ಲಿ ಮುಳುಗುತ್ತಿದೆ. ಪ್ರತಿ ದಿನ ಹೊಂಡ ತೋಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಹರಿವು ಹೆಚ್ಚಾದರೂ ಕೆಸರು ನೀರು ಬರುವುದು ಸಮಸ್ಯೆ ಸೃಷ್ಠಿಸುತಿದೆ ಎನ್ನುತ್ತಾರೆ ಕೃಷಿಕರು. ಇನ್ನು ನದಿಯಲ್ಲಿ ಒಂದು ಬದಿಯಲ್ಲಿ ಹರಿಯುತ್ತಿದ್ದ ನೀರು ಮರಳು, ಮಣ್ಣು ತುಂಬಿ ದಿನ ಕಳೆದಂತೆ ಹರಿವಿನ ದಿಕ್ಕನ್ನು ಮತ್ತೊಂದೆಡೆ ಬದಲಿಸಿ ನದಿಯ ಸ್ವರೂಪವೇ ಬದಲಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಎರಡನೇ ಮೊಣ್ಣಂಗೇರಿ, ಜೋಡುಪಾಲದಲ್ಲಿ ಉಂಟಾದ ಪ್ರಳಯ ಮತ್ತು ಭೂಕುಸಿತದಿಂದ ಹರಿದು ಬಂದ ಟನ್ ಗಟ್ಟಲೆ ಕೆಸರು, ಮರಳು, ಮಣ್ಣು ನದಿಯಲ್ಲಿದ್ದ ಬೃಹತ್ ಗಾತ್ರದ ಹೊಂಡಗಳನ್ನು ತುಂಬಿಸಿ ನದಿಯ ಒಡಲನ್ನು ಸಮಾನಾಂತರವಾಗಿಸಿತು. ಇದರಿಂದ ನದಿಯ ಒಡಲಿನ ನೀರಿನ ಶೇಖರಣೆಯೇ ಕಡಿಮೆಯಾಗಿ ಬಸಿಗೆಯಲ್ಲಿ ನೀರಿನ ಕೊರತೆ ಎದುರಾಗಿತ್ತು. ಈ ವರ್ಷವೂ ನದಿಯ ನೀರಿನ ಜೊತೆಗೆ ಮೇಲ್ಭಾಗದಿಂದ ಹರಿದು ಬರುವ ಮಣ್ಣು, ಮರಳು ನದೀಪಾತ್ರವನ್ನು ತುಂಬುವ ಆತಂಕ ಎದುರಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಭೂಕುಸಿತದ ಇಫೆಕ್ಟ್ ಇದು : ಮಳೆ ಬಂದಾಗ ಪಯಸ್ವಿನಿಯಲ್ಲಿ ಕೆಸರು ನೀರಿನ ಆತಂಕ"

Leave a comment

Your email address will not be published.


*