ಯಕ್ಷಗಾನದಿಂದ ಸಮಾಜಕ್ಕೆ ಮನರಂಜನೆ ಜೊತೆಗೆ ಉತ್ತಮ ಸಂದೇಶ: ಈಶ್ವರಪ್ಪ

ಶಿವಮೊಗ್ಗ: ಯಕ್ಷಗಾನದಿಂದ ಸಮಾಜಕ್ಕೆ ಮನರಂಜನೆ ಜೊತೆಗೆ ಉತ್ತಮ ಸಂದೇಶಗಳು ತಲುಪುತ್ತವೆ ಎಂದು ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ಯಕ್ಷಗಾನ ಅಕಾಡೆಮಿ ವತಿಯಿಂದ 2017ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಸಿರಿ, ಗೌರವ ಹಾಗೂ ಪುಸ್ತಕ ಪ್ರಶಸ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಕೆ.ಎಸ್ ಈಶ್ವರಪ್ಪ, ಕಲೆ ಮತ್ತು ಸಾಹಿತ್ಯ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನ ಕಾಪಾಡುವುದಲ್ಲದೆ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹಿರಿಯ ಕಲಾವಿದರನ್ನ ನೋಡಿ ತಿಳಿದುಕೊಳ್ಳಬೇಕಾದ ಅಂಶ ಎಂದರು. ಯಕ್ಷಗಾನ ಅಕಾಡೆಮಿಗೆ ಬೇಕಾಗುವಂತಹ ಸಹಕಾರವನ್ನ ಸರ್ಕಾರದಿಂದ ಒದಗಿಸಲು ನಾನು ಬದ್ಧನಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

Advertisement

ನಂತರ ಮಾತನಾಡಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ ಹೆಗಡೆ, ಯಕ್ಷರಂಗ ಒಂದು ವಿಶಾಲ ಪ್ರಪಂಚ ಅಲ್ಲಿನ ಮಹಾ ಕಲಾವಿದರುಗಳಿಗೆ ಒಂದು ಪ್ರಶಸ್ತಿ ಸಾಕಾಗುವುದಿಲ್ಲ ಅದನ್ನು ವಿಸ್ತರಿಸುವ ಸಲುವಾಗಿ ಸರ್ಕಾರದಿಂದ ಅನುಮತಿ ಪಡೆದು ಹೆಚ್ಚಿನ ಗೌರವ ಮತ್ತು ಪುಸ್ತಕ ಪ್ರಶಸ್ತಿ ನೀಡಲಾಗುತ್ತಿರುವುದರಿಂದ 2017ನೇ ಸಾಲಿನ ಪ್ರಶಸ್ತಿ ಸ್ವಲ್ಪ ತಡವಾಗಿ ನೀಡಲಾಗುತ್ತಿದೆ ಎಂದರು. ಇಂತಹ ಕಲಾವಿದರನ್ನು ಸನ್ಮಾನಿಸುವುದು ನಮ್ಮೆಲ್ಲರ ಹೆಮ್ಮೆ ಎಂದು ಹೆಗಡೆ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಬಲಿಪ ನಾರಾಯಣ ಭಾಗವತರಿಗೆ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿಯನ್ನ ಶಂಕರ್ ಭಾಗವತ್, ಬರೆ ಕೇಶವ ಭಟ್, ಹೆಚ್. ಶ್ರೀಧರ ಹಂದೆ ಕೋಟ, ಎ.ಎಂ ಶಿವಶಂಕರಯ್ಯ, ಕರಿಯಣ್ಣ ಅವರಿಗೆ ನೀಡಲಾಯಿತು.

Advertisement

ಯಕ್ಷಸಿರಿ ಪ್ರಶಸ್ತಿಯನ್ನ ಗಜಾನನ ಗಣಪತಿ ಭಟ್ ಹೊಸ್ತೋಟ, ಮೋಹನ್ ಶೆಟ್ಟಿಗಾರ್, ಪೂಕಳ ಲಕ್ಷ್ಮೀನಾರಾಯಣ ಭಟ್, ಜಮದಗ್ನಿ ಶೀನಾ ನಾಯ್ಕ್, ಜಂಬೂರು ರಾಮಚಂದ್ರ ಶಾನುಭಾಗ್,ಮಹದೇವ ಈಶ್ವರ ಹೆಗಡೆ, ಎ.ಎಸ್ ಲಕ್ಷ್ಮಣಯ್ಯ, ಹರಿದಾಸ್ ನೀವಣೆ ಗಣೇಶ ಭಟ್ಟ, ಎಲ್ ಶಂಕರಪ್ಪ, ಟಿ. ಎಸ್. ರವೀಂದ್ರ ಹಾಗೂ ಪುಸ್ತಕ ಬಹುಮಾನವನ್ನು ಬಲಿಪ ನಾರಾಯಣ ಭಾಗವತ್ ಮತ್ತು ಜಿ. ಎಸ್ ಭಟ್ ಇವರಿಗೆ ಪ್ರಧಾನ ಮಾಡಲಾಯಿತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಯಕ್ಷಗಾನದಿಂದ ಸಮಾಜಕ್ಕೆ ಮನರಂಜನೆ ಜೊತೆಗೆ ಉತ್ತಮ ಸಂದೇಶ: ಈಶ್ವರಪ್ಪ"

Leave a comment

Your email address will not be published.


*