ವಿದ್ಯುತ್ ಬಳಕೆದಾರರ ವೇದಿಕೆ ಹೋರಾಟ : ಮಾಡಾವು 110 ಕೆವಿ ಸಬ್ ಸ್ಟೇಶನ್ ಕಾಮಗಾರಿಗೆ ಇನ್ನಷ್ಟು ವೇಗ

December 3, 2019
7:33 PM

ಬೆಳ್ಳಾರೆ: ಮಾಡಾವು 110 ಕೆವಿ ಸಬ್ ಸ್ಟೇಶನ್ ಕಾಮಗಾರಿಗೆ ಇನ್ನಷ್ಟು ವೇಗ ದೊರೆತಿದೆ. ಒಟ್ಟು 115 ವಿದ್ಯುತ್  ಟವರುಗಳಲ್ಲಿ  ಕೊನೆಯ ಒಂದು ಟವರ್ ಕಾಮಗಾರಿಗೆ ಇದ್ದ ಅಡ್ಡಿ ನಿವಾರಣೆಯಾಗಿದ್ದು ಮಂಗಳವಾರ ಕಾಮಗಾರಿ ಆರಂಭವಾಗಿದೆ. ಈ ಮೂಲಕ ಬಳಕೆದಾರರ ವೇದಿಕೆಯ ಹೋರಾಟ ಬಹುತೇಕ ಯಶಸ್ಸು ಕಂಡಿದೆ.

Advertisement

ಸುಳ್ಯ,ಕಡಬ ಮತ್ತು ಭಾಗಶ: ಪುತ್ತೂರು ತಾಲೂಕುಗಳ ವಿದ್ಯುತ್ ಸರಬರಾಜು ಸಮಸ್ಯೆಗೆ ಏಕೈಕ ಪರಿಹಾರವೆಂದು ಹೇಳಲಾಗುತ್ತಿದ್ದ ಪುತ್ತೂರು ತಾಲೂಕು ಮಾಡಾವಿನಲ್ಲಿ ಪ್ರಸ್ಥಾವಿತ 110 ಕೆ.ವಿ. ವಿದ್ಯುತ್ ಕೇಂದ್ರ 14 ವರ್ಷದ ಹಿಂದೆ ಇಲಾಖೆ ಕೈಗೆತ್ತಿಕೊಂಡಿದ್ದರೂ ಹಲವಾರು ಅಡ್ಡಿಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ  ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹೂಡಲ್ಪಟ್ಟಿದ್ದ ಕೆಲವು ಮೊಕದ್ದಮೆಗಳ ನೆಪವೊಡ್ಡಿ ಕಾಮಗಾರಿಗೆ ಅಡ್ಡಿಯಾಗಿದ್ದವು. ಈ ಅಡ್ಡಿಗಳ ನಿವಾರಣೆಗೆ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಪ್ರತೀ ಬಾರಿಯ ಪ್ರಗತಿ ಪರಿಶೀಲನೆಯಲ್ಲೂ ಕೆಪಿಟಿಸಿಎಲ್ ಕಾಮಗಾರಿ ಪ್ರಗತಿಯಲ್ಲಿದೆ ಸದ್ಯದಲ್ಲೇ ಪೂರ್ತಿಯಾಗುತ್ತದೆ ಎಂದು ಹೇಳುತ್ತಲೇ ಇತ್ತು.

ಆದರೆ ಬೆಳ್ಳಾರೆ  ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಈ ಬಗ್ಗೆ ಹೋರಾಟ ಆರಂಭಿಸಿತ್ತು.  ವಿಳಂಬದಿಂದ 3 ತಾಲೂಕುಗಳಿಗೆ ಆಗುವ ತೊಂದರೆಗಳ ಬಗ್ಗೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಮನವರಿಕೆ ಮಾಡಿ ತ್ವರಿತ ತೀರ್ಮಾನಕ್ಕೆ ಆದ ನಿರ್ದೇಶನಗಳಂತೆ ಎಲ್ಲಾ ಮೊಕದ್ದಮೆಗಳು ತ್ವರಿತ ತೀರ್ಮಾನವಾಗಿ ಕೊನೆಯ ಆರ್ಯಾಪು ಗ್ರಾಮದ ಕೈಕಾರ ಎಂಬಲ್ಲಿನ ರಿಟ್ ಪಿಟಿಶನ್ ಕೂಡಾ ಪರಿಹಾರ ನೀಡುವ ನಿರ್ದೇಶನದಂತೆ ನ.6 ರಂದು ಆದೇಶವಾಗಿತ್ತು. ಆದರೆ ಕಾಮಗಾರಿ ಆರಂಭಿಸಲು ನಿರ್ದೇಶನಗಳ ಪಾಲನೆಯಾಗಬೇಕಿತ್ತು. ಇದರಿಂದ ಆಗುವ ಸುಧೀರ್ಘ ವಿಳಂಬವನ್ನು ತಪ್ಪಿಸುವರೇ ರಿಟ್ ಅರ್ಜಿದಾರ  ಮುರಳೀಧರ ಶ್ಯಾನುಭೋಗರನ್ನು ಬಳಕೆದಾರರ ವೇದಿಕೆಯ ಸಮಿತಿಯ ಸಂಚಾಲಕ ಜಯಪ್ರಸಾದ್   ಜೋಶಿಯವರು ಸಂಪರ್ಕಿಸಿ ಮಾತುಕತೆ ನಡೆಸಿ ಮನವೊಲಿಸಿದ್ದರು.

ಜೊತೆಗೆ ಬಳಕೆದಾರರ ವೇದಿಕೆಯ ಜಯಪ್ರಸಾದ್  ಜೋಶಿಯವರು ಕೆ.ಪಿ.ಟಿ.ಸಿ.ಎಲ್ ನ್ನು ಸಂಪರ್ಕಿಸಿ ಸೌಹಾರ್ದ ಮಾತುಕತೆಗೆ ಮೇಲಾಧಿಕಾರಿಗಳ ನಿರ್ದೇಶನಗಳಾಗಿತ್ತು. ಅದರಂತೆ ಡಿ.2 ರಂದು ಪುತ್ತೂರು ಕೆ.ಪಿ.ಟಿ.ಸಿ.ಎಲ್ ಕಚೇರಿಯಲ್ಲಿ ಮಾತುಕತೆಯಾಗಿದ್ದು ಕೆ.ಪಿ.ಟಿ.ಸಿ.ಎಲ್ ಪರಿಹಾರ ಧನದ ಒಂದು ಅಂಶವನ್ನು ಅಂದೇ ನೀಡಿದ್ದು ಇನ್ನು ನಿಯಮಾನುಸಾರದ ಪರಮಾವಧಿ ಪರಿಹಾರ ಮತ್ತು ಪರಸ್ಪರ ಸಹಕಾರದ ಬಗ್ಗೆ ಒಮ್ಮತದ ತೀರ್ಮಾನವಾಯಿತು. ಅದರಂತೆ ಶ್ಯಾನುಭೋಗರು ತಕ್ಷಣದಿಂದ ಅವರ ಜಮೀನಿನಲ್ಲಿ ಕಾಮಗಾರಿ ಆರಂಭಿಸಲು ಅನುಮತಿ ನೀಡಿದರು. ಇದರಿಂದ ಕಾಮಗಾರಿಗೆ ಇರುವ ಅಡ್ಡಿ ಬಹುತೇಕ ನಿವಾರಣೆಯಾಗಿದೆ. ಇದರಿಂದ ಒಟ್ಟು 115 ಟವರುಗಳಲ್ಲಿ ಇಡೀ ಕಾಮಗಾರಿಗೆ ಅಡ್ದಿಯಾಗಿದ್ದ ಕೊನೆಯ ಒಂದು ಟವರ್ ಕಾಮಗಾರಿ ಕೂಡಾ ಡಿ.3 ರಂದು  ಆರಂಭವಾಗಿದೆ. ಟವರ್ ಗಟ್ಟಿಯಾದ ಕೂಡಲೇ ಲೈನ್ ಎಳೆಯುವ ಕಾಮಗಾರಿ ನಿಯೋಜಿತವಾಗಿದೆ.  ಕಾಮಗಾರಿ ಅಂತಿಮವಾಗಿ ಈ ಕೇಂದ್ರದಿಂದ ವಿದ್ಯುತ್ ಗ್ರಾಹಕರಿಗೆ ಲಭಿಸಲಿದೆ.

ಆರ್ಯಾಪು ಗ್ರಾಮದಲ್ಲಿ ಮಾಡಾವು 110 ವಿದ್ಯುತ್ ಕೇಂದ್ರಕ್ಕಾಗಿ ಟವರ್ ಕಾಮಗಾರಿಗೆ ಇದ್ದ ವಿವಾದವನ್ನು ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಸಂಚಾಲಕ ಜಯಪ್ರಸಾದ್ ಜೋಶಿ ಬೆಳ್ಳಾರೆ ಇವರು ಸೌಹಾರ್ದ ಮಾತುಕತೆಯಲ್ಲಿ ರಿಟ್ ಅರ್ಜಿದಾರ ಮುರಳೀಧರ ಶ್ಯಾನುಭೋಗ, ಕೆ.ಪಿ.ಟಿ.ಸಿ.ಎಲ್ ನಿಯೋಜನೆಯಂತೆ ಅಧೀಕ್ಷಕ ಅಭಿಯಂತರ  ರವಿಕಾಂತ ಕಾಮತ್ , ಕಾರ್ಯ ನಿರ್ವಾಹಕ ಅಭಿಯಂತರ ಗಂಗಾಧರ್ , ಕೆ.ಪಿ.ಟಿ.ಸಿ.ಎಲ್ ಹಿರಿಯ ಕಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಇತ್ಯರ್ಥಗೊಳಿಸಲಾಯಿತು.

ಮಾಡಾವು 110 ಕೆವಿ ಸಬ್ ಸ್ಟೇಶನ್ ಕಾಮಗಾರಿ ವೇಗಕ್ಕೆ  ಕಾರಣೀಭೂತರಾದ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ, ತ್ವರಿತ ಕಾಮಗಾರಿಗೆ ಅನುಮತಿಸಿದ ಮುರಳೀಧರ ಶ್ಯಾನುಭೋಗರಿಗೆ, ಸಮರೋಪಾದಿಯಲ್ಲಿ ಕಾಮಗಾರಿ ಆರಂಭಿಸಿದ ಕೆ.ಪಿ.ಟಿ.ಸಿ.ಎಲ್ ಹಾಗೂ ಮೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಬಳಕೆದಾರರ ಕ್ರಿಯಾ ಸಮಿತಿ ಸಂಚಾಲಕ ಜಯಪ್ರಸಾದ್ ಜೋಶಿ ಬೆಳ್ಳಾರೆ ಇವರು ಬಳಕೆದಾರರ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |
May 12, 2025
11:31 AM
by: ದ ರೂರಲ್ ಮಿರರ್.ಕಾಂ
ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |
May 12, 2025
7:32 AM
by: ದ ರೂರಲ್ ಮಿರರ್.ಕಾಂ
ಕದನ ವಿರಾಮ ಬಳಿಕ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ | ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ
May 11, 2025
10:11 PM
by: The Rural Mirror ಸುದ್ದಿಜಾಲ
ಮುಳಿಯ ಕೃಷಿಗೋಷ್ಟಿ | ಕೃಷಿಕರೇ ಕೃಷಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಹೇಗೆ..?
May 11, 2025
9:54 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group