ಸಹಕಾರಿ ಸಪ್ತಾಹ : ಸಹಕಾರಿ ಕ್ಷೇತ್ರದ ಅರಿವು : ಭಾಗ-2

November 17, 2019
11:56 AM

ಸಂಸ್ಥೆಯಲ್ಲಿರುವ ಸಾಲ, ಠೇವಣಾತಿ ಚಟುವಟಿಕೆಗಳಿಲ್ಲದೇ ಇನ್ನಿತರ ಎಲ್ಲಾ ವ್ಯವಹಾರಗಳಲ್ಲಿ ಸದಸ್ಯ ತೊಡಗಿಸಿಕೊಳ್ಳುವುದು ಆತನ ಬದ್ಧತೆ.

Advertisement

ಕೆಲವೊಂದು ಸದಸ್ಯರಿಗೆ ಸಂಘದ ಚೌಕಟ್ಟಿನ ಬಗ್ಗೆ ಪರಿಚಯವಾಗಲಿ, ಮಹಾಸಭೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ಆಗಲಿ ತಿಳುವಳಿಕೆ ಇರುವುದಿಲ್ಲ. ಸಂಘದ ಬೈಲಾಗಳನ್ನು ಸದಸ್ಯರಿಗೆ ಪಡಕೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದು, ಅದನ್ನು ಪಡೆದು ಅಧ್ಯಯನ ನಡೆಸಬೇಕು. ಹಲವು ವಿಷಯಗಳು ಬೈಲಾ ಅಧ್ಯಯನದಿಂದ ಮನನವಾಗುತ್ತದೆ. ಅವಶ್ಯಕ
ಎಂದು ಕಂಡುಬಂದಲ್ಲಿ ಸಹಕಾರಿ ತಜ್ಞರ ಮೂಲಕ ಬೈಲಾ ಬಗ್ಗೆ ಆಗಲೀ ಸಹಕಾರಿ ಕಾನೂನು, ನಿಯಮ ಬಗ್ಗೆಯಾಗಲೀ ಸದಸ್ಯರು ಚರ್ಚಿಸುವ ರೂಢಿ ರೂಪಿಸಿಕೊಳ್ಳಬೇಕು.
ಸಹಕಾರಿ ಸಂಘಗಳ ಕಾಯ್ದೆ, ನಿಯಮ, ಉಪವಿಧಿಗಳಿಗೊಳಪಟ್ಟು ಸಂಘದಲ್ಲಿ ಅಂತಿಮ ಅಧಿಕಾರವು ಸರ್ವ ಸದಸ್ಯರದ್ದಾಗಿರುತ್ತದೆ. ಕಾಯ್ದೆಯಲ್ಲಿ ತಿಳಿಸಿದಂತೆ ಸದಸ್ಯರ ಮಹಾಸಭೆಯನ್ನು ಜರಗಿಸುವ ಪ್ರಕ್ರಿಯೆಗಳು ಈ ರೀತಿ ಇರುತ್ತದೆ.

ಸರ್ವ ಸದಸ್ಯರ ಸಭೆ (ಮಹಾಸಭೆ)ಯನ್ನು ವರ್ಷಾಂತ್ಯವಾಗಿ (ಮಾರ್ಚ್ 31) ಆರು ತಿಂಗಳೊಳಗೆ (ಸೆಪ್ಟೆಂಬರ್ 25ರೊಳಗೆ) ಕಡ್ಡಾಯವಾಗಿ ಜರಗಿಸತಕ್ಕದ್ದು.
ವರ್ಷಾಂತ್ಯದ ಬಳಿಕ ಮೇ ಅಂತ್ಯದೊಳಗೆ ಸಂಘದ ವಾರ್ಷಿಕ ಲೆಕ್ಕಪತ್ರಗಳನ್ನು ಅಂತಿಮಗೊಳಿಸಿ ನಿರ್ಣಯಪಡಿಸಿದ ಲೆಕ್ಕ ಪರಿಶೋಧಕರಿಗೆ ಪರಿಶೋಧನೆಗಾಗಿ ಒಪ್ಪಿಸತಕ್ಕದ್ದು, ಲೆಕ್ಕ ಪರಿಶೋಧಕರು ಪರಿಶೋಧನೆ ನಡೆಸಿ ತಮ್ಮ ಅಂತಿಮ ವರದಿಯನ್ನು ಅಗೋಸ್ತು ಅಂತ್ಯದೊಳಗೆ ಸಂಘಕ್ಕೆ ಸಲ್ಲಿಸತಕ್ಕದ್ದು, ಪರಿಶೋಧಿತ ಲೆಕ್ಕ ಪತ್ರಗಳು ಕೂಡಾ ವಾರ್ಷಿಕ
ಮಹಾಸಭೆಯ ಕಾರ್ಯಸೂಚಿಯ ಭಾಗವಾಗಿರುತ್ತದೆ. ಆಡಳಿತ ಮಂಡಳಿಯು ವಾರ್ಷಿಕ ಮಹಾಸಭೆ ಜರುಗಿಸಲು ಅವಕಾಶವಿರುವ ಅಂತಿಮ ದಿನಾಂಕಕ್ಕೆ 3 ತಿಂಗಳ ಮುಂಚಿತವಾಗಿ ಮಹಾಸಭೆ ಜರುಗಿಸುವ ದಿನಾಂಕವನ್ನು ನಿರ್ಣಯಿಸಬೇಕು. ವಾರ್ಷಿಕ ಮಹಾಸಭೆಯಲ್ಲಿ ಕಾಯ್ದೆ ಕಲಂ 27ರಲ್ಲಿ ಹೇಳಿದ ಕಾರ್ಯಸೂಚಿಗಳನ್ನು ಚರ್ಚಿಸಿ, ವಿಮರ್ಶಿಸಿ ನಿರ್ಣಯ ಕೈಗೊಳ್ಳುವುದು.

ಒಂದು ಸಹಕಾರಿ ಸಂಘದಲ್ಲಿ ವಾರ್ಷಿಕ ಮಹಾಸಭೆಯು ಮಹತ್ವಪೂರ್ಣ ಅಂತಿಮ ಅಧಿಕಾರ ಹೊಂದಿರುವ ಸಭೆಯಾಗಿರುವುದರಿಂದ ಸದಸ್ಯರು ಇದರಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಂಘದ ವ್ಯವಹಾರದ ಆಗು ಹೋಗುಗಳನ್ನು ಮನನ ಮಾಡಿಕೊಳ್ಳುವ ಅನಿವಾರ್ಯತೆ ಸಂಘದ ಆರೋಗ್ಯಕರ ಬೆಳವಣಿಗೆ ದೃಷ್ಟಿಯಿಂದ ತೀರಾ ಅಗತ್ಯವಿದೆ. ಸಾಮಾನ್ಯವಾಗಿ
ಸೆಪ್ಟೆಂಬರ ತಿಂಗಳು ಸಹಕಾರಿ ಸಂಘಗಳ ಮಹಾಸಭೆಯ ದಿನಗಳು, ಸಾಮಾನ್ಯ ಸದಸ್ಯರು ಸಂಘದಿಂದ ದೊರೆಯುವ ಸಾಲ ಸೌಲಭ್ಯಗಳ ಕಡೆ ಮಾತ್ರ ಗಮನ ಹರಿಸುತ್ತಾರೆ ಹೊರತು ಮಹಾಸಭೆಯ ಮಹತ್ವ ಅದರಲ್ಲಿ ಚರ್ಚಿಸುವ, ಪಾಲ್ಗೊಳ್ಳುವ ಅಗತ್ಯತೆಯ ಅರಿವು ಹೊಂದಿರುವುದಿಲ್ಲ.

(…. ಮುಂದುವರಿಯುತ್ತದೆ…)

ಭಾಗ-1 : https://theruralmirror.com/?p=15514

ಬರಹ :

ರಾಧಾಕೃಷ್ಣ ಕೋಟೆ, ಹಿರಿಯ ಸಹಕಾರಿ
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು
February 20, 2026
7:20 AM
by: ಡಾ.ಚಂದ್ರಶೇಖರ ದಾಮ್ಲೆ
ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್
February 15, 2026
6:32 AM
by: ದಿವ್ಯ ಮಹೇಶ್
ಜೀವನಪ್ರೀತಿ
February 15, 2026
6:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror