ಸಾಲ ಮನ್ನಾದಿಂದ 14,113 ಜನ ರೈತರಿಗೆ ಪ್ರಯೋಜನ : ಪಿ.ಸಿ.ಜಯರಾಮ

Advertisement

ಸುಳ್ಯ: ಕೃಷಿಕರು ಸಹಕಾರಿ ಸಂಘಗಳಿಂದ ಪಡೆದ ಸಾಲದಲ್ಲಿ 1 ಲಕ್ಷ ರೂ. ಮನ್ನಾ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ಸಾಲ ಮನ್ನಾ ಘೋಷಿಸಿತ್ತು. ಇದರಿಂದ ತಾಲೂಕಿನ ವಿವಿಧ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಸಾಲ ಪಡೆದ 14,113 ಜನ ರೈತರ 118 ಕೋಟಿ ಸಾಲ ಮನ್ನಾ ಆಗಲಿದೆ. ಈಗಾಗಲೇ 3,292 ರೈತರ 25 ಕೋ.18 ಲಕ್ಷ ರೂ. ಸಾಲ ಮೊತ್ತ ನೆಪ್ಟ್ ಮೂಲಕ ರೈತರ ರೂಪೇ ಖಾತೆಗೆ ವರ್ಗಾವಣೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ, ಮಡಪ್ಪಾಡಿ ಪ್ರಾಥಮಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ.
ಸುಳ್ಯ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾದ ಹಣ ರೈತರ ಖಾತೆಗೆ ಬಂದಿದ್ದರೂ ಕೆಲವು ಸಹಕಾರಿ ಸಂಘಗಳ ವ್ಯಾಪ್ತಿಯಲ್ಲಿ ಸಾಲ ಮನ್ನಾ ಸೌಲಭ್ಯ ಬಂದಿಲ್ಲ ಎಂದು ಬಿಜೆಪಿ ಸುಳ್ಳು ಮಾಹಿತಿ ಮೂಲಕ ಅಪಪ್ರಚಾರ ನಡೆಸುತ್ತಿದೆ ಎಂದು ಅವರು ಟೀಕಿಸಿದರು.
ಹಿಂದಿನ ಸಿದ್ಧರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರವು ಕೂಡಾ ಕೃಷಿಕರ ಪರ ಬಹಳಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಅವಧಿಯಲ್ಲಿ ಅವರು ಎರಡು ಬಾರಿ ಸಾಲ ಮನ್ನಾ ಮಾಡಿದ್ದರು. ಅಧಿಕಾರಕ್ಕೆ ಬಂದ ಪ್ರಥಮ ವರ್ಷದಲ್ಲಿ ಹಿಂದಿನ ಸರಕಾರ ಘೋಷಿಸಿದ ತಲಾ ರೂ.25 ಸಾವಿರ ಸಾಲ ಮನ್ನಾ ವಿತರಿಸಿದ್ದು, ಎರಡನೇ ಬಾರಿಗೆ ತಾಲೂಕಿನ 13,145 ರೈತ ಸದಸ್ಯರ 63 ಕೋಟಿ 15 ಲಕ್ಷ ರೂ ಮನ್ನಾ ಮಾಡಿದ್ದಾರೆ. ಅಲ್ಲದೇ ಅಡಿಕೆ ಕೊಳೆರೋಗಕ್ಕ ಪರಿಹಾರವನ್ನ್ನು ನೀಡಿದ್ದಾರೆ ಎಂದು ವಿವರ ನೀಡಿದರು.
ಕೊಳೆರೋಗ ಪರಿಹಾರ ಧನವು ರೈತರಿಗೆ ಸಿಕ್ಕಿದೆ. ಬಾಕಿ ಉಳಿದವರಿಗೆ ಸಿಗಲಿದೆ. ಗರಿಷ್ಟ 35 ಸಾವಿರ ರೂ. ತನಕ ಪರಿಹಾರ ಸಿಕ್ಕಿದೆ. ಅರ್ಜಿ ಕೊಟ್ಟರೆ ಪರಿಹಾರ ಸಿಗದು ಎಂದು ಬಿಜೆಪಿಯವರು ಕೆಲ ರೈತರನ್ನು ಅರ್ಜಿ ಸಲ್ಲಿಸದಂತೆ ದಿಕ್ಕು ತಪ್ಪಿಸಿದ್ದಾರೆ ಎಂದು ಅವರು ಆರೋಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸಾಲ ಮನ್ನಾದಿಂದ 14,113 ಜನ ರೈತರಿಗೆ ಪ್ರಯೋಜನ : ಪಿ.ಸಿ.ಜಯರಾಮ"

Leave a comment

Your email address will not be published.


*