ಸುಬ್ರಹ್ಮಣ್ಯ ಕಾಲೇಜಿನಲ್ಲಿ ಪೋಷಕ-ವಿದ್ಯಾರ್ಥಿಗಳ ಸಮ್ಮಿಲನ

May 28, 2019
10:14 AM
Advertisement

ಸುಬ್ರಹ್ಮಣ್ಯ: ಕೇವಲ ವಿದ್ಯಾಲಯಕ್ಕೆ ಕಳುಹಿಸಿದರೆ ಪೋಷಕರ ಕರ್ತವ್ಯ ಮುಗಿಯುವುದಿಲ್ಲ ಬದಲಾಗಿ ಮಕ್ಕಳ ಬಗ್ಗೆ ನಿರಂತರ ಆಸ್ಥೆ ವಹಿಸಬೇಕು.ಅಲ್ಲದೆ ಮಕ್ಕಳಿಗೆ ಶಿಸ್ತಿನ ಅರಿವು ಸದಾ ಅನುರಣಿತವಾಗುವಂತೆ ಮಾಡಬೇಕು ಹಾಗಾದಾಗ ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

Advertisement

ಅವರು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತಕ್ಕೊಳಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ  ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಪೋಷಕರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕುಕ್ಕೆ ದೇವಳದ ವತಿಯಿಂದ ಕಾಲೇಜಿಗೆ ಅಗತ್ಯವಾದ ಎಲ್ಲಾ ಸವಲತ್ತುಗಳನ್ನು ನೀಡಲಾಗಿದೆ.ಅಲ್ಲದೆ ಶ್ರೀ ದೇವರ ವರಪ್ರಸಾದದಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಕಾಲೇಜಿನಲ್ಲಿ ನೆರವೇರಲಿದೆ.ಅಲ್ಲದೆ ವಿದ್ಯಾರ್ಥಿಗಳ ವಿದ್ಯಾರ್ಜನೆ ಇನ್ನಷ್ಟು ಆವಶ್ಯಕತೆಗಳನ್ನು ಆಡಳಿತ ಮಂಡಳಿ ಒದಗಿಸಲಿದೆ ಎಂದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲೋಕೇಶ್ವರ ಡಿ.ಆರ್ ಮುಖ್ಯಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ, ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್,ಹಿರಿಯ ಉಪನ್ಯಾಸಕರಾದ ಎ.ಆರ್.ಮುಲ್ಲಾ, ಸೋಮಶೇಖರ ನಾಯಕ್, ಜಯಶ್ರೀ.ವಿ.ದಂಬೆಕೋಡಿ, ಮೋಹನ್ ಗೌಡ ಸೇರಿದಂತೆ ಉಪನ್ಯಾಸಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement

ಸಮಾರಂಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ನುಡಿ ಹರೆಯವನ್ನು ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಪೋಷಕರು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಸಮಾಗಮ ನೆರವೇರಿತು.ನೂತನವಾಗಿ ಪ್ರಥಮ ಪಿಯುಸಿಗೆ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಕಾಲೇಜಿನ ಬಗ್ಗೆ, ಇಲ್ಲಿನ ಸವಲತ್ತುಗಳ ಬಗ್ಗೆ, ಅಳವಡಿಸಿಕೊಳ್ಳಬೇಕಾದ ಶಿಸ್ತಿನ ಬಗ್ಗೆ ಮಾಹಿತಿ ನೀಡಲಾಯಿತು.

ಉಪನ್ಯಾಸಕ ಮೋಹನ ಗೌಡ ಸ್ವಾಗತಿಸಿದರು. ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್ ಪ್ರಸ್ತಾಪಿಸಿದರು.ಉಪನ್ಯಾಸಕಿ ಜ್ಯೋತಿ.ಪಿ.ರೈ ವಂದಿಸಿದರು. ಉಪನ್ಯಾಸಕಿ ಸುಧಾ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಇಂದು ರಾಷ್ಟ್ರೀಯ ಪಕ್ಷಿ ದಿನ ಹಾಗೂ ಪಕ್ಷಿತಜ್ಞ ಸಲೀಂ ಅಲಿ ಯವರ ಜನ್ಮದಿನ
November 12, 2023
3:09 PM
by: The Rural Mirror ಸುದ್ದಿಜಾಲ
#NalinKumarKateel | ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ – ನಳಿನ್‌ ಕುಮಾರ್‌ ಸ್ಪಷ್ಟನೆ | ಸೋಲಿನ ಕಾರಣಗಳನ್ನು ಹಿರಿಯರಿಗೆ ಹೇಳಿದ್ದೇನೆ |
June 24, 2023
1:16 PM
by: ದ ರೂರಲ್ ಮಿರರ್.ಕಾಂ
ಇನ್ನೂ ಬಾರದ ವರುಣ | ಮಳೆಗಾಗಿ ನಾಳೆ KRSನಲ್ಲಿ ವಿಶೇಷ ಹೋಮ | ವರುಣನ ಕೃಪೆಗೆ ಕಾದು ಕುಳಿತ ರೈತ |
June 12, 2023
11:29 AM
by: The Rural Mirror ಸುದ್ದಿಜಾಲ
ವೆದರ್‌ ಮಿರರ್‌ | 07-06-2023 | ವಿವಿದೆಡೆ ತುಂತುರು ಮಳೆ | ಜೂ.13 ಚಂಡಮಾರುತ ಪ್ರಭಾವದ ಬಳಿಕವೇ ಮುಂಗಾರು ಚುರುಕು |
June 7, 2023
11:14 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror