ಸುಳ್ಯದ ರೈಲ್ವೇ ಪ್ರಯಾಣಿಕನ ಟ್ವಿಟ್ಟರ್ ದೂರಿಗೆ ತಕ್ಷಣ ಸ್ಪಂದಿಸಿದ ರೈಲ್ವೇ ಇಲಾಖೆ

Advertisement
Advertisement
Advertisement

ಸುಳ್ಯ: ಮುಂಬಯಿಯಿಂದ ರೈಲ್ವೇ ಪ್ರಯಾಣ ಬೆಳೆಸಿದ ಸುಳ್ಯದ ಅವ್ಯಕ್ತ ಅವರ ಟ್ವಿಟ್ಟರ್ ದೂರಿಗೆ ರೈಲ್ವೇ ಇಲಾಖೆ ತಕ್ಷಣವೇ ಸ್ಪಂದಿಸಿ ಕೇವಲ 15 ನಿಮಿಷದಲ್ಲಿ ಪರಿಹಾರ ದೊರಕಿದೆ.

Advertisement

ಅವ್ಯಕ್ತ ಅವರು ಮುಂಬಯಿಯಿಂದ ಸುಳ್ಯದ ನಗರಸಭಾ ಚುನಾವಣೆಗೆ ಮತದಾನಕ್ಕಾಗಿ ನಿನ್ನೆ ರಾತ್ರಿ ರೈಲಿನಲ್ಲಿ  ಹೊರಟಿದ್ದರು. ರೈಲಿನಲ್ಲಿ  ಮುಂಬಯಿಂದ ಏರಿದ ಅವರಿಗೆ ಸರಿಯಾದ ದಿಂಬಿನ ವ್ಯವಸ್ಥೆ ಇದ್ದಿರಲಿಲ್ಲ. ಈ ಬಗ್ಗೆ ವಿಚಾರಣೆಗೂ ಸರಿಯಾದ ಅವಕಾಶ ಇರಲಿಲ್ಲ. ಇದಕ್ಕಾಗಿ ತಕ್ಷಣವೇ   ಟ್ವೀಟ್  ಮೂಲಕ ಪಿಯೂಶ್ ಗೋಯಲ್ ಹಾಗೂ ರೈಲ್ವೇ ಇಲಾಖೆಗೆ ಟ್ಯಾಗ್ ಮಾಡಿ ತಮ್ಮ ಸಮಸ್ಯೆಯನ್ನು  ಹೇಳಿದರು. ಅದಾದ ಮರುಕ್ಷಣವೇ ರೈಲ್ವೇ ಇಲಾಖೆಯಿಂದ  ಅವ್ಯಕ್ತ ಅವರು ಇರುವ ಬೋಗಿ ಹಾಗೂ ವಿವರ ಕೇಳಿ ಮೆಸೇಜ್ ಬಂತು. ಮುಂದೆ 15 ನಿಮಿಷದಲ್ಲಿ ಅವರ ಸಮಸ್ಯೆ ಪರಿಹಾರ ಕಂಡಿತು. ರೈಲ್ವೇ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಪಂದನೆ ನೀಡಿದರು.

Advertisement

ಇದೊಂದೇ ಅಲ್ಲ, ಈ ಹಿಂದೆ ಅವ್ಯಕ್ತ ಅವರ ಲ್ಯಾಪ್ ಟಾಪ್ ರೈಲು ನಿಲ್ದಾಣದಲ್ಲಿ ಕಳವಾಗಿತ್ತು. ಈ ಸಂದಭದಲ್ಲಿ ತಕ್ಷಣವೇ ಟ್ವೀಟ್ ಮಾಡಿದ್ದರು. ಆಗಲೂ ಪಿಯೋಶ್ ಗೋಯಲ್ ಅವರ ಕಚೇರಿಯಿಂದ ಅಧಿಕಾರಿಗಳು ಹಾಗೂ ಸಿಬಂದಿಗಳು  ತಕ್ಷಣವೇ ಸ್ಪಂದನೆ ನೀಡಿ ಸಿಸಿ ಟಿವಿ ದೃಶ್ಯವನ್ನು ಕೂಡಾ ವೀಕ್ಷಣೆ ಮಾಡಿದ್ದರು. ಕಳ್ಳನ ಪತ್ತೆಗೆ ಸತತ ಪ್ರಯತ್ನ ಮಾಡಿದ್ದರು. ಇದೆಲ್ಲಾ ಕೇವಲ ಒಂದು ಟ್ವೀಟ್ ನಿಂದ. ಅದಕ್ಕಿಂತಲೂ ಮಿಗಿಲಾಗಿ ಒಂದು ಟ್ವೀಟ್ ಗೆ ಇಲಾಖೆಗಳು, ಸಚಿವರು ಸ್ಪಂದಿಸುವ ರೀತಿ ಖುಷಿಯಾಗಿದೆ ಎನ್ನುತ್ತಾರೆ ಅವ್ಯಕ್ತ. ಈ ದೇಶದಲ್ಲಿ ಜನಸಾಮಾನ್ಯನ ದೂರಿಗೆ, ಮನವಿಗೆ ಬೆಲೆ ಇದೆ ಎನ್ನುವುದು ಇಲ್ಲಿ  ತಿಳಿಯುತ್ತದೆ. ದೇಶದಲ್ಲಿ ಯಾರೂ ಅನಾಥರಾಗುವುದಿಲ್ಲ, ಎಲ್ಲರೂ ಟ್ವೀಟ್ ಮೂಲಕ ಇಲಾಖೆ ಜೊತೆ ಮಾತನಾಡಬಹುದು ಎಂಬುದಕ್ಕೆ ಇದೊಂದು ಸಾಕ್ಷಿ ಎನ್ನುತ್ತಾರೆ ಅವ್ಯಕ್ತ.

    ಅವ್ಯಕ್ತ  ಸುಳ್ಯದ ಬೀಗ್ರೋಸ್ ಮಾಲಕ. ಆರ್ ಕೆ ಭಟ್ ಸುಳ್ಯ ಅವರ ಪುತ್ರ.

Advertisement
Advertisement

 

Advertisement

 

Advertisement

 

 

Advertisement

 

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸುಳ್ಯದ ರೈಲ್ವೇ ಪ್ರಯಾಣಿಕನ ಟ್ವಿಟ್ಟರ್ ದೂರಿಗೆ ತಕ್ಷಣ ಸ್ಪಂದಿಸಿದ ರೈಲ್ವೇ ಇಲಾಖೆ"

Leave a comment

Your email address will not be published.


*