ಅಚ್ರಪ್ಪಾಡಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಚ್ರಪ್ಪಾಡಿ ಇಲ್ಲಿ ಡಿಸೆಂಬರ್ 15 ರಂದು ಪ್ರತಿಭಾ ದಿನೋತ್ಸವ, ಮೆಟ್ರಿಕ್ ಮೇಳ ಮತ್ತು ಪೋಷಕರಿಗೆ ಹಾಗೂ ಊರವರಿಗೆ ಆಟೋಟ ಸ್ಪರ್ಧೆಗಳು ಹಮ್ಮಿಕೊಳ್ಳಲಾಯಿತು.
ಈ ದಿನ ಎಸ್ ಡಿಎಂಸಿ ಅಧ್ಯಕ್ಷ ಹರೀಶ ಕಡಪಳ ಮತ್ತು ಎಲ್ಲಾ ವಿದ್ಯಾರ್ಥಿಗಳು ಸೇರಿ ಮೆಟ್ರಿಕ್ ಮೇಳ ಮತ್ತು ಆಟೋಟ ಸ್ಪರ್ಧೆಯನ್ನು ಉದ್ಘಾಟಿಸಿದರು. ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿಗಳು ಲಸ್ಸಿ, ಕಲ್ಲಂಗಡಿ ಜ್ಯೂಸು , ವಿವಿಧ ಸಸ್ಯಗಳು , ಹರಿವೆ ಸೊಪ್ಪು, ಬಸಲೆ, ವಿವಿಧ ಹಣ್ಣುಗಳು ಇತ್ಯಾದಿಗಳನ್ನು ಮಾರಾಟಕ್ಕೆ ಇಟ್ಟುಕೊಂಡಿದ್ದರು. ಆಗಮಿಸಿದ ಪೋಷಕರು ಹಾಗೂ ಊರಿನವರು ವಸ್ತುಗಳನ್ನು ಖರೀದಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಗ್ರಾಮ ಪಂಚಾಯತ್ ದೇವಚಳ್ಳ ಅಧ್ಯಕ್ಷ ದಿವಕರ ಮುಂಡೋಡಿ, ಗ್ರಾಮ ಪಂಚಾಯತ್ ಸದಸ್ಯ ಪುಷ್ಪಕರ, ದೇವಚಳ್ಳ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಂತೋಷ್ ಮತ್ತು ಶ್ರೀ ವಿಷ್ಣು ಯುವಕ ಮಂಡಲ ಮಾವಿನಕಟ್ಟೆಯ ಅಧ್ಯಕ್ಷ ಶ್ರೀಕಾಂತ್ ಮಕ್ಕಳ ಮೆಟ್ರಿಕ್ ಮೇಳ ನೋಡಿ ಹಾಗೂ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ಉತ್ತೇಜಿಸಿದರು.
ಸಭಾ ಕಾರ್ಯಕ್ರಮದ ಸಭಾಧ್ಯಕ್ಷರಾಗಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಕರ ಮುಂಡೋಡಿ, ಗ್ರಾಮ ಪಂಚಾಯತ್ ದೇವಚಳ್ಳ ಸದಸ್ಯ ಪುಷ್ಪಕರ, ಎಸ್ ಡಿಎಂಸಿ ಅಧ್ಯಕ್ಷ ಹರೀಶ್ ಕಡಪಳ, ಶಾಲಾ ವಿದ್ಯಾರ್ಥಿ ನಾಯಕಿ ಲಕ್ಷ್ಯ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಂತೋಷ್ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ ಉಪಸ್ಥಿತರಿದ್ದರು. ಎಲ್ಲಾ ಅತಿಥಿಗಳನ್ನು ಕಲಶಗಳೊಂದಿಗೆ ಹೂವು ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಅತಿಥಿಗಳನ್ನು ಶಿಕ್ಷಕಿ ಸವಿತಾ ಸ್ವಾಗತಿಸಿದರು. ಪ್ರಾಸ್ತಾವಿಕ ಭಾಷಣ ಜಯಶ್ರೀ ಪರಶುರಾಮಾ ನೆರೆವೇರಿಸಿದರು . ನಂತರ 2019 ನೇ ಶೈಕ್ಷಣಿಕ ವರ್ಷದ ವರದಿ ವಾಚನ ಶಾಲೆಯ ಮುಖ್ಯೋಪಾಧ್ಯಾಯರು ಶ್ವೇತಾ. ಕೆ ವಾಚಿಸಿದರು. ಕಲಿಕೆ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಿ ಪ್ರೋತ್ಸಾಹಿಸಲಾಯಿತು.
ತದನಂತರ ಶ್ರೀಕಾಂತ್ ಮಾವಿನಕಟ್ಟೆ, ಅವರು ಈ ಶಾಲೆಯಲ್ಲಿ ಕಳೆದ ದಿನಗಳನ್ನು ನೆನೆಯುತ, ಶಾಲೆಯ ಅಭಿವೃದ್ಧಿಗೆ ಸಹಾಯ ಮಾಡುವಂತೆ ತಿಳಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷರು, ದಿವಕರ ಮುಂಡೋಡಿರವರು ತಮ್ಮ ಪಂಚಾಯತಿನಿಂದ ಶಾಲೆಗೆ ಅಗತ್ಯತೆ ಪೂರೈಸುವಲ್ಲಿ ಸಹಾಯ ಮಾಡುವುದಾಗಿ ಹೇಳಿದರು. ಸಂತೋಷ್ C.R.P ಹಂತ ಹಂತದ ಶಾಲೆಯ ಬೆಳವಣಿಗೆ ಬಗ್ಗೆ ಹಾಗೂ ಶೈಕ್ಷಣಿಕ ವಿಷಯದ ಕುರಿತು ತಿಳಿಸಿದರು.
ರಮೇಶ ಅವರು ಧನ್ಯವಾದ ಸಲ್ಲಿಸಿದರು. ಎಲ್ಲರಿಗೂ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಮಧ್ಯಾಹ್ನ ಆಹಾರವನ್ನು ಏರ್ಪಡಿಸಲಾಗಿತು. ನಂತರ ಶಾಲಾ ಮಕ್ಕಳಿಂದ ಪಿರಮಿಡ್, ಇಂಗ್ಲಿಷ್ ಅಭಿನಯ ಹಾಡುಗಳು, ನೃತ್ಯ, ಸ್ಕಿಟ್ ಮತ್ತು ಮುಂತಾದವನು ಪ್ರದರ್ಶಿಸಿದರು ಹಾಗೂ ದೇವಾ ಕಾಲೋನಿಯ ಜನರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟಗೀತೆ ಹಾಡುವ ಮೂಲಕ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಿಸಲಾಯಿತು.
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…