ಅಜ್ಜಾವರ:ಅಜ್ಜಾವರ ಹಾಲು ಉತ್ಪಾದಕರ ಸಂಘಕ್ಕೆ ಸಹಕಾರಿ ಸಂಘಗಳ ಉಪನಿಬಂಧಕರು ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.
ಅಜ್ಜಾವರ ಹಾಲು ಉತ್ಪಾದಕರ ಸಹಕಾರಿ ಸಂಘದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಹಕಾರಿ ಸಂಘಗಳ ಉಪನಿಬಂಧಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭ ಅವಿಶ್ವಾಸ ಮಂಡನೆ ಸಹಿತ ಇತರ ವಿಚಾರಗಳ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೇ ಸಂದರ್ಭ ಸಹಕಾರಿ ಸಂಘಗಳ ಉಪನಿಬಂಧಕರು ಸಂಘದ ಕಚೇರಿಯಲ್ಲಿ ನಿರ್ದೇಶಕರು ಮತ್ತು ಸದಸ್ಯರನ್ನು ಒಳಗೊಂಡ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾತನಾಡಿ, ಕಾನೂನು ಮೀರಿ ಯಾವುದೂ ಕೂಡಾ ನಡೆಯಲು ಸಾಧ್ಯವಿಲ್ಲ, ಇದಕ್ಕಾಗಿ ಒತ್ತಡ ತಂದರೂ ಆಗದು. ಕಾನೂನು ಚೌಕಟ್ಟು ಒಳಗಡೆ ಸಹಕಾರಿ ಸಂಘದ ಕೆಲಸಗಳು ನಡೆಯಬೇಕು, ಆಡಳಿತ ಮಂಡಳಿ, ಕೃಷಿಕರು, ಹೈನುಗಾರರ ನಡುವೆ ಸಮನ್ವಯತೆ ಬೇಕು ಎಂದು ಸೂಚಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ರಾಹುಲ್ ಅಡ್ಪಂಗಾಯ, ಉಪಾಧ್ಯಕ್ಷ ದುರ್ಗೇಶ್ ಅಡ್ಪಾಂಗಾಯ, ಕಾರ್ಯದರ್ಶಿ ಚೈತ್ರ, ರವೀಶ್ ಮಾವಿನಪಳ್ಳ , ಬಾಲಚಂದ್ರ ಮುಡೂರು , ಶಾಂತಪ್ಪ , ಲೀಲಾವತಿ ,ನಾರಾಯಣ, ಪೂರ್ಣಿಮ ,ಭಾಗೀರಥಿ , ಅಬ್ಬಾಸ್ , ಗ್ರಾಮ ಪಂಚಾಯತ್ ಸದಸ್ಯರಾದ ಕರುಣಾಕರ ಅಡ್ಪಂಗಾಯ , ಗಣೇಶ್ , ಮಾಜಿ ಸದಸ್ಯರಾದ ಚಂದ್ರಶೇಖರ , ಮತ್ತಿತರು ಉಪಸ್ಥಿತರಿದ್ದರು ಮತ್ತು ಸಂಘದ ಸರ್ವಸದಸ್ಯರು ಹಾಜರಿದ್ದರು. ಸಹಕಾರಿ ಸಂಘಗಳ ಇಲಾಖೆಯಿಂದ ಮಂಜುನಾಧ್ ಮತ್ತು ತ್ರೀವೇಣಿ ಆಗಮಿಸಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…