ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಶಾಖೆಗಳಲ್ಲಿ ಕ್ಯಾಂಪ್ಕೋ ಸೋಮವಾರ ಅಡಿಕೆ ಖರೀದಿ ನಡೆಸಿದೆ. ಎಲ್ಲಾ ಶಾಖೆಗಳಲ್ಲಿ ಟೋಕನ್ ವ್ಯವಸ್ಥೆಯಲ್ಲಿ ನಿಗದಿತ ಸಮಯದಲ್ಲಿ ಸದಸ್ಯ ಬೆಳೆಗಾರರಿಂದ ಅಡಿಕೆ ಖರೀದಿ ನಡೆಸಲಾಗಿದೆ. 25 ಸಾವಿರ ರೂಪಾಯಿ ಮೌಲ್ಯದ ಅಡಿಕೆ ಖರೀದಿ ನಡೆಸಲಾಗಿದ್ದು ಹೊಸ ಅಡಿಕೆ 250 ರೂಪಾಯಿ ಹಾಗೂ ಹಳೆ ಅಡಿಕೆ 275 ರೂಪಾಯಿಯಲ್ಲಿ ಖರೀದಿ ಮಾಡಲಾಗಿದೆ.
ಅಡಿಕೆ ಮಾರಾಟ ಹಾಗೂ ಖರೀದಿಯೇ ಇಲ್ಲದ ಸಮಯದಲ್ಲಿ ಅಡಿಕೆ ಬೆಳೆಗಾರರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಿರುವ ಕ್ಯಾಂಪ್ಕೋ ಆಡಳಿತ ಮಂಡಳಿಗೆ ಬೆಳೆಗಾರರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪುತ್ತೂರಿನಲ್ಲಿ ಅಡಿಕೆ ಮಾರಾಟ ಮಾಡಿರುವ ಅಡಿಕೆ ಬೆಳೆಗಾರ ಉದಯಶಂಕರ್, ಅಡಿಕೆಯನ್ನೇ ನಂಬಿರುವ ಅಡಿಕೆ ಬೆಳೆಗಾರರಿಗೆ ಇಂತಹ ಸಂದರ್ಭದಲ್ಲಿ ಕ್ಯಾಂಪ್ಕೋ ಮಾಡಿರುವ ಪ್ರಯತ್ನ ಶ್ಲಾಘನೀಯ. ತುರ್ತು ಸಂದರ್ಭಕ್ಕೆ ಅಗತ್ಯವಾದ ಹಣ ಲಭ್ಯವಾಗಿದೆ. ಇದರಿಂದ ನೆಮ್ಮದಿಯಾಗಿದೆ ಎಂದು ಹೇಳಿದ್ದಾರೆ.
ಅಡಿಕೆ ಬೆಳೆಗಾರ ದೇವಣ್ಣ ಗೌಡ ಮಾತನಾಡಿ , ಈಗಿನ ಪರಿಸ್ಥಿತಿಯಲ್ಲಿ ಕ್ಯಾಂಪ್ಕೋ ಉತ್ತಮ ಧಾರಣೆ ನೀಡಿದೆ. ಇದು ಅಡಿಕೆ ಬೆಳೆಗಾರರಿಗೆ ಆತ್ಮವಿಶ್ವಾಸ ಹಾಗೂ ಧೈರ್ಯ ತರುತ್ತದೆ ಎಂದು ಹೇಳುತ್ತಾರೆ.
ಅಡಿಕೆ ಖರೀದಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಯತ್ನ ಹಾಗೂ ಯೋಜನೆಗಳ ಬಗ್ಗೆ ಪ್ರಯತ್ನ ಮಾಡಲಾಗುವುದು. ಸಾಗಾಟದ ಬಗ್ಗೆಯೂ ಪ್ರಯತ್ನ ಮಾಡಲಾಗುವುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದ್ದಾರೆ.
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…
ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…
ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…