Advertisement
ಸುದ್ದಿಗಳು

ಅಬುದಾಬಿ ಲಾಟರಿಯ 23 ಕೋಟಿ ರೂಪಾಯಿ ಸುಳ್ಯದ ಯುವಕನಿಗೆ !

Share

ಸುಳ್ಯ:ಅಂದಾಜು 23 ಕೋಟಿಯ ಮೌಲ್ಯದ ಅಬುದಾಬಿ ಲಾಟರಿಯ ಅದೃಷ್ಟ ಸುಳ್ಯದ ಯುವಕನಿಗೆ ಒಲಿದಿದೆ. ಗುರುವಾರ ಡ್ರಾ ಮಾಡಲಾದ 12 ಮಿಲಿಯನ್ ದಿರ್ ಹಾಂ(ಅಂದಾಜು 23 ಕೋಟಿ) ಲಾಟರಿಯ ಪ್ರಥಮ ಬಹುಮಾನ ಸುಳ್ಯ ಜಟ್ಟಿಪಳ್ಳದ ಮಹಮ್ಮದ್ ಫಯಾಜ್ ಅವರಿಗೆ ಲಭಿಸಿದೆ ಎಂದು ತಿಳಿದು ಬಂದಿದೆ. ಮುಂಬೈನಲ್ಲಿ ಉದ್ಯೋಗದಲ್ಲಿರುವ ಫಯಾಜ್ ಕಳೆದ ಆರು ತಿಂಗಳಿನಿಂದ ದೊಡ್ಡ ಮೊತ್ತದ ಅಬುದಾಬಿ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದರು. ಇದೀಗ ಪ್ರಥಮ ಬಹುಮಾನದ ರೂಪದಲ್ಲಿ ಅದೃಷ್ಠ ಒಲಿದು ಬಂದಿದೆ.

ಕಳೆದ ತಿಂಗಳು, ಇದೇ ಬಹುಮಾನದಲ್ಲಿ  ದುಬೈ ಮೂಲದ ಫಿಲಿಪಿನಾ ವಲಸಿಗರು 10 ಮಿಲಿಯನ್ ಡಾಲರ್ ಗೆದ್ದಿದ್ದರು. ಇದೀಗ ಸುಳ್ಯದ ಮೂಲಕ ಯುವಕ ಸುಮಾರು 23 ಕೋಟಿ ರೂಪಾಯಿ ಮೌಲ್ಯವನ್ನು ಗೆದ್ದಿದ್ದಾರೆ.  ವಿಶೇಷ ಎಂದರೆ ಯುಎಇಗೆ ಎಂದಿಗೂ ಭೇಟಿ ನೀಡದ ಭಾರತೀಯ ವ್ಯಕ್ತಿಯೊಬ್ಬರು ಗುರುವಾರ ಸಂಜೆ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ 12 ಮಿಲಿಯನ್  ಗೆದ್ದಿದ್ದಾರೆ. ಗೆಳೆಯನ ಮೂಲಕ ಈ ರೀತಿಯ ಬಿಗ್ ಟಿಕೆಟ್ ಖರೀದಿಗೆ ಮುಂದಾಗಿದ್ದರು ಪಯಾಜ್.

ಈ ಬಗ್ಗೆ ಅಬುದಾಬಿ ಮಾಧ್ಯಮದೊಂದಿಗೆ ಮಾತನಾಡಿದ ಫಯಾಜ್, ಮೂತ್ರಪಿಂಡದ ಕಾಯಿಲೆಗಳಿಂದಾಗಿ ನನ್ನ ತಂದೆ ತಾಯಿ ಇಬ್ಬರೂ ತೀರಿಕೊಂಡರು. ನನ್ನ ತಂದೆ ಸೌದಿ ಅರೇಬಿಯಾದಲ್ಲಿ ದೀರ್ಘಕಾಲ ಕೆಲಸ ಮಾಡಿದ್ದರು. ಅವರು 12 ವರ್ಷಗಳಿಗಿಂತ ಹೆಚ್ಚು ಕಾಲ ಮೂತ್ರಪಿಂಡ ವೈಫಲ್ಯದ ವಿರುದ್ಧ ಹೋರಾಡಿದರು. ನನ್ನ ಹೆತ್ತವರು ಇಬ್ಬರೂ ನೋವಿನಿಂದ ನೋಡಿದ್ದೇವೆ. ನಾವು ಮಕ್ಕಳು ಇನ್ನೂ ಚೇತರಿಸಿಕೊಳ್ಳುತ್ತಿದ್ದೇವೆ ನಮ್ಮ ಹೆತ್ತವರು ನಮ್ಮೊಂದಿಗೆ ಇಲ್ಲದಿರುವುದು ಆಘಾತ. ನನಗೆ ತಂಗಿ ಇದ್ದಾರೆ. ನನ್ನ ಅಕ್ಕ ಮದುವೆಯಾಗಿದ್ದಾರೆ. ಮನೆ ನಿರ್ಮಿಸಲು ನಾವು ನಮ್ಮ ಜಮೀನಿನ ಒಂದು ಭಾಗವನ್ನು ಮಾರಿದೆವು. ಆದರೆ ಅದು ಈಗ ಬಾಕಿ ಉಳಿದಿದೆ. ಒಂದು ವರ್ಷದ ಹಿಂದೆ ನನ್ನ ಕುಟುಂಬದ ಉದ್ದೇಶದಿಂದ ಮುಂಬೈಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಮೊದಲು ಡ್ರಾ ಗೆದ್ದಿರುವ ಬಗ್ಗೆ ಕರೆ ಬಂದಾಗ ನಂಬಲು ಆಗಲಿಲ್ಲ. ಬಳಿಕ ಆನ್ ಲೈನ್ ನಲ್ಲಿ  ಪರಿಶೀಲನೆ ಮಾಡಿದಾಗ ಖಚಿತವಾಯಿತು. ಮುಂದೆ ಒಂದಷ್ಟು ಕನಸುಗಳು ಇವೆ. ಅದನ್ನು ಪೂರೈಸಬೇಕಿದೆ ಎಂದು ಮಾಧ್ಯಮದೊಂದಿಗೆ ಫಯಾಜ್ ಹೇಳಿದ್ದಾರೆ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?

ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…

11 hours ago

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ

ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್‌ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯ…

12 hours ago

ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ

2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…

1 day ago

ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ

ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…

1 day ago

ಕ್ಯಾಂಪ್ಕೋ ಅಭಿವೃದ್ಧಿಯ ಹಾದಿಯಲ್ಲಿ: ₹2,900 ಕೋಟಿ ಅಡಿಕೆ ವ್ಯವಹಾರದ ನಡುವೆ ಮುಂದಿರುವ ಸವಾಲುಗಳೇನು?

2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…

2 days ago

ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..

ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…

2 days ago