ಪುತ್ತೂರು: ಮುಳಿಯ ಜ್ಯುವೆಲ್ಸ್ ಪುತ್ತೂರು ಮತ್ತು ಬೆಳ್ತಂಗಡಿ ಶೋರೂಂನಲ್ಲಿ ಅಕ್ಟೋಬರ್ 2 ರಿಂದ 8ರವರೆಗೆ ಚಿನ್ನೋತ್ಸವದ ಸಂಭ್ರಮ.
ಈ ದಸರಾ ಸಂದರ್ಭದಲ್ಲಿ ಅಷ್ಟ ಲಕ್ಷ್ಮೀಯರ ಆಶೀರ್ವಾದ ಚಿನ್ನಕೊಳ್ಳುವವರ ಮೇಲೆ ಇರಲಿದೆ ಎಂಬ ನಂಬಿಕೆ ಜನರಲ್ಲಿದೆ.ಪ್ರದರ್ಶನ ಮತ್ತು ಮಾರಾಟದ ಈ ಉತ್ಸವದಲ್ಲಿ “ಸೆಲೆಬರೇಟ್ ದ ಗೋಲ್ಡ್” ಎಂಬ ಧ್ಯೇಯ ವಾಕ್ಯದೊಂದಿಗೆ ವಿಶಾಲಶ್ರೇಣಿಯ, ವಿನೂತನ ಬಗೆಯ ವಿವಿಧ ಆಭರಣಗಳ ಸಂಗ್ರಹ ಈ ಮುಳಿಯ ಚಿನ್ನೋತ್ಸವದ ವಿಶೇಷ ಎಂದು ಕೃಷ್ಣನಾರಾಯಣ ಮುಳಿಯರವರು ತಿಳಿಸಿದರು.
1919 ಅಂದರೆ ಕಳೆದ 100 ವರ್ಷಗಳ ಹಿಂದೆ ಚಿನ್ನದ ಬೆಲೆ 1 ಗ್ರಾಂಗೆ ರೂ.1 ಅಂದಾಜು ಇತ್ತು. ಈಗ 2019ರಲ್ಲಿ ಬೆಲೆ ರೂ.3485/- ಇದೆ. ಮುಳಿಯ 75 ವರ್ಷಗಳ ಹಿಂದೆ ಆರಂಭವಾದಾಗ ಗ್ರಾಂ ಒಂದಕ್ಕೆ ರೂ.5/- ಇತ್ತು. ಹೀಗಾಗಿ ವರ್ಷದೊಳಗೆ ಮುಳಿಯ ಗ್ರಾಹಕರಿಗೆ ಲಾಭ-ಸಂತೋಷ ತಂದಿದೆ. “ಚಿನ್ನ ಎಂದೂ ಕೈ ಬಿಡುವುದಿಲ್ಲ” ಎಂಬ ನಂಬಿಕೆ ನಮ್ಮಲ್ಲಿದೆ ಎಂದು ಕೇಶವ ಪ್ರಸಾದ್ ಮುಳಿಯರವರು ವಿವರಿಸಿದರು.
ಚಿನ್ನೋತ್ಸವದ ಸಂದರ್ಭದಲ್ಲಿ ಅಲಂಕಾರ ಮೆಹೆಂದಿ ಪ್ರತೀ ದಿನ ಚಿನ್ನದ ನಾಣ್ಯ ಗೆಲ್ಲುವ, ವಾಕ್ ಇನ್ ಆದವರಿಗೆ ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶ. ಮುಂತಾದ ವಿಶೇಷ ಕಾರ್ಯಕ್ರಮದ “ಸಂಭ್ರಮದ ಸೆಲೆಬರೇಶನ್ ಇರಲಿದೆ ಎಂದು ಶಾಖಾ ಪ್ರಬಂಧಕ ನಾಮ್‍ದೇವ್ ಮಲ್ಯ ತಿಳಿಸಿದ್ದಾರೆ.
ಚಿನ್ನೋತ್ಸವ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಖ್ಯಾತಿಯ ಮೈಕ್ರೊ ಮೆಹೆಂದಿ ಡಿಸೈನರ್ ಅನು ಉಪಾಧ್ಯ ಅ.2ರಂದು ಪುತ್ತೂರಿನಲ್ಲಿ ಹಾಗೂ 3ರಂದು ಬೆಳ್ತಂಗಡಿಯಲ್ಲಿ ಮುಳಿಯ ಶೋರೂಂನಲ್ಲಿ ನಿಮಗಾಗಿ ಲಭ್ಯರಿರುವರು.
ಹಾಗೆಯೇ ಕೆನರಾ ಬ್ಯಾಂಕ್‍ನ ಜನರಲ್ ಮ್ಯಾನೇಜರಾದ ಯೋಗೀಶ್ ಆಚಾರ್ಯ ಇವರು ಚಿನ್ನೋತ್ಸವಕ್ಕೆ ಚಾಲನೆ ನೀಡಲಿದ್ದು, ಗಿರಿಗಿಟ್ ಸಿನಿಮಾ ಖ್ಯಾತಿಯ ನಾಯಕ ನಟಿಯೂ ಪುತ್ತೂರಿನವರೇ ಆದ ಕು. ಶಿಲ್ಪಾ ಶೆಟ್ಟಿ ಇವರನ್ನೂ ಸನ್ಮಾನಿಸಲಾಗುವುದು. ಕು. ಶಿಲ್ಪಾ ಶೆಟ್ಟಿ ಇವರು ಅಪ್ಸರಾ ಕಲೆಕ್ಷನ್ ಎಂಬ ಹೊಸ ರೋಸ್ ಗೋಲ್ಡ್ ಡಿಸೈನ್ ಗಳನ್ನು ಅನಾವರಣಗೊಳಿಸುವರು.
“ಈ ರೋಸ್ ಗೋಲ್ಡ್ ಡಿಸೈನ್‍ಗಳು, ಡ್ಯಾನ್ಸಿಂಗ್ ಸ್ಟೋನ್ ಆಭರಣಗಳು” ಇದೇ ಪ್ರಥಮ ಬಾರಿಗೆ ಇದು ಪುತ್ತೂರಿಗೆ ಮುಳಿಯ ಪರಿಚಯಿಸುತ್ತದೆ. 18 ಕ್ಯಾರೆಟ್ ನಲ್ಲಿ ಮಾಡಿರುವುದರಿಂದ ಪಾಕೆಟ್ ಪ್ರೆಂಡ್ಲೀ ಕೂಡಾ ಎಂದು ಬಣ್ಣಿಸಿದರು. ಶೋರೂಂಗೆ ಬಂದು ಇವುಗಳನ್ನು ನೋಡಿ ಮುಳಿಯ ಚಿನ್ನಾಭರಣಗಳೊಂದಿಗೆ ಸಂಭ್ರಮಿಸಿ ಎಂದು ಕೇಶವ ಪ್ರಸಾದ್ ಮುಳಿಯ ತಿಳಿಸಿದರು.
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್‌ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್‌ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…
ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…