ಮಂಗಳೂರು : ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಅಧೀನದಲ್ಲಿ ಬರುವ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಲು ಶುಶ್ರೂಷಕಿ, ಲ್ಯಾಬ್ ಟೆಕ್ನೀಷನ್, ಫಾರ್ಮಸಿಸ್ಟ್ ಹುದ್ದೆಗಳನ್ನು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ತಾತ್ಕಾಲಿಕವಾಗಿ 6 ತಿಂಗಳ ಮಟ್ಟಿಗೆ ನೇಮಕಕ್ಕೆ ಜುಲೈ 25 ರಂದು 11 ಗಂಟೆಗೆ ಮಂಗಳೂರಿನ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣ ನೇರ ಸಂದರ್ಶನ ನಡೆಯಲಿದೆ.
ಹುದ್ದೆ ವಿವರ ಇಂತಿವೆ:
1. ಶುಶ್ರೂಷಕಿ – 3 ಹುದ್ದೆ, ವೇತನ – ರೂ. 25 ಸಾವಿರ, ವಿದ್ಯಾರ್ಹತೆ – ಡಿಪ್ಲೋಮ ಇನ್ ನರ್ಸಿಂಗ್ (ನರ್ಸಿಂಗ್ ಕೌನ್ಸಿಲ್‍ನಲ್ಲಿ ನೊಂದಣಿಯಾಗಬೇಕು)
2. ಪ್ರಯೋಗ ಶಾಲಾ ತಂತ್ರಜ್ಞರು – 21 ಹುದ್ದೆ, ವೇತನ – ರೂ. 20 ಸಾವಿರ, ವಿದ್ಯಾರ್ಹತೆ – ಡಿ.ಎಂ.ಎಲ್.ಟಿ ಕರ್ನಾಟಕ ಪ್ಯಾರ ಮೆಡಿಕಲ್ ಬೋರ್ಡ್ ಪ್ರಮಾಣ ಪತ್ರ
3.ಫಾರ್ಮಸಿಸ್ಟ್ – 34 ವೇತನ – ರೂ. 20 ಸಾವಿರ, ವಿದ್ಯಾರ್ಹತೆ – ಡಿ.ಫಾರ್ಮ್ (ಫಾರ್ಮಸಿ ಕೌನ್ಸಿಲ್‍ಲ್ಲಿ ನೊಂದಣಿಯಾಗಬೇಕು).
ಸಲ್ಲಿಸಬೇಕಾದ ದಾಖಲೆಗಳು: ವಿದ್ಯಾರ್ಹತೆಯ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ಅವುಗಳ ಸ್ವಯಂ ದೃಡೀಕೃತ ನಕಲು ಪ್ರತಿಗಳು, ಅನುಭವಕ್ಕೆ ಆದ್ಯತೆ ನೀಡಲಾಗುವುದು ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಹಾಜರಾಗುವುದು.
ಹೆಚ್ಚಿನ ಮಾಹಿತಿಗೆ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಅಥವಾ ದೂರವಾಣಿ ಸಂಖ್ಯೆ: 0824-2423672 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…
ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್…
ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…
ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…
ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…
ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಚಿತ್ರಕೂಟದ…