( ಕಳೆದ ತಿಂಗಳು ಭಾರೀ ಮಳೆಗೆ ಕುಸಿತದ ದೃಶ್ಯ)
ಮಂಗಳೂರು: ಭಾರೀ ಮಳೆಯ ಕಾರಣದಿಂದ ಆ.8 ರಂದು ಚಾರ್ಮಾಡಿ ಘಾಟಿಯ 14 ಕಡೆ ಕುಸಿತವಾಗಿತ್ತು. ಹೀಗಾಗಿ ಒಂದು ತಿಂಗಳ ಕಾಲ ವಾಹನ ಸಂಚಾರ ಬಂದ್ ಮಾಡಲು ಲೋಕೋಪಯೋಗಿ ಇಲಾಖೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಹೀಗಾಗಿ ಆ.15 ರಿಂದ ಸೆ.14 ರವರೆಗೆ ವಾಹನ ಸಂಚಾರ ನಿಷೇಧವಾಗಿತ್ತು. ಇದೀಗ ಸೆ.15 ರಿಂದ ಲಘು ವಾಹನಗಳ ಓಡಾಟಕ್ಕೆ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಜಿಲ್ಲಾಡಳಿತ ಅನಿಮತಿ ನೀಡಿದೆ.
ರಾತ್ರಿ 6 ಗಂಟೆಯಿಂದ ಎಲ್ಲಾ ರೀತಿಯ ವಾಹನ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಘಾಟಿ ಪ್ರದೇಶದಲ್ಲಿ 20 ಕಿಮೀ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ. ರಸ್ತೆ ಹಾನಿಯಾಗಿರುವುದಿಂದ ಜಾಗರೂಕತೆಯ ಚಾಲನೆಗೆ ಸೂಚನೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮಕ್ಕಾಗಿ ಫೋಟೊ ಹಾಗೂ ಸೆಲ್ಪೀ ತೆಗೆಯುವುದು ನಿಷೇಧವಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಭಾರೀ ಮಳೆಯ ಕಾರಣದಿಂದಾಗಿ ಚಾರ್ಮಾಡಿ ಘಾಟಿ ಭಾರೀ ಕುಸಿತವಾಗಿ ಮುಂದೆ ವಾಹನ ಸಂಚಾರವೇ ಕಷ್ಟ ಎಂದೇ ಹೇಳಲಾಗಿತ್ತು. ಘಾಟಿ ರಸ್ತೆ ಕುಸಿತ ನೋಡಿದ ಎಲ್ಲರೂ ವಾಹನ ಸಂಚಾರ ಬಹಳ ವರ್ಷ ಸಾಧ್ಯವಿಲ್ಲ ಎಂದು ಅನೇಕರು ಹೇಳಿದ್ದರೆ, ಕೆಲವರು ಇನ್ನು ವಾಹನ ಸಂಚಾರ ಶಾಶ್ವತವಾಗಿ ಬಂದ್ ಎಂದು ಹೇಳಿದ್ದರು. ಆದರೆ ನಮ್ಮ ರಸ್ತೆಯನ್ನು ಸುಸ್ಥಿತಿಗೆ ತಂದು ಸದ್ಯ ಲಘುವಾಹನ ಓಡಾಟಕ್ಕೆ ಸಾಧ್ಯವಾಗುವಂತೆ ಮಾಡಿದ್ದಾರೆ. ಸಂಪಾಜೆ ಘಾಟಿಯಲ್ಲೂ ಕಳೆದ ಬಾರಿ ಕುಸಿತವಾದಾಗ ತಕ್ಷಣ ಕ್ರಮ ಕೈಗೊಂಡು ವಾಹನ ಓಡಾಡುವಂತೆ ಮಾಡಿದ್ದಾರೆ. ಇಂಜಿಯರ್ ದಿನದಂದೇ ವಾಹನ ಓಡಾಟಕ್ಕೆ ಅನುವು ಆಗುವಂತೆ ಮಾಡಿರುವುದು ನಮ್ಮ ಇಂಜಿನಿಯರ್ ಗಳ ಹೆಮ್ಮೆ ಹಾಗೂ ಭರವಸೆ ಹುಸಿಯಾಗಲಿಲ್ಲ.
ಆ.14 ರಂದು ಹಿಂದೆ ಸುಳ್ಯ ನ್ಯೂಸ್ ಮಾಡಿರುವ ಪಾಸಿಟಿವ್ ವರದಿ :
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…