ಏನ್ ಹೇಳ್ರೆ ಸಣಪ…
ಮನೆಲಿ ಕುದ್ರುದರ ನೆನ್ಸಿರೆ
ತಲೆಲಿ ಕುರೆಕುದ್ದಂಗಾದೆ….
ಕೊಟೆಗೆಲಿ ಕಟ್ಟಿದ ಕರಿ ಹಸ್
ಇಜ್ಜೇಲ್ ಲಿ ಇರುವ ಬೊಗ್ಗ ನಾಯಿ
ಸಾಲೆಂದ ಬಾಕನ ನನ್ನಕಲೆ ಬಾತಿದ್ದ
ಕೊತ್ತಿ ಮೊರಿಗೂ ನಮ್ಮ ನೋಡಿ ಸಾಕಾವುಟು
ದಿನಾ ಕಾಲ್ ಬುಡಲಿ ಬಂದ್ ಕುದ್ರುತ್ತಿದ್ದ
ಕೊತ್ತಿ ನಾಯಿ ಹಕ್ಕಲೆನೂ ಬಾದ್ಲೆ ಮೂಸಿನೂ ನೋಡ್ದ್ಲೆ
ಅವು ಒಳಗೊಳಗೆ ಮಾತಾಡಿಕಂಡವೆ ಅನ್ಸಿದೆ
ಇವರ ಸಂತಾನ ಈಗೇನ್ ಮನೇಲೇ ಜಾಂಡಾವೂರ್ದ್ಂತ
ಏನ್ ಹೇಳ್ರೆ ನೀವು ಸಣಪ
ಈ ಕೋರೋನಾದ ರಾಂಪಟ ನೆನ್ಸಿರೆ
ತಲೆಗೆ ಮರ ಬಿದ್ದಂಗಾದೆ…
ತಾತನ ಮನೆ ಅವ್ವನ ಮನೆಂತ
ತಿರ್ಗಿಕೂ ಆದ್ಲೆ…
ಕಾಗಡೆ, ಮೇಗಡೆ, ಹಳ್ಳಕರೆ
ಮನೆಗೂ ಹೋಕಾದ್ಲೆ..
ಇಜ್ಜೆಲ್ ಕರೆಲೆಲ್ಲಾ ಹೂವು ದೈ
ನಡೋಮ ಹೇಳ್ರೆ
ಬಾಮಿಲಿ ನಾವ್ಗೇ ಕುಡೆಕೆ
ನೀರಿಲ್ಲೆ….
ಗ್ಯಾರ್ದಣ್ಣ್ ,ಮಾವಿನಣ್ಣ್ ಮರಕ್ಕಾರ್
ಕಲ್ಲ್ ಹೊಡೆಮ ಹೇಳ್ರೆ
ಗ್ಯಾರ್ದಣ್ಣ್ ಕುರೆಗ ಮುಗ್ಸೆಳ
ಮಾವಿನಣ್ಣ್ ಆಸೆಗೂ ಒಂದೂ ಬುಟ್ಟತ್ಲೆ
ಎಲ್ಲವು ಬಗೆಬಗೆ ತಿಂಡಿ ಮಾಡಿ
ವಾಟ್ಸ ಪ್ ಲಿ ಹಾಕಿಕನ
ನಂಗೂ ಹಾಕೊಕುತಾದು….
ಹಲ್ಸಿನಣ್ಣ್ ಕೊಯ್ದ್ ಮುಳ್ಕ ಮಾಡಿ ಹಾಕಿರೆ
ಯಾರೋ ಆಸೆಲಿ ಬಾಯಿ ನೀರ್ ಸುರ್ಸಿ
ರಾತ್ರೆಲ್ಲಾ ಹೊಟ್ಟೆ ಬೇನೆ….
ಏನ್ ಹೇಳ್ದು ಸಣಪ…..
ಈ ಕೊರೊನಾ ಒಮ್ಮೆ ಮುಗ್ದರೆ ಸಾಕ್ಂತಾದೆ
ಎಲ್ಲ ನೆನ್ಸಿ ನೆನ್ಸಿ…..ತಲೆಗೆ
ಹೆಬ್ಬಲ್ಸ್ ಮರನೇ ಬಿದ್ದಂಗಾವುಟು…
# ಬರ್ದೋವು : ಅಪೂರ್ವ ಕೊಲ್ಯ
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…