ಸ್ಪೆಶಲ್ ಕರೆಸ್ಪಾಂಡೆಂಟ್, ಸುಳ್ಯನ್ಯೂಸ್.ಕಾಂ
ಸುಳ್ಯ: ಬಿ ಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆಯ ನಂತರ ಇದೀಗ ರಾಜ್ಯ ಬಿಜೆಪಿಯಲ್ಲಿ ಗೊಂದಲ ಹೆಚ್ಚಾಗಿದೆ. ಈ ಗೊಂದಲಗಳ ನಡುವೆ ಸಚಿವ ಸ್ಥಾನದ ಆಕಾಂಕ್ಷಿಗಳ ಒತ್ತಡವೂ ಹೆಚ್ಚಿದೆ. ನೂತನ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಈ ಎಲ್ಲಾ ಒತ್ತಡಗಳಿಗೆ ಮಣಿಯುತ್ತಾರಾ ? ಎದುರಿಸುತ್ತಾರಾ ? ಎಂಬ ಕುತೂಹಲ ಈಗ ಮೂಡಿದೆ. ಏಕೆಂದರೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭ ನಳಿನ್ ಕುಮಾರ್ ಕಟೀಲು ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಸಂಚಲನ ಮೂಡಿಸಿತ್ತು. ಜಿಲ್ಲೆಯಲ್ಲಿ ಗೆಲುವಿಗೂ ಕಾರಣವಾಗಿತ್ತು. ಅದೇ ನಿರ್ಧಾರಗಳೂ ಈ ಬಾರಿಯೂ ಪುನರಾವರ್ತನೆಯಾಗುತ್ತಾ ಎಂಬ ಕುತೂಹಲವಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಏಕೈಕ ಶಾಸಕರಾಗಿ ಸುಳ್ಯದ ಅಂಗಾರ ಅವರು ಇದ್ದರು. ಉಳಿದೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಮುಂದಿನ ವಿಧಾನಸಭಾ ಚುನಾವಣೆಯ ಬಳಿಕ ಸಂಪೂರ್ಣ ಚಿತ್ರಣ ಬದಲಾಗಿತ್ತು. ಏಕೈಕ ಕಾಂಗ್ರೆಸ್ ಶಾಸಕ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು…!. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಹಾಗೂ ಓಡಾಟ ನಡೆಸಿದ್ದು ಸಂಸದ ನಳಿನ್ ಕುಮಾರ್ ಕಟೀಲು. ಪುತ್ತೂರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಮಾಧಾನ ಹೆಚ್ಚಿತ್ತು. ಬೆಳ್ತಂಗಡಿ, ಪುತ್ತೂರು, ಮಂಗಳೂರು ಕ್ಷೇತ್ರಗಳಲ್ಲಿ ಅಸಮಾಧಾನಗಳು ಹೆಚ್ಚಿತ್ತು. ಸಂಸದರ ಸಹಿತ ಯಾರೊಬ್ಬರೂ ಈ ಅಸಮಾಧಾನ ಬಗೆಹರಿಸುವ ಬಗ್ಗೆ ಗಮನಹರಿಸಿದೆ ಮತ್ತಷ್ಟು ಪಕ್ಷ ಸಂಘಟನೆಯತ್ತ ಗಮನಹರಿಸಿದರು. ಕೊನೆಗೆ ಅಸಮಾಧಾನಗಳು ಶಮನವಾಯಿತು. ಅಸಮಾಧಾನ , ಬಂಡಾಯಗಳಿಗೆ ಸೊಪ್ಪು ಹಾಕಿರಲಿಲ್ಲ. ಹಾಗಿದ್ದರೂ ಪಕ್ಷವು ಜಿಲ್ಲೆಯಲ್ಲಿ ಗೆಲುವು ಸಾಧಿಸಿತ್ತು. ಗೆಲುವು ಸಾಧಿಸಲಾರದು ಎಂಬ ಕ್ಷೇತ್ರಗಳೂ ಬಿಜೆಪಿ ತೆಕ್ಕೆಗೆ ಬಂದಿತ್ತು.
ಇದೀಗ ನಳಿನ್ ಕುಮಾರ್ ಕಟೀಲು ರಾಜ್ಯದ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಸುಳ್ಯದಲ್ಲಿ 6 ವರ್ಷಗಳಿಂದ ಸುಳ್ಯದ ಶಾಸಕರಾಗಿರುವ ಹಿರಿಯ ಶಾಸಕರೂ ಆದ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗದೇ ಇರುವ ಬಗ್ಗೆ ಸುಳ್ಯ ಕ್ಷೇತ್ರದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈಗ ನಳಿನ್ ಕುಮಾರ್ ಕಟೀಲು ಅವರ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ. ಒತ್ತಡ, ಒತ್ತಾಯಗಳಿಗೆ ಮಣಿಯುತ್ತಾರಾ, ಹಿರಿತನಕ್ಕೆ ಸಚಿವ ಸ್ಥಾನ ಸಿಗುವಂತೆ ಮಾಡುತ್ತಾರಾ ? ಪಕ್ಷ ಸಂಘಟನೆಯ ಕ್ಷೇತ್ರಕ್ಕೆ ಯಾವ ರೀತಿಯ ಆದ್ಯತೆ ನೀಡುತ್ತಾರೆ ಎಂಬ ಕುತೂಹಲ ಇದೆ. ಸುಳ್ಯ ಕ್ಷೇತ್ರಕ್ಕೆ ಮಾನ್ಯತೆ ನೀಡಿದರೆ ರಾಜ್ಯದ ಉಳಿದ ಕಡೆಯ ಹಿರಿಯ ಶಾಸಕರ ಪಟ್ಟೂ ಹೆಚ್ಚಾದರೆ ಇತ್ಯಾದಿ ಪ್ರಶ್ನೆಗಳು ರಾಜ್ಯಾಧ್ಯಕ್ಷರ ಮುಂದಿದೆ. ಸಚಿವ ಸ್ಥಾನ ಸಿಗದೇ ಇದ್ದರೆ ನಳಿನ್ ಕುಮಾರ್ ಜೊತೆ ನಿಕಟವಾಗಿರುವ, ಆತ್ಮೀಯವಾಗಿರುವ ಮಂಡಲದ ಬಿಜೆಪಿಯ ಪ್ರಮುಖ ನಾಯಕರ ನಡೆ ಏನು ಇತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಕುತೂಹಲ ಮೂಡಿಸಿದೆ.
ರಾಜ್ಯದಲ್ಲೂ ಬಿಜೆಪಿ ಒಳಗೆ ಎಲ್ಲವೂ ಸರಿ ಇಲ್ಲ ಎಂಬುದು ಈಗಾಗಲೇ ಬಹಿರಂಗವಾಗಿದೆ. ಅಸಮಾಧಾನದಿಂದ ಪಕ್ಷದೊಳಗಿನ ಕಚ್ಚಾಟದಿಂದ ಈ ಬಾರಿ ಬಿಜೆಪಿ ಸರಕಾರ ಬಿದ್ದರೆ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷಕ್ಕೆ ಸರಕಾರ ರಚನೆಗೇ ಹೆಚ್ಚಿನ ಅವಕಾಶ ಸಿಗಲಿದೆ ಅಥವಾ ನೂತನ ಸಾಧ್ಯತೆಗಳತ್ತ ಮತದಾರರು ಯೋಚಿಸುವ ಕಾಲ ಬರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಹೀಗಾಗಿ ಈಗಿನ ಬಿಜೆಪಿ ರಾಜ್ಯಾಧ್ಯಕ್ಷರ ನಡೆಗಳು ಬಿಜೆಪಿಯ ಭವಿಷ್ಯದ ಹೆಜ್ಜೆಯನ್ನು ಗಟ್ಟಿ ಮಾಡಲಿದೆ ಎಂಬುದು ರಾಜಕೀಯ ಲೆಕ್ಕಾಚಾರಗಳು. ಹ್ಯಾಟ್ರಿಕ್ ಗೆಲುವು ಸಾಧಿಸಿದ, ಕೇರಳದಲ್ಲಿ ಬಿಜೆಪಿ ಸಂಘಟನೆ ಮಾಡಿರುವ, ಬಳ್ಪ ಆದರ್ಶ ಗ್ರಾಮದ ರುವಾರಿ, ರಾಜ್ಯದ ನಂಬರ್.1 ಸಂಸದ ನಳಿನ್ ಕುಮಾರ್ ಅವರ ಸಾರಥ್ಯದ ಬಿಜೆಪಿಯ ರಾಜ್ಯದಲ್ಲೂ ಸಂಘಟನಾತ್ಮಕವಾಗಿ ಬೆಳೆಯುತ್ತಾ ಎಂಬುದು ಈಗಿನ ಪ್ರಶ್ನೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…