ಅಮ್ಮ ಕೊಟ್ಟ ಕೈ ತುತ್ತು
ಅಪ್ಪ ಕೊಟ್ಟ ಸಿಹಿ ಮುತ್ತು
ಅಜ್ಜಿ ಕಥೆಗಾಗಿ ಹಂಬಲಿಸುತ್ತಿದ್ದ ಹೊತ್ತು
ಇಂದು ಕಳೆದು ಹೋದ ಅಮೂಲ್ಯ ಸಂಪತ್ತು||೧||
ಮರಳಲಿ ಮನೆ ಕಟ್ಟಿದ ಆ ದಿನಗಳು
ಅಪ್ಪನ ಹೆಗಲೇರಿ ಆಡಿದ ನೆನಪುಗಳು
ಓಡಿ ಆಡಿ ಬಿದ್ದಾಗ ಆದ ಗಾಯಗಳು
ಇಂದಿನ ಬದುಕಿಗೆ ಸುಂದರ ಸ್ವಪ್ನಗಳು||೨||
ಬಾಲ್ಯ ಕಳೆದಿದೆ,ಯೌವ್ವನ ಬಂದಿದೆ
ಸೈಕಲ್ ಗಾಡಿ ಗುಜುರಿ ಅಂಗಡಿ ಸೇರಿದೆ
ಮನೆಯ ಮುಂದೆ ಕಾರು ಬಂದು ನಿಂತಿದೆ
ಯೌವನದ ಅಮಲಿನಲಿ ಬದುಕೇ ಬದಲಾಗಿದೆ||೩||
ಆಧುನಿಕತೆಯ ಸೋಗಿನಲಿ ಕಾಲ ಓಡುತಿದೆ
ಭರದ ನಡಿಗೆಯಲಿ ಕಾಲ್ಗಳು ಸೋತಿದೆ
ಬಾಲ್ಯದ ನಗು ಇಂದು ಸತ್ತು ಹೋಗಿದೆ
ಹೋರಾಟವೇ ಇಂದಿನ ಬದುಕಾಗಿದೆ||೪||
ಮತ್ತೊಮ್ಮೆ ಹೋಗಬೇಕು ಬಾಲ್ಯದ ನೆನಪಿಗೆ
ಹುರುಪು ತುಂಬುವುದು ಇಂದಿನ ಬದುಕಿಗೆ
ಎಲ್ಲರ ಬಾಳಲ್ಲೂ ಬಾಲ್ಯದ ಸವಿ ಇರಲಿ ಹೀಗೆ
ನೀಡಲಿ ಹೊಸ ಚೈತನ್ಯ ಮುಂದಿನ ಬಾಳಿಗೆ||೫||
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490