Advertisement
MIRROR FOCUS

ಕಾವೇರಿ ನದಿಯನ್ನು ಸಂರಕ್ಷಿಸುವ ‘ಕಾವೇರಿ ಕೂಗು’ ಆಂದೋಲನ

Share

ಕೊಡಗಿನ ಪ್ರಮುಖ ನದಿ ಸಂರಕ್ಷಣೆಯತ್ತ ಈಗ ಚಿತ್ತ ಹರಿದಿದೆ. ‘ಕಾವೇರಿ ಕೂಗು’ ಎಂಬ ಆಂದೋಲನ ನಡೆಯಲಿದ್ದು, ಇದಕ್ಕಾಗಿ ಈಶ ಫೌಂಡೇಶನ್‍ನ ಸಂಸ್ಥಾಪಕ ಹಾಗೂ ಚಿಂತಕ ಜಗ್ಗಿ ವಾಸುದೇವ್ ಆಗಮಿಸುವರು. ಕಾವೇರಿ ನದಿ ಸ್ವಚ್ಛವಾಗಬೇಕು ಎಂಬ ಹಿನ್ನೆಲೆಯಲ್ಲಿ  ಈ ಆಂದೋಲನ.ಈ ಅಭಿಯಾನದ ಮೂಲಕ ನದಿಯ ಅಚ್ಚುಕಟ್ಟು ಪಾತ್ರದಲ್ಲಿ 242 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಈ ಕಡೆಗೆ ಫೋಕಸ್…

Advertisement
Advertisement
Advertisement

ನದಿ ರಕ್ಷಣೆಯ ಆಂದೋಲನದ ರೀತಿಯಲ್ಲೇ ಕಾವೇರಿ ನದಿಯನ್ನು ಸಂರಕ್ಷಿಸುವ ‘ಕಾವೇರಿ ಕೂಗು’ ಆಂದೋಲನಕ್ಕೆ ಕೊಯಮತ್ತೂರು ಈಶ ಫೌಂಡೇಶನ್‍ನ ಸಂಸ್ಥಾಪಕ ಹಾಗೂ ಚಿಂತಕ ಜಗ್ಗಿ ವಾಸುದೇವ್ ಅವರ ಉಪಸ್ಥಿತಿಯಲ್ಲಿ  ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಷಾ  ಸೆ. 3 ರಂದು ತಲಕಾವೇರಿಯಲ್ಲಿ ಚಾಲನೆ ನೀಡಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ತಲಕಾವೇರಿಯಲ್ಲಿ ಬೈಕ್ ರಾಲಿಗೆ ಹಸಿರು ನಿಶಾನೆ ತೋರುವ  ಮೂಲಕ ಸದ್ಗುರು ಅವರು ತಾವೇ ಬೈಕ್ ಚಲಾಯಿಸಲಿದ್ದಾರೆ. ಅವರ ಜೊತೆಯಲ್ಲಿ ಸುಮಾರು 25 ಮಂದಿಯ ಬೈಕ್ ತಂಡ ತಲಕಾವೇರಿಯಿಂದ ಪೂಂಪುಹಾರ್‍ವರೆಗೆ ಪ್ರಯಾಣ ಬೆಳಸಲಿದ್ದಾರೆ.

Advertisement

ಕಳೆದ 50 ವರ್ಷಗಳಲ್ಲಿ ಕಾವೇರಿ ನದಿ ಶೇ.40 ರಷ್ಟು ಪ್ರಮಾಣದಲ್ಲಿ ನೀರನ್ನು ಕಳೆದುಕೊಂಡಿದ್ದು, ನದಿ ನಾಶವಾಗದಂತೆ ತಡೆಯಲು ಕಾವೇರಿ ಪ್ರದೇಶಗಳಲ್ಲಿ ರೈತರು ಮರಗಳನ್ನು ನೆಡುವಂತೆ ಪ್ರೇರಿಪಿಸಲು ‘ಕಾವೇರಿ ಕೂಗು’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರೈತರ ಜಮೀನಿನಲ್ಲಿ ಹೆಚ್ಚು ಮರಗಳನ್ನು ನೆಟ್ಟರೆ ವರ್ಷವಿಡೀ ಕಾವೇರಿಯ ಪ್ರಮಾಣದಲ್ಲಿ ಏರುಪೇರಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ. ಈಗಾಗಲೇ 70 ಸಾವಿರ ರೈತರು ತಮಿಳುನಾಡಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಇದೇ ತಾ. 5 ರಂದು ಮೈಸೂರಿನಲ್ಲಿ ಅಭಿಯಾನದ ರೈತ ಸಂಪರ್ಕ ಕಾರ್ಯಕ್ರಮ ಆರಂಭಗೊಂಡಿದೆ.  ಸೆ. 3 ರಂದು ತಲಕಾವೇರಿಯಲ್ಲಿ ಆರಂಭಗೊಳ್ಳಲಿರುವ ಬೈಕ್ ರಾಲಿ 3 ತಿಂಗಳವರೆಗೆ ರೈತ ಜಾಗೃತಿ ಕಾರ್ಯಕ್ರಮ ನಡೆಸಲಿದೆ.

Advertisement

ಕಾವೇರಿ ನದಿ ಪಾತ್ರದಲ್ಲಿ 242 ಕೋಟಿ ಸಸಿಗಳನ್ನು ನೆಟ್ಟರೆ ಸುಮಾರು 10 ವರ್ಷದಲ್ಲಿ ಕಾವೇರಿ ನದಿ ನೀರಿನ ಹರಿವಿನ ಪ್ರಮಾಣ ಶೇ.50ರಷ್ಟು ಹೆಚ್ಚಾಗಲಿದೆ. ಆಗ ಕಾವೇರಿ ನದಿ ವ್ಯಾಜ್ಯವೂ ದೂರವಾಗುತ್ತದೆ  ಎಂದು ಸದ್ಗುರು ಹೇಳುತ್ತಾರೆ. ಮೊದಲಿಗೆ ಯವತ್ಮಾಲ್‌ ಜಿಲ್ಲೆಯ ವಘಾರಿ ನದಿಯ ಪುನಃಶ್ಚೇತನ ಕೈಗೊತ್ತಿಕೊಳ್ಳಲಾಗಿತ್ತು. ಇದೀಗ ಕಾವೇರಿ ನದಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನದಿ ಪಾತ್ರದಲ್ಲಿನ ಕೃಷಿ ಭೂಮಿಯಲ್ಲಿ ಅರಣ್ಯ ಬೆಳೆಸುವುದು, ಆ ಬಗ್ಗೆ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶ ಎಂದು ಜಗ್ಗಿ ವಾಸುದೇಚ್ ಹೇಳುತ್ತಾರೆ.’ಕಾವೇರಿ ನದಿ ಪಾತ್ರದ 85ಸಾವಿರ ಚದರ ಕಿ.ಮೀಗಳಲ್ಲಿ ನೂರು ತಾಲೂಕುಗಳಲ್ಲಿ ಒಳಗೊಂಡಂತೆ ಸಸಿ ನಡೆಲಾಗುವುದು.ರೈತರಿಗೆ ಉಚಿತವಾಗಿ ಸಸಿಗಳನ್ನು ನೀಡಲಾಗುವುದು. ಅಭಿಯಾನದಲ್ಲಿ ಸ್ವಯಂ ಸೇವಕರು(ನದಿವೀರರು) ಪಾಲ್ಗೊಳ್ಳಲಿದ್ದಾರೆ. ಸರಕಾರಗಳಿಂದ ರೈತರಿಗೆ 3-4 ವರ್ಷಗಳವರೆಗೆ ಸಬ್ಸಿಡಿ ಕೊಡಿಸಲಾಗುವುದು, ಆ ನಂತರ ಆ ಮರಗಳಿಂದಲೇ ರೈತರಿಗೆ ಹೆಚ್ಚಿನ ಆದಾಯ ಬರಲಿದೆ ಎನ್ನುವುದು ಅಭಿಯಾನದಲ್ಲಿ ರೈತರಿಗೆ ತಿಳಿಸಲಾಗುತ್ತದೆ ಎನ್ನುತ್ತಾರೆ ಜಗ್ಗಿ ವಾಸುದೇವ್.ಕಾವೇರಿ ನದಿ ನೀರಿನ ಪ್ರಮಾಣ ಶೇ.46ರಷ್ಟು ತಗ್ಗಿದೆ. ಪ್ರತಿವರ್ಷ 7ರಿಂದ 8 ಕಿಲೋಮೀಟರ್‌ ನದಿ ಒಣಗುತ್ತಿದೆ. ಕಾವೇರಿ ಕೂಗು ಅಭಿಯಾನದಿಂದ ನದಿಯನ್ನು ರಕ್ಷಿಸುವ ಜೊತೆಗೆ ಮಣ್ಣಿನ ಫಲವತ್ತತೆ ಹೆಚ್ಚಲಿದೆ.ಇದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ’ ಎಂದು ಅವರು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ  ಹೇಳಿದ್ದಾರೆ.

Advertisement

ಮಡಿಕೇರಿಯಲ್ಲಿ ಸಾರ್ವಜನಿಕ ಸಭೆ:ಸೆ. 3 ರಂದು ತಲಕಾವೇರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಧ್ಯಾಹ್ನ 3.30 ಗಂಟೆಗೆ ಮಡಿಕೇರಿಯ ಕ್ರಿಸ್ಟಲ್ ಹಾಲ್‍ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರೈತ ಉಪಯೋಗಿ ಬಗೆ ಬಗೆಯ ಸರಕು ಸಾಗಣೆ ಗಾಡಿಗಳು

ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…

4 hours ago

ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು

ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ  ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …

4 hours ago

ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ

ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…

4 hours ago

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶೇಷ ಫಿಲ್ಟರ್ ಕಾಫಿ ಕೆಫೆ – ಸರ್ಕಾರ ಒಪ್ಪಂದ | ಕಾಫಿ ಉದ್ಯಮ ಉತ್ತೇಜಿಸಲು ಮಹತ್ವದ ಹೆಜ್ಜೆ |

ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…

4 hours ago

ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ |  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …

4 hours ago

ಬೇಸಿಗೆಯಲ್ಲಿ ಲೋಡ್  ಶೆಡ್ಡಿಂಗ್ ಇಲ್ಲ | ಇಂಧನ ಸಚಿವ ಕೆ ಜೆ ಜಾರ್ಜ್

ಬೇಸಿಗೆಯಲ್ಲಿ ಈ ಬಾರಿ ಲೋಡ್  ಶೆಡ್ಡಿಂಗ್ ಮಾಡುವುದಿಲ್ಲ  ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್…

4 hours ago