ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆಯಾಗಲಿದೆ.ನೂತನ ಬ್ರಹ್ಮರಥದ ಕೆಲಸ ಕಾರ್ಯಗಳು ಬಹುತೇಕ ಪೂರ್ತಿಗೊಂಡಿದೆ. 2000 ಸಿ ಎಪ್ ಟಿ ವಿವಿಧ ಜಾತಿಯ ಮರ ಬಳಸಿಕೊಳ್ಳಲಾಗಿದೆ .ಕೇವಲ 7 ತಿಂಗಳಲ್ಲಿ ಸುಂದರವಾದ ಕೆತ್ತನೆಗಳೊಂದಿಗೆ ನೂತನ ಬ್ರಹ್ಮರಥ ಕೋಟೇಶ್ವರದಲ್ಲಿ ನಿರ್ಮಿಸಲಾಗಿದೆ. ನವರಾತ್ರಿ ಆರಂಭವಾಗುವ ಹೊತ್ತಿಗೆ ಸೆ.29 ರಂದು ರಥವನ್ನು ಬಿಟ್ಟು ಕೊಡಲಾಗುತ್ತಿದೆ.ಬಳಿಕ ಸೆ.30 ರಂದು ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಥ ಟ್ರಾಲಿಯ ಮೂಲಕ ಬರಲಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಮಾರು 400 ವರ್ಷಗಳ ಪುರಾತನವಾದ ರಥ ಈಗ ಇದೆ. ಈ ಅಳತೆಗೆ, ಶಾಸ್ತ್ರಕ್ಕೆ ಯಾವುದೇ ಧಕ್ಕೆಯಾಗದಂತೆ ಅದೇ ಮಾದರಿಯಲ್ಲಿ ಈಗ ಬ್ರಹ್ಮರಥ ನಿರ್ಮಾಣ ಮಾಡಲಾಗಿದೆ.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಬ್ರಹ್ಮರಥ ನಿರ್ಮಾಣಗೊಳ್ಳುತ್ತಿದ್ದು ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ರೈ ಕಡಬ ದಾನ ರೂಪದಲ್ಲಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿಕೊಡುತ್ತಿದ್ದಾರೆ.
ನೂತನ ರಥ ಹೀಗಿದೆ…
ನೂತನ ಬ್ರಹ್ಮರಥವು ಹಳೆಯ ಬ್ರಹ್ಮರಥದ ಮಾದರಿಯಲ್ಲೇ ನಿರ್ಮಾಣ ಮಾಡಲಾಗುತ್ತಿದ್ದು ರಥ ನೆಲದಿಂದ ಕಲಶದ ತುದಿವರೆಗೆ 63 ಅಡಿ ಎತ್ತರವಿರುತ್ತದೆ. ನೆಲದಿಂದ ರಥದ ಜಿಡ್ಡೆಯ ತನಕ 17 ಅಡಿ ಎತ್ತರವಿದ್ದರೆ ಚಕ್ರ 8 ಅಡಿ ಎತ್ರರವಿದೆ. ಅಂದಾಜು 22 ಟನ್ ತೂಕ ರಥ ಹೊಂದಿದೆ. 16 ಅಂತಸ್ತುಗಳನ್ನು ಹೊಂದಿದೆ. ರಥಕ್ಕೆ ಬೇಕಾದ ಮರಗಳನ್ನು ಉತ್ತರ ಭಾರತದಿಂದ ಸಾಗುವಾನಿ, ಗುಜರಾತಿನಿಂದ ಭೋಗಿಮರ ಹಾಗೂ ಸುಬ್ರಹ್ಮಣ್ಯ ಪ್ರಾಂತ್ಯದಿಂದ ಕಿರಾಲ್ ಬೋಗಿ ಮರ ತರಲಾಗಿದೆ.
ರಥಲ್ಲಿ ವಿವಿಧ ಕೆತ್ತನೆಗಳು ಇವೆ. ಪ್ರಮುಖವಾಗಿ ಸುಬ್ರಹ್ಮಣ್ಯ ಸ್ವಾಮಿಯ ಲೀಲಾವಳಿಗಳು, ಅಷ್ಟ ದಿಗ್ಫಾಲಕರು, ಮಹಾಭಾರತ, ಪಾರ್ವತಿ ಕಲ್ಯಾಣ, ದಕ್ಷಯಜ್ಞ, ಪುತ್ರಕಾಮೇಷ್ಠಿಯಾಗ , ಚತುರ್ವಂಶಿ ವಿಗ್ರಹ, ಶಿವನ ವಿವಿಧ ಲೀಲಾವಳಿಗಳು ಹಾಗೂ ಪ್ರಪಂಚದ ಸಕಲ ಜೀವರಾಧಿಗಳಿರುವ ಚಿತ್ರಗಳ ಕೆತ್ತನೆಯಿಂದ ಕೂಡಿದೆ. ರಥದಲ್ಲಿನ ಕಲೆಗಾಗಿ ಸಾಗುವಾನಿ ಮರ ಬಳಸಿಕೊಳ್ಳಲಾಗಿದೆ. ಚಕ್ರ ಮತ್ತು ಅಚ್ಚಿಗೆ ಬೋಗಿಮರ ಉಪಯೋಗಿಸಲಾಗಿದೆ.
ಸೆ.29 ರಂದು ರಥ ದಾನಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ಉಪಸ್ಥಿತಿಯಲ್ಲಿ ರಥ ಹಸ್ತಾಂತರಿಸಲಾಗುತ್ತಿದೆ.ಬಳಿಕ ಕೋಟೇಶ್ವರದ ವಿಶ್ವಕರ್ಮ ಕರಕುಶಲ ಶಿಲ್ಪಾಕಲಾ ಶಾಲೆಯಿಂದ ರಥ ಕುಕ್ಕೆಗೆ ಹೊರಡಲಿದೆ.ಮಂಗಳೂರು ಪಡೀಲ್ ಉಪ್ಪಿನಂಗಡಿ-ಕಡಬ ಮಾರ್ಗವಾಗಿ ಕುಕ್ಕೆಸುಬ್ರಹ್ಮಣ್ಯಕ್ಕೆ ಅ.3 ರಂದು ತಲುಪಲಿದೆ ಎಂದು ಕುಕ್ಕೆ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.
Advertisement
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು,…
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…