Advertisement
MIRROR FOCUS

ಸುಳ್ಯ ನಗರದಲ್ಲಿ ಇನ್ನು ಪ್ಲಾಸ್ಟಿಕ್ ಬಳಕೆ ಇಲ್ಲ… ಪೇಟೆಗೆ ಬರುವಾಗ ಬಟ್ಟೆ ಚೀಲ ತನ್ನಿರಿ…

Share

ಇಂದಿನಿಂದ  ಸುಳ್ಯನಗರ  ಪ್ಲಾಸ್ಟಿಕ್ ಮುಕ್ತ. ಜನರು ಪೇಟೆಗೆ ಬರುವಾಗ ಕೈಚೀಲ ತರಬೇಕು ಇಲ್ಲದೇ ಇದ್ದರೆ ಅಂಗಡಿಯವರು ಬಟ್ಟೆಯ ಚೀಲವನ್ನೇ ಉಪಯೋಗ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು  ಒಮ್ಮೆಲೇ ಸಾಧ್ಯವಿಲ್ಲ. ಹಂತ ಹಂತವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧವಾಗಬೇಕಿದೆ. ಏಕೆಂದರೆ ಭಾರತ ವಾರ್ಷಿಕವಾಗಿ 9.46 ದಶಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಇದರಲ್ಲಿ  ಬಹುಪಾಲು ಪರಿಸರಕ್ಕೆ ಹಾನಿಯಾಗುತ್ತದೆ. ಹೀಗಾಗಿ ನಾನೊಬ್ಬ ಬಳಕೆ ಮಾಡಿದರೆ ಪರವಾಗಿಲ್ಲ ಎನ್ನುವ ಮನಸ್ಥಿತಿ ದೂರವಾಗಲಿ ಎನ್ನುವ ಆಶಯದೊಂದಿಗೆ ಫೋಕಸ್…


ಸೆಪ್ಟಂಬರ್ 1 ರಿಂದ ಸುಳ್ಯ ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೆ ಬರಲಿದೆ. ಇದಕ್ಕಾಗಿ ಈಗಾಗಲೇ ಜಾಗೃತಿ ಅಭಿಯಾನ, ಕರಪತ್ರ ವಿತರಣೆ ಸಹಿತ ಜಾಗೃತಿಗಳು ನಡೆದಿವೆ. ಪ್ಲಾಸ್ಟಿಕ್ ನಿಷೇಧ ಜಾರಿ ಮಾಡುವ ಹಿನ್ನಲೆಯಲ್ಲಿ ವರ್ತಕರು ಪ್ಲಾಸ್ಟಿಕ್ ಮಾರಾಟ ಮಾಡದಂತೆ ಮತ್ತು ಸಾರ್ವಜನಿಕರು ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವ ಕಾರ್ಯಗಳೂ ನಡೆದವು.

ಸುಳ್ಯದಲ್ಲಿ  ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಬಹುದೊಡ್ಡ ಸಮಸ್ಯೆಯಾಗಿ ಕಾಡಿದ್ದು ಪ್ಲಾಸ್ಟಿಕ್ ತ್ಯಾಜ್ಯ. ಕಲ್ಚರ್ಪೆಯಲ್ಲಿ  ರಾಶಿ ರಾಶಿ ಇದೆ. ಅದೂ ಭರ್ತಿಯಾಗಿ ಈಚೆಗೆ ನಗರ ಪಂಚಾಯತ್ ಆವರಣದಲ್ಲೇ ಕಂಡುಬಂತು ಪ್ಲಾಸ್ಟಿಕ್ ಲೋಡ್. ಹೀಗಾಗಿ ಈಗಲಾದರೂ ಎಚ್ಚೆತ್ತುಕೊಳ್ಳದೇ ಇದ್ದರೆ ಪ್ಲಾಸ್ಟಿಕ್ ಭೂತ ಕಾಡುತ್ತಲೇ ಇರುತ್ತದೆ. ಈ ಕಾರಣದಿಂದ ಆಡಳಿತವು ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲರ ಸಹಕಾರ ಬೇಕಾಗಿದೆ. ಸುಳ್ಯ ಮಾತ್ರವಲ್ಲ ಈಗ ಮಂಗಳೂರಿನಲ್ಲೂ ಈ ಜಾಗೃತಿ ಆರಂಭವಾಗಿದೆ.

ಮಂಗಳೂರಿನಲ್ಲಿ ಇನ್ನು ದಂಡಪ್ರಯೋಗ: ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಪರಿಸರಕ್ಕೆ ಹಾನಿ ಹಾಗೂ ಮಾನವ ಮತ್ತಿತರ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಉಂಟು ಮಾಡುತ್ತಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್ಸ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮೊಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್ ನಿಂದ ತಯಾರಾದಂತಹ ಮೇಲ್ಕಂಡ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಪಾಲಿಕೆಯಿಂದ ಆದೇಶ ಹೊರಡಿಸಲಾಗಿದೆ. ಆದರೂ ಹಲವಾರು ಉದ್ದಿಮೆದಾರರು, ವ್ಯಾಪಾರಸ್ಥರು, ರಸ್ತೆ ಬದಿಯ ವ್ಯಾಪಾರಸ್ಥರು ನಿಷೇದಿಸಿರುವ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುತ್ತಿರುವುದು ಹಾಗೂ ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲದಲ್ಲಿ ಸಾಮಾಗ್ರಿಗಳನ್ನು ವಿತರಣೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಂತಹ ವ್ಯಾಪಾರಸ್ಥರ ಉದ್ದಿಮೆಯ ಮೇಲೆ ದಾಳಿ ನಡೆಸಿ ನಿಷೇದಿಸಿದ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿ ದಂಡ ವಿಧಿಸಲಾಗಿದ್ದರೂ ಇನ್ನೂ ಅನೇಕ ಅಂಗಡಿ, ವ್ಯಾಪಾರ ಉದ್ದಿಮೆಗಳಲ್ಲಿ ಬಳಕೆ ಮತ್ತು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.

ಆದುದರಿಂದ ಇನ್ನು ಮುಂದಕ್ಕೆ ಇದಕ್ಕೆ ಆಸ್ಪದ ನೀಡದೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವ ಉದ್ದಿಮೆದಾರರು ಸಪ್ಟೆಂಬರ್ 1 ರಿಂದ ಬಳಕೆ ಮತ್ತು ಮಾರಾಟ ಮಾಡುವುದು ಪರಿಶೀಲನೆ ಸಮಯದಲ್ಲಿ ಕಂಡು ಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೆ, ಎಲ್ಲಾ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡು, ರೂ 1000 ದಿಂದ ರೂ 10,000 ವರೆಗೆ ದಂಡ ವಿಧಿಸಲಾಗುವುದು. ಈ ನಿರ್ದೇಶವನ್ನು ಉಲ್ಲಂಘಿಸಿದ ಕಾರಣ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಪರಿಸರ (ಸಂರಕ್ಷಣೆ) ಕಾಯಿದೆ, 1986ರ ಸೆಕ್ಷನ್ 19ರ ಅನ್ವಯ ಪ್ರದತ್ತವಾಗಿರುವ ಅಧಿಕಾರದಂತೆ ಹಾಗೂ ಉದ್ದಿಮೆ ಪರವಾನಿಗೆ ರದ್ದುಗೊಳಿಸುವ ಕ್ರಮವನ್ನು ಕೂಡ ಕೈಗೊಳ್ಳಲಾಗುವುದು ಎಂದು ಆಯುಕ್ತರು ಮಹಾನಗರಪಾಲಿಕೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ಭಾರತ ವಾರ್ಷಿಕವಾಗಿ 9.46 ದಶಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿಸುತ್ತದೆ…!: ಭಾರತವು ವಾರ್ಷಿಕವಾಗಿ 9.46 ದಶಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ.  ಅದರಲ್ಲಿ 40 ಪ್ರತಿಶತದಷ್ಟು ಸಂಗ್ರಹವಾಗದೆ ಉಳಿದಿದೆ ಮತ್ತು 43 ಶೇಕಡಾವನ್ನು ಪ್ಯಾಕೇಜಿಂಗ್ ಗೆ  ಬಳಸಲಾಗುತ್ತದೆ. ಹೆಚ್ಚಿನವು ಏಕ-ಬಳಕೆಯಾಗಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.

ಪ್ರಕೃತಿಯಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ತೊಡೆದುಹಾಕಲು ಮತ್ತು ಪ್ಲಾಸ್ಟಿಕ್ ಮರುಬಳಕೆಯ ಆರ್ಥಿಕತೆಯತ್ತ ಸಾಗಲು ಸ್ವಯಂಪ್ರೇರಿತವಾಗಿ ಸಂಸ್ಥೆಯೊಂದು  ಅಧ್ಯಯನವನ್ನು ನಡೆಸಿದೆ. ಜಾಗತಿಕವಾಗಿ, 1950 ರಿಂದ 8.3 ಶತಕೋಟಿ ಟನ್ ಪ್ಲಾಸ್ಟಿಕ್ ಉತ್ಪಾದಿಸಲಾಗಿದೆ. ಅದರಲ್ಲಿ 60 ಪ್ರತಿಶತದಷ್ಟು  ನೈಸರ್ಗಿಕವಾಗಿ ಪರಿಸರದಲ್ಲಿ ಉಳಿದುಕೊಂಡಿದೆ. ಭಾರತವು ವಾರ್ಷಿಕವಾಗಿ 9.46 ದಶಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ.  ಅದರಲ್ಲಿ 40 ಪ್ರತಿಶತದಷ್ಟು ಸಂಗ್ರಹವಾಗದೆ ಉಳಿದಿದೆ ಮತ್ತು 43 ಶೇಕಡಾವನ್ನು ಪ್ಯಾಕೇಜಿಂಗ್ ಗೆ  ಬಳಸಲಾಗುತ್ತದೆ  ಎಂದು ಅಧ್ಯಯನ ಸಂಸ್ಥೆ ವರದಿ ಮಾಡಿದೆ.

ಈ ಬಗ್ಗೆಯೇ ಎರಡು ದಿನಗಳ ಹಿಂದೆ ಸಭೆ ನಡೆದಿದೆ. ವಿವಿಧ ಕಂಪನಿಯ ಪ್ರಮುಖರು, ಪರಿಸರ ತಜ್ಞರು ಇದರಲ್ಲಿ ಭಾಗವಹಿಸಿದ್ದರು. ಸಭೆಯ ಬಳಿಕ  ಏಕಬಳಕೆಯ ಪ್ಲಾಸ್ಟಿಕ್ ಅನ್ನು 2022 ರ ವೇಳೆಗೆ ನಿರ್ಮೂಲನೆ ಮಾಡುವ ಬದ್ಧತೆಯನ್ನು ಭಾರತ ಘೋಷಿಸಿದೆ. ಇದು ವಿಶ್ವದ ಅತ್ಯಂತ ಮಹತ್ವಾಕಾಂಕ್ಷೆಯ ಗುರಿಗಳಲ್ಲಿ ಇದೂ ಒಂದಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಬದ್ಧತೆ ಹೊಂದಿರುವ 60 ದೇಶಗಳಲ್ಲಿ ಭಾರತವೂ ಒಂದಾಗಿದೆ. ಇದಕ್ಕೆ ಪೂರಕವಾಗಿ  ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದಂದು ಮಾಡಿದ ಭಾಷಣದಲ್ಲಿ ದೇಶದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧ “ಹೊಸ ಬೃಹತ್ ಆಂದೋಲನ” ಕ್ಕೆ ಕರೆ ನೀಡಿದ್ದಾರೆ. ಈಗ ನಮ್ಮೆಲ್ಲರ ಮೇಲೂ ಜವಾಬ್ದಾರಿ ಇದೆ. ಏಕ ಬಳಕೆ ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು  ಹಾಗು ಪ್ಲಾಸ್ಟಿಕ್ ನಿಷೇಧದ ಸಂದರ್ಭ ಎಲ್ಲರೂ ಕೈಜೋಡಿಸಬೇಕಿದೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಎಚ್ಚರಿಕೆ – ಉಡುಪಿ, ದಕ್ಷಿಣ ಕನ್ನಡ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ, ಗಂಟೆಗೆ 50 ಕಿ.ಮೀ. ವೇಗದ ಗಾಳಿ ಸಾಧ್ಯತೆ

ಮುಂದಿನ 3 ಗಂಟೆಗಳ ಕಾಲ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ…

1 hour ago

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

3 days ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

3 days ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

3 days ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

4 days ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

4 days ago