ಸುಬ್ರಹ್ಮಣ್ಯ: ಮೊನ್ನೆ ಮೊನ್ನೆ ಯುವಬ್ರಿಗೆಡ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದ ಪುಣ್ಯ ನದಿ ಕುಮಾರಧಾರಾ ಸ್ವಚ್ಛತಾ ಕಾರ್ಯ ನಡೆಯಿತು. ಸುಮಾರು 10 ಟನ್ ತ್ಯಾಜ್ಯ ನದಿಯಿಂದ ಹಾಗೂ ಆಸುಪಾಸಿನಿಂದ ತೆಗೆಯಲಾಯಿತು. ಆದರೆ ಈಗ ಮತ್ತದೇ ಸ್ಥಿತಿ ನಿರ್ಮಾಣವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಕುಕ್ಕೆ ಭಕ್ತರೇ ಪ್ಲೀಸ್, ನದಿಯನ್ನು ಸ್ವಚ್ಛವಾಗಿರಿಸಿ, ಪುಣ್ಯ ಕ್ಷೇತ್ರದಲ್ಲಿ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯಬೇಡಿ. ಇದು ನಮ್ಮ ರಿಕ್ವೆಸ್ಟ್….
ಕಳೆದ ವಾರ ಯುವಬ್ರಿಗೆಡ್ನ ಸುಮಾರು 300 ಯುವಕರು ಸುಬ್ರಹ್ಮಣ್ಯದ ಪವಿತ್ರ ನದಿಗಳಿಂದ ಸುಮಾರು 8-10 ಟನ್ ನಷ್ಟು ಬಟ್ಟೆ, ಬಾಟಲಿ ಹಾಗೂ ಪ್ಲಾಸ್ಟಿಕ್ ಗಳನ್ನು ತೆಗೆದು ಪುನರುಜ್ಜೀವ ನೀಡಿದ್ದರು. ಆದರೆ ಇಲ್ಲಿಗೆ ಬರುವ ಕೆಲವು ಬೇಜವಾಬ್ದಾರಿ ಪ್ರವಾಸಿಗರು ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ. ತ್ಯಾಜ್ಯವನ್ನು ರಸ್ತೆ ಬದಿ ಮಾತ್ರವಲ್ಲ ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರ ಬಗ್ಗೆ ನಿಗಾ ಬೇಕಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ, ಸ್ಥಳಿಯ ಪಂಚಾಯತ್ ಸ್ವಚ್ಛತೆಗೆ ಆದ್ಯತೆ ನೀಡಿದರೂ ಭಕ್ತಾದಿಗಳಲ್ಲಿ ಜಾಗೃತಿ ಮೂಡಬೇಕು, ಸ್ಥಳೀಯ ವರ್ತಕರು ಎಚ್ಚರಿಸಬೇಕು. ಹೀಗಾಗಿ ಸ್ವಚ್ಛ ಕುಮಾರಧಾರಾ, ಸ್ವಚ್ಘ ಕುಕ್ಕೆ ಸುಬ್ರಹ್ಮಣ್ಯ ಕಾಣಲು ಸಾಧ್ಯವಿದೆ.
ನಾಗಾರಾಧನೆಗೆ ಜಗತ್ ಪ್ರಸಿದ್ಧವಾದ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು., ಸುತ್ತಮುತ್ತಲಿನ ಪರಿಸರಕ್ಕೆ ಮತ್ತು ನದಿಗಳಿಗೆ ಕಸ ಎಸೆಯುವವರಿಗೆ ತಕ್ಕ ಪಾಠ ಕಲಿಸಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೇವೆ ಎಂದು “ನಮ್ಮ ಸುಬ್ರಹ್ಮಣ್ಯ” ದ ತಂಡ ಆಗಾಗ ಪ್ರಾರ್ಥನೆ ಮಾಡುತ್ತದೆ.
ಯುವಬ್ರಿಗೇಡ್ , ನಮ್ಮಸುಬ್ರಹ್ಮಣ್ಯ, ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ, ಪಂಚಾಯತ್ ಸೇರಿದಂತೆ ವಿವಿಧ ಸಂಘಟನೆಗಳು ಸ್ವಚ್ಛತೆಗೆ ನಿರಂತರ ಕೆಲಸ ಮಾಡುತ್ತಿದೆ. ಇದನ್ನು ಗಮನಿಸಿ ದಯವಿಟ್ಟು ಸ್ವಚ್ಛತೆಗೆ ಎಲ್ಲಾ ಭಕ್ತರು, ಎಲ್ಲ ಸಾರ್ವಜನಿಕರು ಕೈಜೋಡಿಸಿ ಎಂಬುದು “ಸುಳ್ಯನ್ಯೂಸ್.ಕಾಂ” ಆಶಯವೂ ಆಗಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…