ಬೆಳ್ಳಾರೆ: ಕುಕ್ಕೆ ಸುಬ್ರಹ್ಮಣ್ಯದ ಮುಂಭಾಗಿಲದಲ್ಲಿ ಇರುವ ಲೋಹ ಪರಿಶೋಧಕ ಯಂತ್ರ ಕಳೆದ ಹಲವು ದಿನಗಳಿಂದ ಕೆಟ್ಟು ಹೋಗಿದ್ದು, ದೇವಸ್ಥಾನದ ಹೊರಾಂಗಣದಲ್ಲಿಯೂ ಸಿಸಿ ಟಿವಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದೆಲ್ಲವೂ ಭದ್ರತೆ ಹಾಗು ಸುರಕ್ಷತೆಯ ಲೋಪವಾಗಿದೆ. ಇದನ್ನು ಗಮನಿಸಿ ಕೂಡಲೆ ವ್ಯವಸ್ಥೆ ಸರಿಪಡಿಸಿಕೊಡಬೇಕೆಂದು ಆಗ್ರಹಿಸಿ ರಾಜ್ಯ ಅಪರಾಧ ನಿಗ್ರಹ ದಳದ ವತಿಯಿಂದ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಅವರಿಗೆ ಲಿಖಿತ ಮನವಿ ಸಲ್ಲಿಸಲಾಯಿತು.
ಮನವಿ ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಶೀಘ್ರವೇ ಕ್ರಮಕೈಗೊಳ್ಳುವುದಾಗಿ ಮನವಿದಾರರಿಗೆ ಭರವಸೆ ನೀಡಿದರು. ಅಪರಾಧ ನಿಗ್ರಹ ದಳದ ರಾಜ್ಯಾಧ್ಯಕ್ಷ ಪ್ರವೀಣ ರೈ ಮರುವಂಜ, ಜಿಲ್ಲಾಧ್ಯಕ್ಷ ರಾಜಾರಾಂ ಭಟ್ ಎಡಕ್ಕಾನ, ಮೈಸೂರು ವಿಭಾಗದ ಗೀತಾ ಮುತ್ತಪ್ಪ, ತುಳುನಾಡು ರಕ್ಷಣಾ ವೇದಿಕೆಯ ಸುರೇಶ್ ಉಜಿರಡ್ಕ, ಎನ್.ಎಸ್.ಯು.ಐ ಸುಳ್ಯ ಘಟಕ ಅಧ್ಯಕ್ಷ ಪವನ್ ರೈ ಮರುವಂಜ ಉಪಸ್ಥಿತರಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…