ಸುಬ್ರಹ್ಮಣ್ಯ: ಕುಮಾರಪರ್ವತ ಚಾರಣಕ್ಕೆ ಹೋದ 12 ಜನ ಯುವಕರ ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಉದ್ಯೋಗಿ ಬೆಂಗಳೂರು ಗಾಯತ್ರಿ ನಗರದ ನಿವಾಸಿ 25 ವರ್ಷದ ಯುವಕ ಸಂತೋಷ್ ಭಾನುವಾರ ಸಂಜೆ ನಾಪತ್ತೆಯಾಗಿದ್ದಾರೆ. ಇದೀಗ ಹುಡುಕಾಟ ಆರಂಭವಾಗಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳ 5 ತಂಡ ಹುಡುಕಾಟ ಆರಂಭಿಸಿದೆ. 5 ತಂಡಗಳು ಪರ್ವತದ ಬೇರೆ ಬೇರೆ ಕಡೆಗಳಲ್ಲಿ ಹುಡುಕಾಟ ಆರಂಭಿಸಿದೆ. ಸ್ಥಳಿಯರೂ ಜೊತೆ ಸೇರಿದ್ದಾರೆ.
ಬೆಂಗಳೂರಿನ 12 ಜನರ ಚಾರಣಿಗರ ತಂಡವು ಶನಿವಾರ ಬೆಳಗ್ಗೆ ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ ಚಾರಣ ಬೆಳೆಸಿ ರಾತ್ರಿ ಗಿರಿಗದ್ದೆಯಲ್ಲಿ ವಾಸ್ತವ್ಯ ಹೂಡಿ ಭಾನುವಾರ ಬೆಳಗ್ಗೆ ಕುಮಾರಪರ್ವತ ಏರಿತ್ತು. ಮಧ್ಯಾಹ್ನದ ನಂತರ ವಾಪಾಸು ಗಿರಿಗದ್ದೆಗೆ ಬಂದು ಸಂಜೆ ಸುಬ್ರಹ್ಮಣ್ಯದ ಕಡೆಗೆ ಪ್ರಯಾಣ ಬೆಳೆಸಿತ್ತು. 12 ಜನರ ತಂಡದಲ್ಲಿದ್ದವರು ಸುಸ್ತಾದ್ದರಿಂದ ತಂಡ ತಂಡವಾಗಿ ನಡೆದುಕೊಂಡು ಬರುತ್ತಿದ್ದರು. 5 ಮಂದಿ ಮುಂದೆ ಹಾಗೂ ಆ ನಂತರ 6 ಜನ ಹಾಗೂ ನಡುವೆ ನಾಪತ್ತೆಯಾದ ಸಂತೋಷ್ ಒಬ್ಬರೇ ಬರುತ್ತಿದ್ದರು. ಮಳೆ ಸುರಿದ ಹಿನ್ನೆಲೆಯಲ್ಲಿ ಜಾಕೆಟ್ ಬದಲಿಸಲೆಂದು ನಿಂತಿದ್ದವರು ಬಳಿಕ ಪತ್ತೆಯಾಗಲಿಲ್ಲ ಎಂದು ತಂಡದ ಸದಸ್ಯರು ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ಬೆಳ್ಳಾರೆ ,ಸುಳ್ಯ , ಸುಬ್ರಹ್ಮಣ್ಯ ಹಾಗೂ ಪುತ್ತೂರು ಪೊಲೀಸರ ತಂಡ ಹಾಗೂ ಅರಣ್ಯ ಇಲಾಖೆಯ ಸಿಬಂದಿಗಳ ತಂಡ ಪರ್ವತದ ವಿವಿಧ ಕಡೆಗಳಲ್ಲಿ ಹುಡುಕಾಟ ಆರಂಭಿಸಿದೆ. ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಸುಬ್ರಹ್ಮಣ್ಯ ಗ್ರಾಪಂ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಸೇರಿದಂತೆ ಸ್ಥಳೀಯರು ಜೊತೆಗಿದ್ದಾರೆ.
ಇದುವರೆಗೆ ಸುಬ್ರಹ್ಮಣ್ಯದಿಂದ ಗಿರಿಗದ್ದೆಯವರೆಗೆ ಯಾವುದೇ ಕಾಡುಪ್ರಾಣಿಗಳಿಂದ ಹಾಗೂ ಇತರ ಯಾವುದೇ ಸಮಸ್ಯೆ ಆದದ್ದಿಲ್ಲ. ಗಿರಿಗದ್ದೆಗೆ ತಡರಾತ್ರಿ ಕೂಡಾ ನಡೆದುಕೊಂಡು ಹೋಗುತ್ತಾರೆ. ಹೀಗಾಗಿ ಈ ಯುವಕರ ತಂಡದ ಯುವಕ ದಾರಿ ತಪ್ಪಿ ಹೋಗಿರಬಹುದೇ ಅಥವಾ ಇನ್ನೇನಾದರೂ ಕಾರಣ ಇದೆಯೇ ಎಂಬ ಸಂದೇಹವೂ ಈಗ ಇದೆ.
ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೊಡಗಿನಲ್ಲಿ…
ಭಾರತದ ವೈಜ್ಞಾನಿಕ ಸಾಧನೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸುವ ಮಾನವ ಸಹಿತವಾದ ಗಗನಯಾನದ ನೌಕೆ…
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…
ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …