Advertisement
ನಮ್ಮೂರ ಸುದ್ದಿ

ಕೆರೆಯಿಂದ ಕಾಡಿಗೆ ಓಡಿತು ಕಾಡುಕೋಣ….

Share

ಸುಳ್ಯ:ಮಾವಿನಕಟ್ಟೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಕೆರೆಗೆ ಬಿದ್ದಿದ್ದ ಕಾಡುಕೋಣದ ಮರಿ ಶನಿವಾರ ಸಂಜೆಯ ಹೊತ್ತಿಗೆ ಕಾಡು ಸೇರಿತು. ಶನಿವಾರ ಬೆಳಗ್ಗಿನಿಂದಲೇ ಸತತ ಪ್ರಯತ್ನದ ಬಳಿಕ ಕಾಡು ಸೇರಲು ಸಾಧ್ಯವಾಯಿತು.

ಸುಳ್ಯ  ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಉದಯಗಿರಿ  ಇಲ್ಲಿಯ ಕೆರೆಗೆ ಶುಕ್ರವಾರ ರಾತ್ರಿ  ಆಯ ತಪ್ಪಿ ಕಾಡುಕೋಣ ಬಿದ್ದಿತ್ತು. ಶನಿವಾರ ಬೆಳಗ್ಗೆ ಸ್ಥಳೀಯರಿಗೆ ತಿಳಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಸಂಜೆಯವರೆಗೆ ಕಾರ್ಯಾಚರಣೆ ನಡೆದಿತ್ತು.

 

ಕಾಡುಕೋಣ ಬಿದ್ದ  ವಿಷಯ ತಿಳಿದು ಜನ ಸಾಗರವೇ ಕೆರೆಯ ಕಡೆಗೆ ಬಂದಿತ್ತು. ಬೆಳಗ್ಗಿನಿಂದಲೇ ಕಾಡು ಕೋಣ ರಕ್ಷಣೆ ಕಾರ್ಯ ಪ್ರಾರಂಭವಾಯಿತು. ನೀರಿಗೆ ಬಿದ್ದು ಸುಸ್ತಾಗಿದ್ದ ಕಾಡುಕೋಣವನ್ನು  ಕೋಣವನ್ನು ಹೊರ ಹಾಕುವುದು‌ ತ್ರಾಸದಾಯಕವಾಯಿತು. ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಯುವಕರ ಶ್ರಮದಿಂದ ಸಂಜೆಯ ವರೆಗೂ ಕಾರ್ಯ ಮುಂದುವರೆಯಿತು. ಕಾಡುಕೋಣವನ್ನು ರಕ್ಷಣೆ ಮಾಡುವುದು ಎಲ್ಲರ ಕಾಳಜಿಯಾಗಿತ್ತು. ಬೆಳಗ್ಗೆ ಅಡಿಕೆ ಮರದ ಪಾಲ ಹಾಕಿದ್ದರೆ ನಂತರ ಹಗ್ಗದ ಸಹಾಯದಿಂದ ಮೇಲೆಳೆದು ಓಡುವಂತೆ ಮಾಡಲಾಯಿತು. ಕೊನೆಗೂ ಸಂಜೆಯ ವೇಳೆಗೆ ಕಾಡುಕೋಣ ಕಾಡು ಸೇರಿತು.

ಈ  ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಅರಣ್ಯ ಇಲಾಖೆ ವಂದನೆ ಸಲ್ಲಿಸಿದೆ. ವನ್ಯ ಜೀವಿಗಳ ರಕ್ಷಣೆ ನಮ್ಮದು. ಪರಿಸರ ಉಳಿಸಿ ಎಂಬ ಘೋಷ ವಾಕ್ಯ ಮೊಳಗಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜಿಐ ಮಾನ್ಯತೆಯ ‘ಗುಲ್ಬರ್ಗಾ ತೊಗರಿ ಬೇಳೆ’ಗೆ ಮಾಲ್ಡೀವ್ಸ್‌ ಮಾರುಕಟ್ಟೆ – ರಫ್ತಿಗೆ ಕೇಂದ್ರದ ಅನುಮತಿ

ಜಿಐ ಮಾನ್ಯತೆ ಪಡೆದ ‘ಗುಲ್ಬರ್ಗಾ ತೊಗರಿ ಬೇಳೆ’ಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲು ಕೇಂದ್ರ…

3 hours ago

ನಾಗರಿಕ ಪ್ರಜ್ಞೆ ಎಂದರೆ ಕಾನೂನು ಪಾಲನೆ ಮಾತ್ರವಲ್ಲ – ನಮ್ಮ ನಡವಳಿಕೆಯೇ ಸಮಾಜದ ಕನ್ನಡಿ

ನಾಗರಿಕ ಪ್ರಜ್ಞೆ ಎಂದರೆ ಕಾನೂನಿನ ಭಯದಿಂದ ನಿಯಮ ಪಾಲಿಸುವುದಷ್ಟೇ ಅಲ್ಲ; ಇತರರ ಹಕ್ಕು,…

3 hours ago

ಹಾಲಿನ ದರ ಕನಿಷ್ಠ ₹10 ಹೆಚ್ಚಳಕ್ಕೆ ಕೆಎಂಎಫ್‌ ಮನವಿ – ಹೈನುಗಾರರಿಗೆ ಏನು ಪ್ರಯೋಜನ..? ಗ್ರಾಹಕರಿಗೆ ಎಷ್ಟು ಹೊರೆ..?

ರಾಜ್ಯದಲ್ಲಿ ಹಾಲಿನ ದರವನ್ನು ಕನಿಷ್ಠ ಲೀಟರ್‌ಗೆ ₹10 ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ಸರ್ಕಾರಕ್ಕೆ…

6 hours ago

ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು

ಹಳೆಯ ನೋವು, ಕೋಪ, ತಿರಸ್ಕಾರ ಮತ್ತು ನಿರೀಕ್ಷೆಗಳ ಭಾರವನ್ನು ಹೊಸ ಸಂಬಂಧಗಳ ಮೇಲೆ…

18 hours ago

ರೈತರಿಗೆ ವಿದ್ಯುತ್‌ ಶಾಕ್ – ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ- ಪರ್ಯಾಯ ಶಕ್ತಿಯ ಬಗ್ಗೆ ಯೋಚಿಸಲು ಸಕಾಲ

ಮಳೆ ಕೊರತೆ ಮತ್ತು ಜಲವಿದ್ಯುತ್ ಉತ್ಪಾದನೆ ಕುಸಿತದ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ…

24 hours ago

ಅ.29 ರಿಂದ ನ.11 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ -12 ದಿನ ಸಾರ್ವಜನಿಕ ದರ್ಶನ

ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್…

24 hours ago