ಸವಣೂರು : ಸವಣೂರು ಗ್ರಾಮದ ಆರೆಲ್ತಡಿ ಕೆಡೆಂಜಿ ಭಾಗವನ್ನು ಸಂಪರ್ಕಿಸುವ ಜಿ.ಪಂ ರಸ್ತೆಯ ಮಳೆಗಾಲದ ಆರಂಭದಲ್ಲೇ ಕೆಸರುಗದ್ದೆಯಂತಾಗಿದೆ.
ಮಂಜೇಶ್ವರ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಚಾಪಳ್ಳ ಎಂಬಲ್ಲಿಂದ ಆರೆಲ್ತಡಿ ಶಾಲೆಯ ಗೇಟಿನ ತನಕ ಸುಮಾರು ಎರಡು ಕಿ.ಮೀ ಉದ್ದದ ಈ ರಸ್ತೆಯ ಅರ್ಧ ಭಾಗ ಡಾಂಬರೀಕರಣ ಹಾಗೂ ಕಾಂಕ್ರಿಟೀಕರಣಗೊಂಡಿದ್ದು ಇನ್ನರ್ಧ ಭಾಗ ಮಣ್ಣಿನ ಕಚ್ಛಾ ರಸ್ತೆಯಾಗಿದೆ.
ಈ ಬಾರಿ ಮಳೆಗಾಲದ ಆರಂಭಕ್ಕೆ ಮೊದಲು ಗ್ರಾಮ ಪಂಚಾಯತ್ ಅನುದಾನದಿಂದ ರಸ್ತೆಯ ಹೊಂಡಗಳಿಗೆ ಮಣ್ಣು ತುಂಬಿಸಿ ಅಲ್ಪಸ್ವಲ್ಪ ದುರಸ್ತಿ ಕಾಮಗಾರಿ ನಡೆಸಲಾಗಿದ್ದರೂ, ಅದು ಪ್ರಥಮ ಮಳೆಗೇ ಕೊಚ್ಚಿ ಹೋಗಿದೆ.ಅಷ್ಟೇ ಅಲ್ಲದೆ ರಸ್ತೆಗೆ ಬಿದ್ದ ಮಳೆಯ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು ರಸ್ತೆ ಇನ್ನಷ್ಟು ಹದಗೆಡಲು ಕಾರಣವಾಗಿದೆ
ಬೆಳಂದೂರು ಜಿ.ಪಂ.ವ್ಯಾಪ್ತಿಯಲ್ಲಿರುವ ಈ ರಸ್ತೆಯ ಮೂಲಕ ಆರೇಲ್ತಡಿ ಶಾಲೆ,ಅಂಗನವಾಡಿ, ಆರೇಲ್ತಡಿ ದೈವಸ್ಥಾನ ಹಾಗೂ ಇಲ್ಲಿನ ಜನವಸತಿ ಪ್ರದೇಶಗಳಿಗೆ ಹೋಗಬೇಕಾಗಿದೆ.ರಸ್ತೆಯ ತುಂಬಾ ಹೊಂಡಗಳು ತುಂಬಿದ್ದು ಅದರಲ್ಲಿ ನೀರು ತುಂಬಿಕೊಂಡು ಪಾದಚಾರಿಗಳಿಗೂ ಕೆಸರಿನ ಸಿಂಚನವಾಗುತ್ತಿದೆ. ಅಲ್ಲದೆ ರಸ್ತೆಯಲ್ಲಿ ಕೆಸರು ತುಂಬಿಕೊಂಡಿರುವುದರಿಂದ ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.ಈ ರಸ್ತೆಗೆ ಸುಳ್ಯ ಶಾಸಕ ಎಸ್.ಅಂಗಾರ ಹಾಗೂ ಜಿ.ಪಂ.ಸದಸ್ಯರ ಅನುದಾನ ದಲ್ಲಿ ಒಟ್ಟು 35 ಲಕ್ಷರೂ ಗಳ ಕಾಂಕ್ರೀಟಿಕರಣ ಹಾಗೂ ಡಾಮರೀಕರಣ ನಡೆದಿದೆ.
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…