ದೇಲಂಪಾಡಿ: ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿ ಜನವಸತಿ ಪ್ರದೇಶದ ಸಮೀಪ 12 ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಆರು ಆನೆಗಳ ಎರಡು ಹಿಂಡುಗಳಾಗಿ ಬೀಡು ಬಿಟ್ಟಿದೆ. ಬೆಳ್ಳಿಪ್ಪಾಡಿ ಪ್ರದೇಶದಲ್ಲಿ ಆರು ಆನೆಗಳ ಹಿಂಡು ಮತ್ತು ಮಯ್ಯಾಳ-ನೂಜಿಬೆಟ್ಟು ಪ್ರದೇಶದಲ್ಲಿ ಆರು ಆನೆಗಳು ಬೀಡು ಬಿಟ್ಟಿದ್ದು ಕೃಷಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಭೀತಿಯಲ್ಲಿ ದಿನ ಕಳೆಯುವಂತಾಗಿದೆ.
ಬೆಳ್ಳಿಪ್ಪಾಡಿ ಭಾಗದಲ್ಲಿ ವ್ಯಾಪಕ ಕೃಷಿ ಹಾನಿಯನ್ನೂ ಮಾಡಿದೆ. ಆದುದರಿಂದ ಆನೆಗಳನ್ನು ದೂರ ಅಟ್ಟಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಮುಂದಾಳು ಹಾಗೂ ಮುಳಿಯಾರು ವಲಯ ಅಡಿಕೆ ಕೃಷಿಕರ ಸಂರಕ್ಷಣಾ ಸಮಿತಿ ಸಂಚಾಲಕ ಬೆಳ್ಳಿಪ್ಪಾಡಿ ಸದಾಶಿವ ರೈ ಆಗ್ರಹಿಸಿದ್ದಾರೆ. ಕೇರಳದ ದೇಲಂಪಾಡಿ ಮತ್ತು ಕರ್ನಾಟಕದ ಮಂಡೆಕೋಲು ಗ್ರಾಮದಲ್ಲಿ ಹಲವು ವರ್ಷಗಳಿಂದ ಕಾಡಾನೆ ಹಾವಳಿ ಇದ್ದು ಆನೆಗಳು ಕೃಷಿ ನಾಶ ಮಾಡುತಿದೆ. ದೇಲಂಪಾಡಿ ಗ್ರಾಮದಲ್ಲಿ ಆನೆ ಹಾವಳಿಯಿಂದ ಭಾರೀ ಪ್ರಮಾಣದಲ್ಲಿ ಕೃಷಿ ನಾಶ ನಷ್ಟ ಸಂಭವಿಸಿದ್ದರೂ, ಸರಕಾರಕ್ಕೆ ಎಷ್ಟು ಮನವಿಯನ್ನು ಸಮರ್ಪಿಸಿದ್ದರೂ ಯಾವ ಕೃಷಿಕನಿಗೂ ಕೇರಳ ಸರಕಾರದಿಂದ ಯಾವುದೇ ಪರಿಹಾರ ದೊರಕಿರುವುದಿಲ್ಲ ಮತ್ತು ಆನೆ ಹಾವಳಿ ತಡೆಯಲು ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ. ಈ ವರ್ಷ ಧಾರಕಾರವಾಗಿ ಸುರಿದ ಮಳೆಯ ಪ್ರಭಾವದಿಂದ ಅಡಿಕೆ ಮರದ ಫಸಲು ತೀರಾ ಕಡಿಮೆಯಾಗಿದೆ. ಕೃಷಿಕ ತತ್ತರಿಸುತ್ತಿರುವ ವೇಳೆ ಮತ್ತೊಂದೆಡೆ ಆನೆಗಳ ಭೀತಿ ಕಾಡುತ್ತಾ ಇದೆ.
ಅಲ್ಲದೆ ಕಳೆದ ಒಂದು ವಾರದಿಂದ ಪರಪ್ಪ ರಕ್ಷಿತಾರಣ್ಯದ ಬೆಳ್ಳಿಪ್ಪಾಡಿ-ದೇವರಗುಂಡ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಎಂದು ತಿಳಿದು ಬರುತ್ತಿದೆ. ದೇವರಗುಂಡದಲ್ಲಿ ನಾಯಿಯೊಂದನ್ನು ಚಿರತೆಯು ಕೊಂದಿರುವುದನ್ನು ಸ್ಥಳೀಯರು ಖಚಿತಪಡಿಸಿರುತ್ತಾರೆ. ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ-ಪರಪ್ಪ ಪ್ರದೇಶದ ನಿವಾಸಿಗಳಾದ ನೂರಕ್ಕೂ ಹೆಚ್ಚು ಮಕ್ಕಳು ಜಾಲ್ಸೂರು-ಸುಳ್ಯದ ವಿವಿಧ ವಿದ್ಯಾಲಯಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಎಲ್ಲಾ ರಸ್ತೆ-ದಾರಿಗಳು ರಕ್ಷಿತಾರಣ್ಯದ ಮಧ್ಯೆ ಹಾದು ಹೋಗುತ್ತಿದೆ. ಜನರು ರಸ್ತೆಗೆ ಇಳಿಯಲು ಭಯ ಪಡುವ ಸ್ಥಿತಿ ಉಂಟಾಗಿದೆ. ಆದುದರಿಂದ ಆನೆಗಳನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕೃಷಿಕರು ಧರಣಿ ಸತ್ಯಾಗ್ರಹ ಮಾಡಬೇಕಾದ ಅನಿವಾರ್ಯತೆ ಉಂಟಾಗಬಹುದು ಎಂದು ಬೆಳ್ಳಿಪ್ಪಾಡಿ ಸದಶಿವ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…