Advertisement
ಸುದ್ದಿಗಳು

ಕೊಡವ ಕೌಟುಂಬಿಕ ಹಾಕಿ ಉತ್ಸವ : ಮುಕ್ಕಾಟಿರ ಕುಟುಂಬದಿಂದ ಲಾಂಛನ ಬಿಡುಗಡೆ

Share

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಹಬ್ಬದ ಆತಿಥ್ಯ ವಹಿಸಿರುವ ಬೆಳ್ಳೂರು ಹರಿಹರ ಮುಕ್ಕಾಟಿರ ಕುಟುಂಬ ಮುಂದಿನ ವರ್ಷ ನಡೆಯಲಿರುವ ಹಾಕಿ ಉತ್ಸವದ ಲಾಂಛನ ಬಿಡುಗಡೆಗೊಳಿಸಿದೆ.

ಬಾಳುಗೋಡು ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಪ್ರತಾಪ್‍ಸಿಂಹ ಅವರು ಮುಕ್ಕಾಟಿರ ಹಾಕಿ ಹಬ್ಬಕ್ಕೆ ಅಗತ್ಯ ಅನುದಾನ ದೊರಕಿಸಿ ಕೊಡುವ ಭರವಸೆ ನೀಡಿದರು. ಮಾಜಿ ಸಚಿವ ಹೆಚ್.ವಿಶ್ವನಾಥ್ ಮಾತನಾಡಿ ವೀರಾಜಪೇಟೆ ಸಮೀಪದ ಬಾಳುಗೋಡುವಿನಲ್ಲಿರುವ ಕೊಡವ ಸಮಾಜ ಒಕ್ಕೂಟದ ಆವರಣದಲ್ಲಿ ಹಾಕಿ ಸ್ಟೇಡಿಯಂ ನಿರ್ಮಾಣಕ್ಕೆ ಹಿಂದಿನ ಬಜೆಟ್‍ನಲ್ಲಿ ಜೆಡಿಎಸ್ ಮುಖಂಡ ದೇವೇಗೌಡ ಅವರ ಆಶಯದಂತೆ 15 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಕ್ಷೇತ್ರದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಈ ಅನುದಾನವನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

 

ಮುಕ್ಕಾಟಿರ ಕುಟುಂಬ ಸಂಘದ ಅಧ್ಯಕ್ಷ ಮುಕ್ಕಾಟಿರ ಉತ್ತಪ್ಪ ಮಾತನಾಡಿ, ಆದಿಕಾಲದಿಂದ ಕೊಡಗಿನಲ್ಲಿ ನೆಲಸಿದ ಕೊಡವರು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದ್ದು ಪ್ರಕೃತಿಯನ್ನು ಪೂಜಿಸಿಕೊಂಡು ಬಂದಿದ್ದಾರೆ. ಜನಾಂಗವನ್ನು ಬೆಸೆಯುವ ಮತ್ತು ಬಲಿಷ್ಠವಾಗಿಸುವ ನಿಟ್ಟಿನಲ್ಲಿ ಕೊಡವ ಹಾಕಿ ಹಬ್ಬ ಸಹಕಾರಿಯಾಗಿದೆ ಎಂದರು.
ಈ ಬಾರಿ ಬಾಳುಗೋಡುವಿನಲ್ಲಿ ಮುಂದಿನ ಏ.20 ರಿಂದ ಮೇ 20 ರವರೆಗೆ ಮುಕ್ಕಾಟಿರ ಕಪ್ ಹಾಕಿ ಪಂದ್ಯಾವಳಿ ನಡೆಯಲಿದ್ದು, ಇದು ಒಂದು ರೀತಿ 20- 20 ಪಂದ್ಯಾಟವಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಅಂತರರಾಷ್ಟ್ರೀಯ ಹಾಕಿ ತೀರ್ಪುಗಾರ ಅಚ್ಚಕಾಳೇರ ಪಳಂಗಪ್ಪ, ಹಾಕಿ ಅಕಾಡೆಮಿ ಕಾರ್ಯಾಧ್ಯಕ್ಷ ಕಾಳೇಂಗಡ ರಮೇಶ್ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಟುಂಬದ ಹಿರಿಯರಾದ ಮುಕ್ಕಾಟಿರ ಸೋಮಯ್ಯ ಲಾಂಛನ ಬಿಡುಗಡೆ ಮಾಡಿದರು. ಮುಕ್ಕಾಟಿರ ಶಿವು ಮಾದಪ್ಪ, ಜಿ ಪಂ ಸದಸ್ಯರಾದ ಸರಿತಾ ಪೂಣಚ್ಚ ಹಾಗೂ ಬಾನಂಡ ಪ್ರಥ್ಯು, ಮುಕ್ಕಾಟಿರ ಕುಟುಂಬದ ಕಾರ್ಯಾಧ್ಯಕ್ಷ ಮುಕ್ಕಾಟಿರ ರೋಹಿತ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ – ಡಿ.ಕೆ.ಶಿವಕುಮಾರ್

ಹಾಲಿನ ದರವನ್ನು ₹12 ಹೆಚ್ಚಿಸುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ.…

2 hours ago

ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ…

14 hours ago

ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು

ಕುಟುಂಬದ ನಿಜವಾದ ಶ್ರೀಮಂತಿಕೆ ಹಣ, ಸ್ಥಾನಮಾನ ಅಥವಾ ವೈಭವದಲ್ಲಿಲ್ಲ; ಪರಸ್ಪರ ಗೌರವ, ನಂಬಿಕೆ…

14 hours ago

ಹವಾಮಾನ ಬದಲಾವಣೆ ತಡೆಯಲು ಕಾನೂನು ಮಾತ್ರ ಸಾಲದು – ಸಾಮೂಹಿಕ ಪ್ರಯತ್ನ ಅಗತ್ಯ

ಇತ್ತೀಚಿನ ನೈಸರ್ಗಿಕ ವಿಪತ್ತುಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಿದ್ದು, ಕಾನೂನು ಮತ್ತು…

15 hours ago

ಹವಾಮಾನ ವರದಿ | 26.09.2026 | ಸೆ.28ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು: ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಸಂಪೂರ್ಣವಾಗಿ ಹಿಂದೆ ಸರಿಯುವ ಮುನ್ನವೇ ಮಳೆಯ ವಾತಾವರಣದಲ್ಲಿ ಬದಲಾವಣೆಯ ಲಕ್ಷಣಗಳು…

20 hours ago

ಜಿಐ ಮಾನ್ಯತೆಯ ‘ಗುಲ್ಬರ್ಗಾ ತೊಗರಿ ಬೇಳೆ’ಗೆ ಮಾಲ್ಡೀವ್ಸ್‌ ಮಾರುಕಟ್ಟೆ – ರಫ್ತಿಗೆ ಕೇಂದ್ರದ ಅನುಮತಿ

ಜಿಐ ಮಾನ್ಯತೆ ಪಡೆದ ‘ಗುಲ್ಬರ್ಗಾ ತೊಗರಿ ಬೇಳೆ’ಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲು ಕೇಂದ್ರ…

1 day ago