ಕೊರೊನಾ ಲಾಕ್ಡೌನ್ | ಲಾಕ್ ಡೌನ್ ನ್ನು ಪಾಲಿಸದಿದ್ದರೆ ಕೊರೋನಾ ವೈರಸ್ ವಿರುದ್ಧ ಬಚಾವಾಗಲು ಕಷ್ಟವಿದೆ | ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ |

March 29, 2020
2:54 PM

ನವದೆಹಲಿ: ಕೊರೊನಾ ವೈರಸ್ ಹರಡುವುದು  ತಡೆಯಲಿ ಈಗ  ಲಾಕ್ ಡೌನ್ ನ್ನು ಪಾಲಿಸದಿದ್ದರೆ ಕೊರೋನಾ ವೈರಸ್ ವಿರುದ್ಧ ಬಚಾವಾಗಲು, ಅಪಾಯದಿಂದ ರಕ್ಷಿಸಿಕೊಳ್ಳಲು ಕಷ್ಟವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈಗಿನ ಪರಿಸ್ಥಿತಿಯಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುವುದೆಂದರೆ  ಸಾವು, ಬದುಕಿನ ನಡುವೆ ನಡೆಸುತ್ತಿರುವ ಹೋರಾಟ, ಹೀಗಾಗಿ ಸಂಪೂರ್ಣ ಬಂದ್ ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ಯಾರು ಕೂಡ ಕಾನೂನನ್ನು ಬೇಕೆಂದೇ ದುರುದ್ದೇಶಪೂರ್ವಕವಾಗಿ ಮುರಿಯಲು ನೋಡುವುದಿಲ್ಲ, ಆದರೂ ಕೆಲವರು ನಿಯಮ ಮುರಿಯಲು ನೋಡುತ್ತಿದ್ದಾರೆ. ದಯವಿಟ್ಟು ಈ ಕೆಲಸ ಮಾಡಬೇಡಿ ಎಂದ ಪ್ರಧಾನಿ  ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಬಡವರಿಗೆ ನನ್ನ ಮೇಲೆ ಕೋಪ ಬಂದಿದೆ. ಏಕೆ ಈ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಕೊರೊನಾ ವೈರಸ್​ ವಿರುದ್ಧ ಹೋರಾಡಲು  ಬೇರೆ ದಾರಿಯೇ ಇರಲಿಲ್ಲ. ಆದರೆ, ಬೇರೆ ದೇಶಗಳ ಸ್ಥಿತಿ ನೋಡಿದಾಗ ಈ ರೀತಿಯ ಕ್ರಮ ಸರಿ ಎನ್ನಿಸುತ್ತದೆ. ಭಾರತೀಯರ ಸುರಕ್ಷತೆ ನಮಗೆ ಮುಖ್ಯವಾಗಿದೆ ಎಂದರು.

ಸಾಕಷ್ಟು ಜನರು ಕೊರೋನಾ ವೈರಸ್​ ವಿರುದ್ಧ ಹೋರಾಡುತ್ತಿದ್ದಾರೆ. ವೈದ್ಯರು, ನರ್ಸ್​ಗಳು ಮತ್ತು ಔಷಧಾಲಯದವರು ಕೊರೊನಾ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇವರು ಮೊದಲ ಸಾಲಿನ ಸೈನಿಕರು ಎಂದು ಅಭಿನಂದಿಸಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರೈತರಿಂದ ಉದ್ಯಮಿಗಳವರೆಗೆ : ಕೃಷಿ ಕ್ಷೇತ್ರಕ್ಕೆ ಸರ್ಕಾರದ ಹೊಸ ದೃಷ್ಟಿಕೋನ
March 9, 2026
7:00 AM
by: ದ ರೂರಲ್ ಮಿರರ್.ಕಾಂ
ಎಲೆಚುಕ್ಕಿ ರೋಗದಿಂದ ಅಡಿಕೆ ರೈತರಿಗೆ ಸಂಕಷ್ಟ | ಸಾಲ ಮರುಪಾವತಿ ಒಂದು ವರ್ಷ ಮುಂದೂಡುವ ಪ್ರಸ್ತಾವನೆ..!
March 9, 2026
6:34 AM
by: ದ ರೂರಲ್ ಮಿರರ್.ಕಾಂ
ಕೃಷಿಯ ನಿಜವಾದ ಶಕ್ತಿ ಮಹಿಳೆಯರು : ಭಾರತದಲ್ಲಿ ಮೌನ ಕ್ರಾಂತಿ ಶುರುವಾಗಿದೆ..!
March 8, 2026
8:41 PM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಮನೆಲ್ಲೇ ಸುಲಭವಾಗಿ ಮಾಡುವ “ಉಪ್ಪು ಸೊಳೆ ಬೋಳು ಬೆಂದಿ”
March 7, 2026
10:14 PM
by: ದಿವ್ಯ ಮಹೇಶ್

You cannot copy content of this page - Copyright -The Rural Mirror