ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಸೋಮವಾರವೂ ಶುಭಸುದ್ದಿ. ಸೋಮವಾರ ಕೂಡಾ ಕೊರೊನಾ ವೈರಸ್ ಯಾವುದೇ ಪಾಸಿಟಿವ್ ಕೇಸ್ ಗಳು ಇಲ್ಲ. ಅದರ ಜೊತೆಗೆ ಸುಳ್ಯದ ಅಜ್ಜಾವರದ ಯುವಕ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ 12 ಮಂದಿ ಕೊರೊನಾ ಸೋಂಕಿತರಲ್ಲಿ 8 ಮಂದಿ ಗುಣಮುಖರಾದಂತಾಗಿದೆ.
ಬೆಂಗಳೂರು, ಮೈಸೂರು ನಂತರ 3 ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಇದೀಗ 6 ನೇ ಸ್ಥಾನಕ್ಕಿಳಿದಿದೆ. ಜಿಲ್ಲೆಯ ಮಟ್ಟಿಗೆ ಇದು ಸಮಾಧಾನಕರ ಸಂಗತಿ. ಆದರೂ, ಇನ್ನೂ ಬಹಳಷ್ಟು ಜಾಗರೂಕರಾಗಿರಬೇಕಿದೆ. ಜಿಲ್ಲೆಯಲ್ಲಿ 12 ಪ್ರಕರಣಗಳಲ್ಲಿ 8 ಮಂದಿ ಗುಣಮುಖರಾಗಿದ್ದಾರೆ.
ದುಬೈಯಿಂದ ಮಂಗಳೂರಿಗೆ ಆಗಮಿಸಿದ್ದ ಸುಳ್ಯ ಅಜ್ಜಾವರದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ಲಕ್ಷಣಗಳು ಪತ್ತೆಯಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಿರಂತರ ಚಿಕಿತ್ಸೆ ನೀಡಲಾಗಿದೆ. ಇದೀಗ ಚಿಕಿತ್ಸೆಗೆ ಸ್ಪಂದಿಸಿದ ಅವರು, ಸಂಪೂರ್ಣ ಗುಣಮುಖರಾಗಿದ್ದಾರೆ. ಎ. 11, 12ರಂದು ಮತ್ತೆ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಸೋಮವಾರದಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…