ಸುಳ್ಯ: ನಾಡಿನೆಲ್ಲೆಡೆ ಕರೋನಾ ವೈರಸ್ ಹರಡುವುದನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಇದೇ ವೇಳೆ ರೋಗನಾಶಕವಾದ ಮಂತ್ರಗಳಿಂದ ಲೋಕಕಲ್ಯಾಣಕ್ಕಾಗಿ ಮನೆಮನೆಗಳಲ್ಲಿ ಯಜ್ಞಾನುಷ್ಠಾನ ನಡೆಯತ್ತಿದೆ. ಸುಳ್ಯ ತಾಲೂಕಿನ ವಿವಿದೆಡೆ ಈ ಯಜ್ಞ ನಡೆಯುತ್ತಿದೆ. ಈ ಮೂಲಕ ಲೋಕ ಹಿತ, ಜನರಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯ ನಡೆಯುತ್ತಿದೆ.
ಗುತ್ತಿಗಾರು ಗ್ರಾಮದ ಹಿರಿಯ ವೈದಿಕ ವಿದ್ವಾಂಸರೂ, ಮಾರ್ಗದರ್ಶಕರೂ ಆಗಿರುವ ವೇದಗುರು ಕರುವಜೆ ಕೇಶವ ಜೋಯಿಸರ ನೇತೃತ್ವದಲ್ಲಿ ಮಾ.20 ನೇ ತಾರೀಕಿನಿಂದ ನಿರಂತರವಾಗಿ ರೋಗನಾಶಕವಾದ ಮಂತ್ರಗಳಿಂದ ಲೋಕಕಲ್ಯಾಣಕ್ಕಾಗಿ ಮನೆಮನೆಗಳಲ್ಲಿ ಯಜ್ಞಾನುಷ್ಠಾನ ನಡೆಯತ್ತಿದೆ. ಯಜ್ಞದ ಸಂದರ್ಭ ವೈಜ್ಞಾನಿಕ ರೀತಿಯಲ್ಲಿ ಅಂತರ ಕಾಪಾಡಿಕೊಂಡು ಯಜ್ಞಾನುಷ್ಠಾನ ನಡೆಯತ್ತಿರುವುದು ವಿಶೇಷವಾಗಿದೆ.
ಲೋಕಕ್ಕೆ ಬಾಧಿತವಾದಂತ ಕೋವಿಡ್-19 (ಕರೋನಾ) ವೈರಸ್ ಶೀಘ್ರದಲ್ಲಿ ನಾಶವಾಗುವುದರ ಜೊತೆ ಈ ಸಮರದಲ್ಲಿ ನಿರಂತರ ತೊಡಗಿಸಿಕೊಂಡಿರುವ ಈ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ವರ್ಗ , ಅಧಿಕಾರಿಗಳು, ವೈದ್ಯಕೀಯ ವಿಭಾಗ , ಆರಕ್ಷಕರು ,ಸೈನ್ಯ , ಹಾಗೂ ದೇಶದ ಸಮಸ್ತ ಪ್ರಜಾಜನರ ಕ್ಷೇಮವನ್ನು ಸಂಕಲ್ಪಿಸಿ ಔಷಧೀಯ ವಸ್ತಗಳು ಹಾಗೂ ವನಸ್ಪತಿಗಳನ್ನು ಯಜ್ಞ ದ ಮೂಲಕ ಭಗವಂತನಿಗೆ ಸಮರ್ಪಿಸಲಾಗಿದೆ.
ಸುಳ್ಯ ಹಾಗೂ ಕಡಬ ತಾಲೂಕಿನ ಹಲವೆಡೆಗಳಲ್ಲಿ ಈ ಕಾರ್ಯ ನಡೆಸಲಾಗಿದ್ದು ಈ ಗುತ್ತಿಗಾರು ಭಾಗದಲ್ಲಿ ಮುರಳೀಕೃಷ್ಣ ವಳಲಂಬೆ ,ಪ್ರಸಾದ ಜೋಷಿ, ಶ್ಯಾಮಕೃಷ್ಣ ಹೊಸವಳಿಕೆ , ಅಚಿಂತ್ಯರಾಮ ಶರ್ಮ, ಕರುವಜೆ ಶಿವಸುಬ್ರಹ್ಮಣ್ಯ ಶರ್ಮಾ ಮೊದಲಾದವರ ನಿರಂತರ ಸಹಕಾರದೊಂದಿಗೆ ಈ ಯಜ್ಞ ಸಂಪನ್ನಗೊಳ್ಳುತ್ತಿದೆ.
ಸಮಾಜದ ಎಲ್ಲ ಮನೆಗಳಲ್ಲಿ ಇಂತಹ ಯಜ್ಞದ ಅನುಷ್ಠಾನ ನಡೆಯಲಿ ಎಂಬ ಸದಾಶಯದೊಂದಿಗೆ ಕೇಶವ ಜೋಯಿಸರು ಈ ಕಾರ್ಯವನ್ನು ನಡೆಸುತ್ತಿದ್ದಾರೆ.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…