ಸುಳ್ಯ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸರಕಾರ ವಿವಿಧ ಕ್ರಮ ಕೈಗೊಂಡಿದೆ. ಇದೀಗ ಸಾರ್ವಜನಿಕರೇ ಕರ್ನಾಟಕ-ಕೇರಳ ಗಡಿಭಾಗದ ರಸ್ತೆಗಳಲ್ಲಿ ಮಣ್ಣು ಸುರಿದ ರಸ್ತೆ ತಡೆ ಮಾಡಿದ್ದಾರೆ.
ಸುಳ್ಯ ಸಂಪರ್ಕ ಮಾಡುವ ಕೋಲ್ಚಾರು, ಕಲ್ಲಪ್ಪಳ್ಳಿ, ಗಾಳಿಮುಖ ಮೊದಲಾದ ಕಡೆಗಳಲ್ಲಿ ರಸ್ತೆ ತಡೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ವಾಹನಗಳ ಓಡಾಟ ನಡೆಸದಂತೆ ಎಚ್ಚರಿಕೆ ವಹಿಸಲಾಗಿದೆ. ಮಣ್ಣು ಸುರಿದ ರಸ್ತೆ ತಡೆ ಮಾಡಿರುವುದಕ್ಕೆ ವಿರೋಧವೂ ವ್ಯಕ್ತವಾಗಿದೆ.
ಸಂಪಾಜೆ ಗಡಿಭಾಗ ಹಾಗೂ ಇತರ ಜಿಲ್ಲಾ ಗಡಿಭಾಗದಲ್ಲಿ ಇಲಾಖೆಗಳ ವತಿಯಿಂದಲೇ ತಪಾಸಣೆ ನಡೆಸಿ ಅಗತ್ಯ ಕಂಡರೆ ಮಾತ್ರವೇ ಬಿಡಲಾಗುತ್ತಿದೆ. ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆರಕ್ಷಕ ಠಾಣಾ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ತಪಾಸಣೆ ನಡೆಯುತ್ತಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel