ಸುಳ್ಯ: ಕೊರೋನಾ ವೈರಸ್ ಸೋಂಕಿಗೆ ಇಡೀ ಜಗತ್ತೇ ತತ್ತರಿಸಿ, ಲಾಕ್ ಡೌನ್ ಸ್ಥಿತಿಯಲ್ಲಿರುವಾಗ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಎಸ್.ಎಸ್ ಎಫ್ ಮತ್ತು ಎಸ್.ವೈ.ಎಸ್ ತಂಡಗಳು ತುರ್ತುಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಬಡ ನಿರ್ಗತಿಕರಿಗೆ ಅನ್ನಾಹಾರ ತಲುಪಿಸುವುದು, ಅನಾರೋಗ್ಯ ಪೀಡಿತರಿಗೆ ಔಷಧಗಳನ್ನು ತಲುಪಿಸಿ, ಅತ್ಯಗತ್ಯ ಸಂದರ್ಭಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಆಸ್ಪತ್ರೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡುವುದು, ರಕ್ತದ ಬೇಡಿಕೆಯನ್ನು ಮನಗಂಡು ರಕ್ತದಾನ ಮಾಡುವ ವ್ಯವಸ್ಥೆ, ಲಾಕ್ ಡೌನ್ ನ ವೇಳೆಯಲ್ಲಿ ಅರ್ಧದಾರಿಯಲ್ಲಿ ಸಿಲುಕಿದವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವುದು, ಕೊರೋನಾ ಮಾರಕ ವೈರಸಿನ ಬಗ್ಗೆ ವಿವಿಧೆಡೆಗಳಲ್ಲಿ ಜಾಗೃತಿ ಮೂಡಿಸುವುದು ಸಹಿತ ಹತ್ತು ಹಲವು ತುರ್ತು ಸೇವೆಗಳಲ್ಲಿ ತಂಡವು ಕಳೆದ ಹತ್ತಾರು ದಿನಗಳಿಂದ ತೊಡಗಿಸಿಕೊಂಡಿರುವುದಕ್ಕೆ ಶ್ಲಾಘನೆಯ ಮಾತುಗಳು ಕೇಳಿಬರುತ್ತಿದೆ.
ಮಂಗಳೂರಿನ ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯಿದೆಯೆಂದರಿತು ಸುಮಾರು ಇಪ್ಪತ್ತರಷ್ಟು ಬ್ಲಡ್ ಸೈಬೋ ಕಾರ್ಯಕರ್ತರು ಮಂಗಳೂರಿಗೆ ತೆರಳಿ ರಕ್ತದಾನವನ್ನು ಮಾಡಿದ್ದಾರೆ. ರಾಜ್ಯ ಹಾಗೂ ಜಿಲ್ಲಾ ನಾಯಕರ ನಿರ್ದೇಶನಗಳನ್ನು ಪಡೆದು ಸರಕಾರ ಹಾಗೂ ಆರೋಗ್ಯ ಇಲಾಖೆಯ ಸುತ್ತೋಲೆಗಳನ್ನು ಪಾಲಿಸಿ ಸ್ವಯಂ ರಕ್ಷಣೆಯೊಂದಿಗೆ ಉಳಿದವರ ಅತ್ಯಗತ್ಯಗಳ ಪೂರೈಕೆಗೂ ಎಸ್.ಎಸ್.ಎಫ್, ಎಸ್.ವೈ.ಎಸ್ ತಂಡವು ನಿರಂತರವಾಗಿ ಶ್ರಮ ವಹಿಸುತ್ತಿದೆ.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…