ಈ ಬಾರಿಯ ಭಾರೀ ಮಳೆಗೆ ಅಡಿಕೆ ಕೊಳೆರೋಗ ವ್ಯಾಪಕವಾಗಿದೆ. ಮೇ. 17 ಸುಮಾರಿಗೆ ಆರಂಭವಾದ ಮಳೆಯು ನಿರಂತರವಾಗಿ ಜುಲೈ ಅಂತ್ಯದವರೆಗೆ ಸುರಿದಿದೆ. ಪರಿಣಾಮವಾಗಿ ಅಡಿಕೆ ಕೊಳೆರೋಗ ವ್ಯಾಪಕವಾಗಿ ಬಾಧಿಸಿದೆ. ಈ ಬಗ್ಗೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಹಯೋಗದಲ್ಲಿ ದ ರೂರಲ್ ಮಿರರ್.ಕಾಂ ಸಮೀಕ್ಷೆ ನಡೆಸಿತ್ತು. ಈ ಮಾಹಿತಿ ಪ್ರಕಾರ ಶೇ.95 ರಷ್ಟು ಅಡಿಕೆ ಬೆಳೆಗಾರರು ಕೊಳೆರೋಗ ಬಾಧಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನಷ್ಟು ಕೊಳೆರೋಗ ಹರಡಿರುವ ಬಗ್ಗೆ ಅಂದಾಜಿಸಲಾಗಿದೆ.
ಸಮೀಕ್ಷೆಯಲ್ಲಿ ಇದುವರೆಗೆ 430 ರಷ್ಟು ಅಡಿಕೆ ಬೆಳೆಗಾರರು ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ಲಭ್ಯವಾದ ಮಾಹಿತಿ ಪ್ರಕಾರ ಶೇ.95 ರಷ್ಟು ಅಡಿಕೆ ಬೆಳೆಗಾರರು ಕೊಳೆರೋಗ ಬಾಧಿಸಿದೆ ಎಂದು ಮಾಹಿತಿ ನೀಡಿದ್ದು, ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ ಕೊಳೆರೋಗಕ್ಕೆ ಹಾನಿಯಾಗಿರುವ ಬಗ್ಗೆ ಹೆಚ್ಚಿನ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಅಂದರೆ ಈ ಬಾರಿ ಕೊಳೆರೋಗದಿಂದ ವ್ಯಾಪಕವಾಗಿ ಅಡಿಕೆ ಹಾನಿಯಾಗಿರುವುದು ಇಲ್ಲಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರಕನ್ನಡ, ಶಿವಮೊಗ್ಗ , ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಕೊಡಗು, ತುಮಕೂರು ಜಿಲ್ಲೆಗಳ ಅಡಿಕೆ ಬೆಳೆಗಾರರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ.
ಜುಲೈ 31 ಕ್ಕೆ ಸಮೀಕ್ಷೆ ಕೊನೆಗೊಳಿಸುವ ಬಗ್ಗೆ ನಿರ್ಧರಿಸಲಾಗಿತ್ತು, ಆದರೆ ಆಗಸ್ಟ್ ಮೊದಲ ವಾರದಲ್ಲಿ ಬಿಸಿಲಿನ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ, ಇನ್ನಷ್ಟು ಕೊಳೆರೋಗ ಬಾಧಿಸಿರುವ ತೋಟಗಳು ಕಂಡುಬರುವ ಸಾಧ್ಯತೆ ಇದೆ ಎಂದು ಅಡಿಕೆ ಬೆಳೆಗಾರರ ಸಂಘದ ಸದಸ್ಯರು ಮಾಹಿತಿ ನೀಡಿದ್ದು, ಇನ್ನೂ 10 ದಿನಗಳ ಕಾಲ ಸಮೀಕ್ಷೆ ಮುಂದುವರಿಸುವ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ಆ.10 ರವರೆಗೆ ಸಮೀಕ್ಷೆಯನ್ನು ಮುಂದುವರಿಸಲಾಗಿದೆ. ನಂತರ ಸಮಗ್ರವಾದ ಮಾಹಿತಿಯನ್ನು “ದ ರೂರಲ್ ಮಿರರ್.ಕಾಂ” ನಲ್ಲಿ ತೆರೆದಿಡಲಾಗುತ್ತದೆ. ಬಳಿಕ ಅಡಿಕೆ ಬೆಳೆಗಾರರ ಸಂಘದ ಸಹಯೋಗದೊಂದಿಗೆ ಶಾಸಕರು, ಸಂಸದರುಗಳ ಹಾಗೂ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಅದಾದ ಬಳಿಕ ಕೊಳೆರೋಗ ಇಲ್ಲದೇ ಇರುವ ಕೃಷಿಕರ ಕೃಷಿ ಕ್ರಮಗಳ ಬಗ್ಗೆ ಹಾಗೂ ಸಮಗ್ರ ಕೃಷಿ ಚಟುವಟಿಕೆಗಳ ಬಗ್ಗೆ ವಿಜ್ಞಾನಿಗಳ ಜೊತೆಗೆ ಚರ್ಚಿಸಿ ಉತ್ತಮ ಕೃಷಿ ಕ್ರಮಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಲು ಸಮೀಕ್ಷಾ ತಂಡವು ಯೋಜನೆ ಹಾಕಿಕೊಂಡಿದೆ. ಸಮೀಕ್ಷೆಯಲ್ಲಿ ಇದುವರೆಗೆ ಭಾಗವಹಿಸದೇ ಇರುವ ಕೃಷಿಕರು ಲಿಂಕ್ ಮೂಲಕ ಕೊಳೆರೋಗದ ಮಾಹಿತಿಯನ್ನು ನೀಡಲು ಮತ್ತೊಮ್ಮೆ ಮನವಿ ಮಾಡಲಾಗುತ್ತಿದೆ.(ಈಗಾಗಲೇ ಒಮ್ಮೆ ಪ್ರತಿಕ್ರಿಯೆ ನೀಡಿದವರಿಗೆ ಮತ್ತೆ ಅವಕಾಶಗಳು ಇಲ್ಲ) ಲಿಂಕ್ ಇಲ್ಲಿದೆ…. https://forms.gle/iWXV9sfLH5TJcbvT7
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…