ಮಡಿಕೇರಿ : ಕೂಡಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೂರು ವರ್ಷಗಳ ಹಿಂದೆ ಕೊರೆಸಲಾಗಿರುವ ಕೊಳವೆ ಬಾವಿಯಲ್ಲಿನ ನೀರು ಕಲುಷಿತಗೊಂಡಿದ್ದು, ಈ ನೀರನ್ನು ಕುಡಿಯಲು ಉಪಯೋಗಿಸಬಾರದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಶಾಲೆಯ ಮುಖ್ಯಸ್ಥರಿಗೆ ಹಾಗೂ ಗ್ರಾ.ಪಂ ಗೆ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯವರು ಪ್ರತಿವರ್ಷದಂತೆ ಆ ವ್ಯಾಪ್ತಿಯ ಕೊಳವೆ ಬಾವಿಗಳ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ಕುಡಿಯಲು ಯೋಗ್ಯವೇ ಅಥವಾ ಯೋಗ್ಯವಾಗಲ್ಲವೆ ಎಂಬುದನ್ನು ತಿಳಿಸುತ್ತಾರೆ. ಅದರಂತೆ ಕಳೆದ ತಿಂಗಳಲ್ಲಿ ಕೂಡಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಕೊಳವೆ ಬಾವಿಯ ನೀರನ್ನು ಪರೀಕ್ಷಿಸಲಾಗಿ, ನೀರು ಕುಡಿಯಲು ಯೋಗ್ಯವಾಗಿಲ್ಲ ಕಲುಷಿತಗೊಂಡಿದ್ದು, ಶಾಲೆಯಲ್ಲಿ ಕುಡಿಯಲು ಹಾಗೂ ಆಹಾರ ತಯಾರಿಸಲು ಬಳಸಬಾರದೆಂದು ಸೂಚಿಸಿದ್ದರು.
ಆದರೂ, ಈ ಕೊಳವೆ ಬಾವಿಯ ನೀರನ್ನು ಬಳಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಆರೋಗ್ಯ ಇಲಾಖೆಯವರು ಮತ್ತೊಮ್ಮೆ ಪ್ರಯೋಗಾಲಯದಲ್ಲಿ ನೀರನ್ನು ಪರೀಕ್ಷಿಸಿ ಕಲುಷಿತಗೊಂಡು ಕುಡಿಯಲು ಯೋಗ್ಯವಲ್ಲದ ನೀರಾಗಿರುವುದನ್ನು ಮತ್ತೊಮ್ಮೆ ದೃಢೀಕರಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಿಗೆ ವಿಷಯ ತಿಳಿಸಿ, ವಿದ್ಯಾರ್ಥಿಗಳಿಗೆ ಕುಡಿಯಲು ಹಾಗೂ ಆಹಾಯ ತಯಾರಿಸಲು ಈ ನೀರನ್ನು ಬಳಸದಂತೆ ಸೂಚಿಸಿದ್ದಾರೆ.
ಕೊಳವೆ ಬಾವಿಯಲ್ಲಿ ಕಲುಷಿತ ನೀರು ದೊರೆಯುತ್ತಿರುವ ಬಗ್ಗೆ ಗ್ರಾ.ಪಂ ಈಗಾಗಲೇ ಜಿ.ಪಂ ಗಮನ ಸೆಳೆದಿದೆ ಎಂದು ಗ್ರಾ.ಪಂ ಅಧಿಕಾರಿಗಳು ತಿಳಿಸಿದರು. ಸ್ಥಳೀಯ ಎರಡು ಬಡಾವಣೆಗಳಿಗೂ ಇದೇ ಕೊಳವೆ ಬಾವಿಯ ನೀರು ಸರಬರಾಜಾಗುತ್ತಿದ್ದು, ಇಲ್ಲಿನ ನಿವಾಸಿಗಳಿಗೂ ನೀರನ್ನು ಬಳಸದಂತೆ ತಿಳಿಸಲಾಗಿದೆ ಎಂದರು. ಶುದ್ಧ ಕುಡಿಯುವ ನೀರು ದೊರೆಯುವಲ್ಲಿಯವರೆಗೆ ಈ ಕೊಳವೆ ಬಾವಿಯ ನೀರನ್ನು ಶಾಲೆಯ ಚಟುವಟಿಕೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಬಳಕೆ ಮಾಡಲು ಅವಕಾಶ ನೀಡುವುದಿಲ್ಲವೆಂದು ಶಾಲಾ ಮುಖ್ಯ ಶಿಕ್ಷಕರು ಸ್ಪಷ್ಟ ಪಡಿಸಿದರು.
ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್…
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…
ಮಿಜೋರಾಂನ ಚಾಂಫೈನಲ್ಲಿ ಅಸ್ಸಾಂ ರೈಫಲ್ಸ್ 466 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದೆ. ಈ…
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …
ಪ್ರತಿ 15 ದಿನಗಳಿಗೊಮ್ಮೆ ಶಾಲೆ ಮತ್ತು ಅಂಗನವಾಡಿಗಳ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಿ ತಪಾಸಣೆ…
ಬಂಗಾಳಕೊಲ್ಲಿಯ ಆಂದ್ರಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಒಡಿಸ್ಸಾ ಕರಾವಳಿ ತನಕ ಸಾಗಿ,…