ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ನವೀಕರಣಗೊಂಡ ಎನಲೆಟಿಕಲ್ ಲ್ಯಾಬ್ (National Accreditation Board for Testing and Calibration Laboratories – NABL) ಉದ್ಘಾಟನೆ ಬುಧವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಟಂದೂರು ನೂತನ ಲ್ಯಾಬ್ ಉದ್ಘಾಟಿಸಿ ಶುಭ ಹಾರೈಸಿದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಸಭಾಧ್ಯಕ್ಷತೆ ವಹಿಸಿದರು. ಈ ಸಂದರ್ಭ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ , ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನ.ಖಂಡಿಗೆ , ಸಾಮಾಜಿಕ ಕಾರ್ಯಕರ್ತ ಆರ್ ಸಿ ನಾರಾಯಣ ರೆಂಜ, ಪತ್ರಕರ್ತ ಮಹೇಶ್ , ಹಿರಿಯ ಅಧಿಕಾರಿ ರಾಮಚಂದ್ರ ಕಾಮತ್, ಕ್ಯಾಂಪ್ಕೋ ಎ.ಜಿ.ಎಂ ಇಂಜಿನಿಯರಿಂಗ್ ಅವಿನಾಶ್ ರೈ, ಎ.ಜಿ.ಎಂ ಟೆಕ್ನಿಕಲ್ ,ಶ್ಯಾಮ್ ಪ್ರಸಾದ್ ಎಚ್, ಎ.ಜಿ.ಎಂ ಪ್ರೊಡಕ್ಷನ್ ಅನೂಪ್ ಮೊದಲಾದವರು ಉಪಸ್ಥಿತರಿದ್ದರು.
ಈ ನೂತನ ಲ್ಯಾಬ್ ನಲ್ಲಿ ಮೈಕ್ರೋಬಯೋಲಜಿ ಲ್ಯಾಬ್, ಕೆಮೆಸ್ಟ್ರಿ ಲ್ಯಾಬ್, ಕೋಕೋ ಬೀನ್ಸ್ ಹಾಗೂ ಇತರ ಕೃಷಿ ಉತ್ಪನ್ನಗಳ ಲ್ಯಾಬ್ ಎಂಬ ಮೂರು ವಿಭಾಗಗಳಿದೆ. ಲ್ಯಾಬಿನಲ್ಲಿ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಉತ್ಪಾದಿಸಿದ ಎಲ್ಲಾ ಉತ್ಪನ್ನಗಳನ್ನು ಹಾಗೂ ಉತ್ಪಾದನೆಗೆ ಬಳಕೆಯಾಗುವ ಕಚ್ಚಾ ವಸ್ತುಗಳನ್ನು ಹಾಗೂ ಉತ್ಪಾದನಾ ವಾತಾವರಣದಲ್ಲಿ ಈ ಲ್ಯಾಬ್ ನಲ್ಲಿ ಪರೀಕ್ಷೆಗೊಳಪಡಿಸಿ ಗುಣಮಟ್ಟವನ್ನು ಖಾತರಿಗೊಳಿಸಲಾಗುತ್ತದೆ.
ಮುಂದಿನ ದಿನದಲ್ಲಿ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ತೋಟದ ಮಣ್ಣು ಪರೀಕ್ಷೆಯನ್ನು ಈ ಲ್ಯಾಬ್ ನಲ್ಲಿ ಅಳವಡಿಸಲಾಗುವುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಮುಂಗಾರು ಮತ್ತಷ್ಟು ದುರ್ಬಲಗೊಳ್ಳತ್ತಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ…
ದ ರೂರಲ್ ಮಿರರ್.ಕಾಂ ನಲ್ಲಿ "ಹೊಸರುಚಿ" ಯ ಮೂಲಕ ಹಲಸು ಅಡುಗೆಯ ಮೂಲಕ…
ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ವತಿಯಿಂದ…
ವಿಶ್ವದಲ್ಲಿ ಅಡಿಕೆ ಉತ್ಪಾದನೆ ಆಗುವ ಎಲ್ಲಾ ರಾಷ್ಟ್ರಗಳಲ್ಲಿ ಅದರ ಬಳಕೆಯೂ ಆಗುತ್ತಿದೆ.ಇದರೊಂದಿಗೆ ಈ…
ಪ್ಲಾಸ್ಟಿಕ್ ಮಾಲಿನ್ಯವು ಪರಿಸರ ವಿನಾಶದ ಅಂಶಗಳಲ್ಲಿ ಒಂದಾಗಿದೆ. ನಮ್ಮ ಸಾಗರಗಳು ಮತ್ತು ಕರಾವಳಿಗಳಲ್ಲಿ…
ವಿಯೆಟ್ನಾಂ 2030 ರ ವೇಳೆಗೆ ಕೃಷಿಯಲ್ಲಿ ಹೊರಸೂಸುವ ಮೀಥೇನ್ ಅನ್ನು 30% ರಷ್ಟು…