ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಪ್ಯಾಕ್ಟರಿ ಎಂಪ್ಲಾಯಿಸ್ ರಿಕ್ರಿಯೇಷನ್ ಸೆಂಟರಿನ ವಾರ್ಷಿಕೋತ್ಸವವು ಚಾಕಲೇಟು ಪ್ಯಾಕ್ಟರಿ ವಸತಿ ನಿಲಯದ ಸಭಾ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ವಹಿಸಿದ್ದರು. ವೇದಿಕೆಯಲ್ಲಿ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ಮೆನೆಜಿಂಗ್ ಡೈರೆಕ್ಟರ್ ಎಂ.ಸುರೇಶ್ ಭಂಡಾರಿ,ಕ್ಯಾಂಪ್ಕೋ ನಿರ್ದೇಶಕರುಗಳಾದ ಚನಿಲ ತಿಮ್ಮಪ್ಪ ಶೆಟ್ಟಿ,ಕೃಷ್ಣ ಪ್ರಸಾದ್ ಮಡ್ತಿಲ, ಚಾಕಲೇಟು ಪ್ಯಾಕ್ಟರಿ ಡೆಪ್ಯುಟಿ ಜನರಲ್ ಮೆನೇಜರ್ ಪ್ರಾನ್ಸಿಸ್ ಡಿಸೋಜ, ಯೂನಿಯನ್ ಅಧ್ಯಕ್ಷರಾದ ರಾಧಾಕೃಷ್ಣ ಭಟ್, ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷರಾದ ಬಿ.ಜಿ.ರಂಗನಾಥ್, ಸೆಕ್ರೆಟರಿ ಶಾಂತಿ ಹೊಳ್ಳ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ , ಪಿಯುಸಿ ಹಾಗೂ ಡಿಗ್ರಿಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಕ್ಯಾಂಪ್ಕೋ ಉದ್ಯೋಗಿಗಳ ಮಕ್ಕಳಾದ ಪ್ರಣೀತ್ ಆರ್.ಪಿ, ಹರೀಶ್ ಭಟ್. ಕೆ, ಶಮಾ, ಅನುಪಮಾ.ಟಿ, ಸಾತ್ವಿಕ್, ಚೈತನ್ಯ ರಾಜೇಶ್ವರಿ.ಬಿ.ಆರ್, ವೈಶಾಕ್.ಕೆ.ಎಮ್, ಅಜಯ್ ಕೃಷ್ಣ.ಎಮ್, ಸಹನಾ ಮತ್ತು ಕ್ರೀಡೆಯಲ್ಲಿ ಹೆಸರುಗಳಿಸಿದ ದಿಗಂತ್.ವಿ.ಎಸ್, ಅನಘ.ಕೆ.ಎಮ್, ಅನುಶ್ರೀ, ಪ್ರಣವ್ ಹೊಳ್ಳ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ರಾದ ಪಧ್ಮನಾಭ, ಗೋಪಾಲ್ ರಾವ್, ಬಿ.ರಾಮ, ಚಂದ್ರಶೇಖರ ಗೌಡ, ಬಾಲಚಂದ್ರ ಶೆಟ್ಟಿ ಇವರುಗಳಿಗೆ ಸನ್ಮಾನಿಸಲಾಯಿತು.
ವಾರ್ಷಿಕ ಕ್ರೀಡಾ ಕೂಟದಲ್ಲಿ ವಿಜೇತರಾದ ಎಲ್ಲರಿಗೂ ಬಹುಮಾನ ನೀಡಲಾಯಿತು.ಸಭಾ ಕಾರ್ಯಕ್ರಮದ ನಂತರ ಕ್ಯಾಂಪ್ಕೋ ಉದ್ಯೋಗಸ್ಥರ ಮನೆಯವರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…