ಮಂಗಳೂರು: ಕ್ಯಾಂಪ್ಕೊ ಸಂಸ್ಥೆ ಸದಸ್ಯರಿಗೆ ತಂದ ವಿನೂತನ ಯೋಜನೆ ಅಪಘಾತವಾದ ಕೃಷಿಕ, ಕೃಷಿ ಕಾರ್ಮಿಕ ಮೃತಪಟ್ಟರೆ ನೀಡುವ ಸಹಾಯಧನದ ಯೋಜನೆಯ ಮೊದಲ ನೆರವು ಈಚೆಗೆ ನೀಡಲಾಯಿತು.
ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಅವರು ಇತ್ತೀಚೆಗೆ ಅವಘಡದಲ್ಲಿ ಮರಣ ಹೊಂದಿದ ಕ್ಯಾಂಪ್ಕೋದ ಸಕ್ರಿಯ ಸದಸ್ಯರಾದ ವಾಮದಪದವು ಬಾರೆಕಿನಡೆ ಮನೆಯ ಗೋಪಾಲ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಕ್ಯಾಂಪ್ಕೋ ಸಂಸ್ಥೆಯಿಂದ ನೀಡಲಾಗುವ ಸಹಾಯ ಧನ ರೂಪಾಯಿ 50000/- ದ ಚೆಕ್ಕನ್ನು ಗೋಪಾಲ ಶೆಟ್ಟಿಯವರ ಪತ್ನಿ ಗಿರಿಜಾ ಶೆಟ್ಟಿ ಇವರಿಗೆ ನೀಡಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ಬಿ. ತಿಮ್ಮಪ್ಪ ಶೆಟ್ಟಿ, ಪುತ್ತೂರು ಪ್ರಾದೇಶಿಕ ಕಚೇರಿಯ ಹಿರಿಯ ಪ್ರಬಂಧಕರಾದ ಗೋವಿಂದ ಭಟ್, ವಾಮದಪದವು ಶಾಖೆಯ ಪುರುಷೋತ್ತಮ.ಕೆ, ವಾಮದ ಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಯಶೋಧರ ಶೆಟ್ಟಿ, ಉಪಾಧ್ಯಕ್ಷರಾದ ಗಣನಾಥ ಶೆಟ್ಟಿ, ಕಾರ್ಯದರ್ಶಿಗಳಾದ ಅಲ್ಬರ್ಟ್ ಡಿಸೋಜಾ, ಸಹಕಾರಿ ಸಂಘದ ನಿರ್ದೇಶಕರುಗಳಾದ ಕಮಲ್ ಶೆಟ್ಟಿ, ಹಿರಿಯ ಸದಸ್ಯ ಬೆಳೆಗಾರರಾದ ಸುಬ್ಬಣ್ಣ ಶಾಸ್ತ್ರೀ, ಗೋಪಾಲಕೃಷ್ಣ ಚೌಟ,
ಲಕ್ಷ್ಮೀನಾರಾಯಣ ಪರಾಡ್ಕರ್, ಪುರುಷೋತ್ತಮ ಶೆಟ್ಟಿ ಬಾರಕ್ಕಿನಡೆ, ವೆಂಕಟೇಶ್ ಭಟ್, ವಿಜಯ ರೈ, ಸುಧಿರ್ ಶೆಟ್ಟಿ ಕುಂಡೋಳಿ, ದಿನೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?