ಕ್ಯಾಂಪ್ಕೋ ಹೊಸ ಚಾಕೋಲೇಟ್ “ಸ್ಪೈಸ್ ಟೋಫಿ” ಬಿಡುಗಡೆ

November 20, 2019
10:18 PM

ಮಂಗಳೂರು: ಕ್ಯಾಂಪ್ಕೋ ವತಿಯಿಂದ ನೂತನ ಚಾಕೋಲೇಟ್ ಸ್ಪೈಸ್ ಟೋಫಿ ಬುಧವಾರ ಬಿಡುಗಡೆಗೊಂಡಿದೆ. ನೂತನ ಉತ್ಪನ್ನವು ಸಕ್ಕರೆ ಆಧಾರಿತ ಸಿರಪ್ ಗಳಿಂದ ಮತ್ತು  ಸೈಸರ್ಗಿಕ ಕಾಳುಮೆಣಸು ಪುಡಿ ಹಾಗೂ ಶಂಠಿ ಸಾರಗಳಿಂದ ತಯಾರಿಸಲ್ಪಟ್ಟ ಉತ್ಪನ್ನವಾಗಿದೆ.

Advertisement
Advertisement
Advertisement

ನೂತನ ಉತ್ಪನ್ನ ಸ್ಪೈಸ್ ಟೋಫಿ ಯಲ್ಲಿ ಗ್ಲೂಕೋಸ್ ನೊಂದಿಗೆ ಶುಂಠಿ ಸಾರ ಹಾಗೂ ಕಾಳುಮೆಣಸು ಪುಡಿ ಇರುವುದರಿಂದ ಇದು  ದೇಹದ ಸಮತೋಲನ ಕಾಪಾಡುವಲ್ಲಿ ಹಾಗೂ ದೇಹವನ್ನು ತಂಪಾಗಿರಿಸುವಲ್ಲಿ  ಮತ್ತು  ದಣಿವನ್ನು ನಿವಾರಿಸುವಲ್ಲಿ  ಸಹಕಾರಿಯಾಗುತ್ತದೆ ಅಲ್ಲದೆ ಮೌತ್ ಫ್ರೆಶ್ನರ್ ಆಗಿಯೂ ಕೂಡಾ ಕೆಲಸ ಮಾಡುತ್ತದೆ. ಕ್ಯಾಂಪ್ಕೋದಿಂದ ತಯಾರಿಸಲ್ಪಟ್ಟ ವಿಶಿಷ್ಟ ಉತ್ಪನ್ನ ಇದಾಗಿದೆ. ಆರಂಭಿಕ ಹಂತದಲ್ಲೇ ಉತ್ತಮ ಪ್ರತಿಕ್ರೆಯೆ ವ್ಯಕ್ತವಾಗಿದೆ.

Advertisement

ಮಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸ್ಪೈಸ್ ಟೋಫಿ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ  ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ , ಉಪಾಧ್ಯಕ್ಷ ಶಂ.ನಾ ಖಂಡಿಗೆ, ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ಚಂದ್ರ ಭಂಡಾರಿ ಮೊದಲಾದವರು ಮಾತನಾಡಿದರು.

Advertisement

ಕೃಷಿಕರು ಸ್ವಾವಲಂಬನೆ ಸಾಧಿಸುವ ಹೆಬ್ಬಯಕೆಯೊಂದಿಗೆ ಆರಂಭವಾದ ಸಹಕಾರಿ  ಸಂಸ್ಥೆ ಕ್ಯಾಂಪ್ಕೋ. ಅಡಿಕೆ ಮಾತ್ರವಲ್ಲ ಇಂದು ಕೊಕೋ, ಕಾಳುಮೆಣಸು, ರಬ್ಬರ್ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಚಾಕೋಲೇಟ್ ತಯಾರಿಕೆಯ ಮೂಲಕ ಕೊಕೋ ಮೌಲ್ಯವರ್ಧನೆಯನ್ನೂ ಮಾಡಿದೆ.  ಈಗ ಚಾಕೋಲೇಟ್ ಮಾರುಕಟ್ಟೆಯಲ್ಲೂ ದೇಶದಲ್ಲೇ ಕ್ಯಾಂಪ್ಕೋ ಹೆಸರು ಮಾಡಿದೆ. ಇದೀಗ ಚಾಕೋಲೇಟ್ ಬಗ್ಗೆ ವಿಶಿಷ್ಟ ಸೃಜನಾತ್ಮಕ ಪ್ರಚಾರ ಅಭಿಯಾನವನ್ನು  ಕೈಗೊಳ್ಳಲಾಗಿದೆ. 60 ಸೆಕೆಂಡ್ ಡಿಜಿಟಲ್ ಚಿತ್ರದ ಮೂಲಕ ಮುದ್ರಣ, ರೇಡಿಯೋ, ದೃಶ್ಯಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ  ವ್ಯಾಪಕ ಪ್ರಚಾರ ಅಭಿಯಾನ ನಡೆಸಲಾಗುತ್ತಿದೆ, ಜನಸಾಮಾನ್ಯರು ಕ್ಯಾಂಪ್ಕೋ ಚಾಕಲೇಟ್ ನೊಂದಿಗೆ ಸಂಭ್ರಮಿಸುವಂತೆ ಪ್ರೇರಣೆ ನೀಡುವುದು  ಈ ಅಭಿಯಾನದ ಉದ್ದೇಶವಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ತಿಳಿಸಿದ್ದಾರೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆದರ್ಶ ಜೀವನ ಮತ್ತು ಪರಿಸರ ಸ್ನೇಹಿ ನೀತಿ ತಿಳಿಸುವ ಮಂಗಟ್ಟೆ ಹಕ್ಕಿಗಳು…
April 18, 2024
4:46 PM
by: The Rural Mirror ಸುದ್ದಿಜಾಲ
ಮರುಭೂಮಿ ನಾಡು ದುಬೈನಲ್ಲಿ 75 ವರ್ಷಗಳಲ್ಲೇ ದಾಖಲೆ ಮಳೆ: ಪ್ರವಾಹಕ್ಕೆ UAE ಅಲ್ಲೋಲ ಕಲ್ಲೋಲ : ನೀರಲ್ಲಿ ತೇಲುತ್ತಿರುವ ಮಾಲ್, ಏರ್ ಪೋರ್ಟ್, ಮೆಟ್ರೋ ಮಾರ್ಗ
April 18, 2024
3:49 PM
by: The Rural Mirror ಸುದ್ದಿಜಾಲ
ಎಚ್ಚರ… ತಾಯಂದಿರೇ ನಿಮ್ಮ ಮಕ್ಕಳಿಗೆ ಸೆರೆಲಾಕ್ ತಿನ್ನಿಸುತ್ತೀರಾ? ಬಯಲಾಯ್ತು ಶಾಕಿಂಗ್ ಮಾಹಿತಿ : ಮಕ್ಕಳ ಜೀವದೊಂದಿಗೆ ಆಟವಾಡುತ್ತಿರುವ ನೆಸ್ಲೆ
April 18, 2024
3:21 PM
by: The Rural Mirror ಸುದ್ದಿಜಾಲ
ಜೆಡಿಎಸ್‌ ಅಭ್ಯರ್ಥಿ, ಬಿಜೆಪಿ ಚಿಹ್ನೆ..! : Dr ಮಂಜುನಾಥ್‌ರನ್ನ ಬಿಜೆಪಿಯಿಂದ ನಿಲ್ಲಿಸಿದ್ದೇವೆ : ರಾಜಕೀಯ ತಂತ್ರಗಾರಿಕೆ ವರ್ಕೌಟ್‌ ಆಗಬೇಕು – ಹೆಚ್‌ ಡಿ ಕುಮಾರಸ್ವಾಮಿ
April 18, 2024
2:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror