Advertisement
ರಾಜ್ಯ

ಗೋಸ್ವರ್ಗದಲ್ಲಿ ಮಕ್ಕಳ ಸಮ್ಮೇಳನ

Share
ಮಂಗಳೂರು:  ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣವಿದೆ, ಸಾತ್ವಿಕತೆಯಿದೆ. ಇಂತಹ ಹಾಲಿನ ಸೇವನೆಯಿಂದ ಸ್ಥಿರತೆ, ಏಕಾಗ್ರತೆ, ಶಕ್ತಿ ದೊರೆಯುತ್ತದೆ. ಗೋವು ನಮಗೆ ಹಾಲಿನ ಮೂಲಕ ಪ್ರೀತಿಯ ಧಾರೆಯೆರೆಯುತ್ತದೆ ಎಂದು ರಾಮಚಂದ್ರಾಪುರ ಮಠದ ಶ್ರೀ
ರಾಘವೇಶ್ವರಭಾರತೀ ಶ್ರೀಗಳು ಹೇಳಿದರು.
ಅವರು  ಶಂಕರ ಪಂಚಮೀ ಉತ್ಸವ ನಿಮಿತ್ತ ಗೋಸ್ವರ್ಗದಲ್ಲಿ ನಡೆದ “ಮಕ್ಕಳ ಮಹಾಸಮ್ಮೇಳನ”ದಲ್ಲಿ ಆಶಿರ್ವಚನ ನೀಡಿದರು.  ಮಕ್ಕಳಿಗೆ ಹಾಲು ಜೇನು ಇಷ್ಟ. ಗೋವು ಹಾಲಿನಂತೆ, ಮಕ್ಕಳು ಜೇನಿನಂತೆ, ಇವೆರಡರ ಸಮಾಗಮವು ಇಂದು ಗೋಸ್ವರ್ಗದಲ್ಲಿ ಸಾಕ್ಷಾತ್ಕಾರವಾಗಿದೆ. ಗೋವುಗಳು ಮಕ್ಕಳು ಒಂದಾಗಬೇಕು, ಮಕ್ಕಳಲ್ಲಿ ಗೋವಿನ ಕುರಿತು ಪ್ರೀತಿ ಹೆಚ್ಚಬೇಕು ಎಂದು ಶ್ರೀಗಳು ಆಶಯ  ವ್ಯಕ್ತಪಡಿಸಿ ಮಕ್ಕಳೊಂದಿಗೆ ಆತ್ಮೀಯ ಸಂವಾದ ನಡೆಸಿಕೊಟ್ಟರು.
ಡಿ.ಎಸ್.ಹೆಗಡೆ ದೇಶೀಯ ಆಕಳ ಹಾಲಿನಲ್ಲಿಯ ವಿವಿಧ ಅಂಶಗಳ ಕುರಿತು ವಿವರಣೆ ನೀಡಿದರು. ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಕುಮಾರಸ್ವಾಮಿ ವರ್ಮುಡಿ, ಆರ್.ಎಸ್.ಹೆಗಡೆ ಹರಗಿ, ಆರ್.ಎಸ್.ಎಸ್‍ ನ  ಅ.ಪು.ನಾರಾಯಣ ಭಟ್ಟ ಮುಂತಾದವರು ಪಾಲ್ಗೊಂಡಿದ್ದರು.
ಮಹಾಮಂಡಲ ವ್ಯಾಪ್ತಿಯ ಮಂಗಳೂರು, ಕಾಸರಗೋಡು, ಶಿವಮೊಗ್ಗ, ಉತ್ತರ ಕನ್ನಡ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮಕ್ಕಳು ವಿವಿಧ ಆಟ-ಪಾಠಗಳಲ್ಲಿ ತನ್ಮಯತೆ, ಉತ್ಸಾಹದಿಂದ ಪಾಲ್ಗೊಂಡು ಹರ್ಷೋದ್ಘಾರ ಮಾಡಿದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ

ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…

18 hours ago

ಬಾಳ ಮಧ್ಯಾಹ್ನದ ಲಹರಿ

"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…

21 hours ago

ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ

ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…

22 hours ago

ಮುಂಗಾರು ಮತ್ತಷ್ಟು ಚುರುಕು- ವಾಯುಭಾರ ಕುಸಿತದ ಲಕ್ಷಣ | ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ IMD ಎಚ್ಚರಿಕೆ ನೀಡಿ

ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…

1 day ago

ಅಡಿಕೆ ಕಳ್ಳಸಾಗಣೆ ಪ್ರಕರಣ – ಸಿಲ್ಚಾರ್ ಉದ್ಯಮಿಯ ಮನೆ ಮೇಲೆ ಇ.ಡಿ. ದಾಳಿ, ಹಣ ಅಕ್ರಮ ವರ್ಗಾವಣೆ ತನಿಖೆ ತೀವ್ರ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…

1 day ago