Advertisement
MIRROR FOCUS

ಬರ್ಮಾ ಅಡಿಕೆ ಅಕ್ರಮ ಸಾಗಾಟಕ್ಕೆ ಮತ್ತೊಂದು ಹೊಡೆತ

Share

ಮಿಜೋರಾಂ ಅಂತರರಾಷ್ಟ್ರೀಯ ಗಡಿ ಮೂಲಕ ನಡೆಯುತ್ತಿರುವ ಮಾದಕ ವಸ್ತು ಮತ್ತು ಅಕ್ರಮವಾಗಿ ಅಡಿಕೆ ಸಾಗಾಟದ  ಪ್ರಕರಣ ಪತ್ತೆ ಮಾಡಿದ್ದು 5 ಚೀಲಗಳಲ್ಲಿ ಸಾಗಿಸಲಾಗುತ್ತಿದ್ದ ಒಟ್ಟು 3,600 ಕೆ.ಜಿ. ಬರ್ಮಾ ಅಡಿಕೆಯನ್ನು ವಶಪಡಿಸಿಕೊಂಡಿದೆ. ಈ ಸಂಬಂಧ ಮ್ಯಾನ್ಮಾರ್ ಪ್ರಜೆಯೊಬ್ಬ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಅಸ್ಸಾಂ ರೈಫಲ್ಸ್ ಮತ್ತು ಮಿಜೋರಾಂ ಪೊಲೀಸರು ಜಂಟಿಯಾಗಿ ಚಂಫೈ ಜಿಲ್ಲೆಯ ನಾರ್ತ್ ಡಿಲ್ಟ್ಲಾಂಗ್ ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಣ ಅಡಕೆಯನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 3,600 ಕೆ.ಜಿ. ಅಡಿಕೆಯನ್ನು ಜಪ್ತಿ ಮಾಡಲಾಗಿದ್ದು,  ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಅಡಿಕೆ ಸಾಗಾಟಕ್ಕೆ ಬಳಸಲಾಗಿದೆ ಎನ್ನಲಾದ ಮೂರು ಬೊಲೆರೊ ಪಿಕಪ್ ವಾಹನಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಮ್ಯಾನ್ಮಾರ್‌ನೊಂದಿಗೆ ಉದ್ದವಾದ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿರುವ ಮಿಜೋರಾಂ ಮತ್ತು ಮಣಿಪುರ ರಾಜ್ಯಗಳು ಮಾದಕ ವಸ್ತುಗಳ ಕಳ್ಳಸಾಗಣೆಯ ಪ್ರಮುಖ ಮಾರ್ಗಗಳಾಗಿ ಗುರುತಿಸಿಕೊಂಡಿವೆ. ಮಿಜೋರಾಂ ಮತ್ತು ಮಣಿಪುರದ ಒಟ್ಟು 11 ಜಿಲ್ಲೆಗಳು ಮ್ಯಾನ್ಮಾರ್‌ನೊಂದಿಗೆ ಸುಮಾರು 910 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿವೆ. ಗಡಿಯ ಬಹುಭಾಗಕ್ಕೆ ಬೇಲಿ ಇಲ್ಲದಿರುವುದರಿಂದ ಅಕ್ರಮ ಸಾಗಾಟವನ್ನು ತಡೆಯುವುದು ಭದ್ರತಾ ಸಂಸ್ಥೆಗಳಿಗೆ ಸವಾಲಾಗಿದೆ.

ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯುವುದರ ಜೊತೆಗೆ ವಿದೇಶಿ ಮೂಲದ ಅಡಿಕೆಯ ಅಕ್ರಮ ಆಮದು ಮತ್ತು ಸಾಗಾಟವನ್ನು ನಿಯಂತ್ರಿಸಲು ಗಡಿ ಪ್ರದೇಶದಲ್ಲಿ ನಿಗಾ ಹಾಗೂ ಜಂಟಿ ಕಾರ್ಯಾಚರಣೆಗಳನ್ನು ಹೆಚ್ಚಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂದಿನ ಬೇಸಿಗೆಗೆ ಈಗಿನಿಂದಲೇ ಸಿದ್ಧರಾಗಿ – ನೀರು ಉಳಿಸದಿದ್ದರೆ ತೋಟ ಉಳಿಸುವುದು ಕಷ್ಟವಾಗಬಹುದು

2026ರ ಎಲ್‌ನಿನೋ ಪರಿಣಾಮದಿಂದ ಮುಂಗಾರು ಮತ್ತು ಹಿಂಗಾರು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಮೇ 2027ರವರೆಗೆ…

22 hours ago

ಅಸ್ಸಾಂನಲ್ಲಿ ಅಡಿಕೆ ಸಾಗಣೆಗೆ ಸಮಸ್ಯೆ…? ಅಕ್ರಮ ಅಡಿಕೆ ಸಾಗಾಟವೇ ಈಗ ಸಂಕಷ್ಟವೇ…?

ಅಸ್ಸಾಂನ ಬರಾಕ್ ಕಣಿವೆಯ ಕಟಿಗೋರಾ ಭಾಗದಲ್ಲಿ ಸ್ಥಳೀಯ ಅಡಿಕೆ ಸಾಗಣೆಗೆ ಸಿಂಡಿಕೇಟ್ ಅಡ್ಡಿಪಡಿಸುತ್ತಿದೆ…

23 hours ago

ಹವಾಮಾನ ವರದಿ | 13-11-2026 | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ಅಕ್ವಾನ್ ಚಂಡಮಾರುತದ ಪಥ ನಿಗೂಢ

ಕರ್ನಾಟಕದಾದ್ಯಂತ ಒಣಹವೆ ಮುಂದುವರಿಯಲಿದ್ದು, ಉತ್ತರ ಭಾರತದ ಶೀತ ಹಾಗೂ ಶುಷ್ಕ ಗಾಳಿಯಿಂದ ಚಳಿಯ…

2 days ago

ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವತ್ ಪರೀಕ್ಷೆಯಲ್ಲಿ ಸುನಾದ ಸಂಗೀತ ಶಾಲೆಯ ಆರು ವಿದ್ಯಾರ್ಥಿನಿಯರಿಗೆ ವಿಶಿಷ್ಟ ಶ್ರೇಣಿ

ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ವಿದ್ವತ್ ಪರೀಕ್ಷೆಯಲ್ಲಿ…

2 days ago

ತಾರಸಿ ಮೇಲೆ 150ಕ್ಕೂ ಹೆಚ್ಚು ಗಿಡಗಳ ಹಸಿರು ತೋಟ: ಔಷಧಿ ಸಸ್ಯಗಳಿಂದಲೇ ದಿನಬಳಕೆ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿರುವ ಗೃಹಿಣಿ

ಬಳ್ಳಾರಿಯ ಗೃಹಿಣಿ ಆರ್.ಜೆ. ಸುಜಾತ ಅವರು ಮನೆಯ ತಾರಸಿಯಲ್ಲಿ 150ಕ್ಕೂ ಹೆಚ್ಚು ಸಸ್ಯಗಳನ್ನು…

2 days ago

ಬಳಕೆಯಾದ ಅಡುಗೆ ಎಣ್ಣೆ ವಿಲೇವಾರಿಗೆ ಅಧಿಕೃತ ಆ್ಯಪ್

ಹೋಟೆಲ್‌ಗಳಲ್ಲಿ ಬಳಕೆಯಾದ ಅಡುಗೆ ಎಣ್ಣೆ ಸಂಗ್ರಹಣೆ ಮತ್ತು ವಿಲೇವಾರಿಗೆ ಮೂರು ತಿಂಗಳೊಳಗೆ ಅಧಿಕೃತ…

2 days ago