ಸವಣೂರು : ವಿವಿಧ ರೀತಿಯ ಅಭಿಯಾನ ನಡೆಯುತ್ತದೆ. ಇದು ವಿಶಿಷ್ಠವಾದ ಅಬಿಯಾನ. ಗ್ರಾಮಸಭೆಗೆ ಬನ್ನಿ ಎಂದು ಸವಣೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಗ್ರಾ.ಪಂ.ಸದಸ್ಯರು ಹಾಗೂ ಪ್ರಮುಖರು ಮನೆ ಮನೆಗೆ ತೆರಳಿ ಮನವಿ ಮಾಡುತ್ತಿದ್ದಾರೆ.
ಅಧಿಕಾರ ವಿಕೇಂದ್ರಿಕರಣದ ಪ್ರಕ್ರಿಯೆಯಲ್ಲಿ ಸ್ಥಳಿಯಾಡಳಿತವಾದ ಗ್ರಾ.ಪಂ.ಹೆಚ್ಚು ಮಹತ್ವ ಪಡೆದಿದೆ.ಗ್ರಾಮಸ್ಥರ ಪಾಲ್ಗೊಳ್ಳುವಿಕೆಯಿಂದ ಗ್ರಾಮಾಭಿವೃದ್ದಿಯ ಯೋಜನೆಗಳು ಯಶಸ್ವಿಯಾಗಿ ನಡೆಯಲು ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಅತ್ಯಗತ್ಯ.ಆದರೆ ಹೆಚ್ಚಿನ ಕಡೆಗಳಲ್ಲಿ ಗ್ರಾಮಸಭೆಗಳಿಗೆ ಗ್ರಾಮಸ್ಥರ ಹಾಜರಾತಿ ತೀರಾ ಕಡಿಮೆ ಕಂಡುಬರುತ್ತಿದೆ.
ಪ್ರತೀ ಆರು ತಿಂಗಳಿಗೊಮ್ಮೆ ಗ್ರಾಮಸಭೆಗಳು ನಡೆಯುತ್ತದೆ.ಈ ಸಭೆಯಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಆಗಬೇಕಾದ ಕಾಮಗಾರಿ,ಅಭಿವೃದ್ದಿ ಕಾರ್ಯಗಳ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚಿಸಿ ಕ್ರಿಯಾಯೋಜನೆ ತಯಾರಿಸಲಾಗುತ್ತದೆ.
ಆದರೆ ಈ ಗ್ರಾಮಸಭೆಗಳಿಗೆ ಗ್ರಾಮಸ್ಥರ ಭಾಗವಹಿಸುವಿಕೆ ತೀರಾ ಕಡಿಮೆ.ಕಾರಣ ಗ್ರಾಮಸಭೆಗಳಲ್ಲಿ ಪ್ರಸ್ತಾಪಗೊಂಡ ವಿಷಯಗಳ ಕುರಿತು ಕ್ರಿಯಾಯೋಜನೆ ತಯಾರಿಸುವುದು ಅಪರೂಪ ಹಾಗೂ ತಮ್ಮ ಗ್ರಾಮದಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳ ಮಾಹಿತಿ ಗ್ರಾಮಸ್ಥರಿಗೂ ಸರಿಯಾಗಿ ತಲುಪುತ್ತಿಲ್ಲ ಹಾಗೂ ಮಾಹಿತಿ ಪಡೆದುಕೊಳ್ಳುವ ಗೋಜಿಗೂ ಗ್ರಾಮಸ್ಥರು ಮುಂದಾಗುತ್ತಿಲ್ಲ. ಇದರಿಂದ ಗ್ರಾಮಸಭೆ ಹೋಗಿ ಏನುಪ್ರಯೋಜನವಿಲ್ಲ ಎಂಬುದು ಹೆಚ್ಚಿನ ಗ್ರಾಮಸ್ಥರ ಅಭಿಪ್ರಾಯ.
ಈ ಕಾರಣದಿಂದ ಗ್ರಾಮಸಭೆಗಳಿಗೆ ಗ್ರಾಮಸ್ಥರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದಕ್ಕಾಗಿ ಹಳ್ಳಿಯ ವಿಧಾನಸಭೆ ಎಂದು ಹೆಸರು ಮಾಡಿರುವ ಗ್ರಾಮಸಭೆಗಳ ಮಹತ್ವದ ಕುರಿತು ಗ್ರಾಮದ ಮೂಲೆಮೂಲೆಗಳಿಗೆ ತಿಳಿಹೇಳುವ ಕಾರ್ಯ ಹಾಗೂ ಗ್ರಾಮ ಸಭೆಯ ಕರಪತ್ರವನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಸವಣೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಗ್ರಾ.ಪಂ.ಸದಸ್ಯರು ಹಾಗೂ ಪ್ರಮುಖರು ಮಾಡುತ್ತಿದ್ದಾರೆ.
ಸವಣೂರು ಗ್ರಾ.ಪಂ.ನ ವಾರ್ಡ್ 1ರಲ್ಲಿ ಗ್ರಾ.ಪಂ.ಸದಸ್ಯರಾದ ಸತೀಶ್ ಬಲ್ಯಾಯ,ಗಾಯತ್ರಿ ಬರೆಮೇಲು,ಸತೀಶ್ ಅಂಗಡಿಮೂಲೆ ,ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಸುಪ್ರಿತ್ ರೈ ಖಂಡಿಗ,ನಿರ್ದೇಶಕ ಪ್ರಜ್ವಲ ಕೆ.ಆರ್,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು, ಸ್ಥಳೀಯ ಪ್ರಮುಖರಾದ ಪ್ರದೀಪ್ ಕೆ.ಆರ್ ಕೋಡಿಬೈಲ್,ಅನಿತಾ ಲಕ್ಷ್ಮಣ್ ಕೆಡೆಂಜಿ,ವೇದಾ ದಯಾನಂದ ಬೇರಿಕೆ,ಜಯಶ್ರೀ ಬಾರಿಕೆ ಅವರನ್ನೊಳಗೊಂಡ ತಂಡ ಈ ಕಾರ್ಯವನ್ನು ಮಾಡುತ್ತಿದೆ.
ಈ ಕಾರ್ಯವನ್ನು 2013ರಲ್ಲಿ ಅಂದು ಗ್ರಾ.ಪಂ.ಸದಸ್ಯರಾಗಿದ್ದ ರಾಕೇಶ್ ರೈ ಕೆಡೆಂಜಿ ಮಾಡಿದ್ದರು.ಬಳಿಕದ ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಹೆಚ್ಚಳವಾಗಿತ್ತು.
ವಾರ್ಡ್‍ಸಭೆ ಹಾಗೂ ಗ್ರಾಮ ಸಭೆಗಳ ಕುರಿತು ಆಯಾ ಗ್ರಾ.ಪಂ.ವತಿಯಿಂದ ಪ್ರಕಟಣೆ ನೀಡಲಾಗುತ್ತದೆ.ಆದರೆ ಗ್ರಾಮಸಭೆ ಎಂಬುದು ಗ್ರಾಮಸ್ವರಾಜ್ಯದ ಜೀವಾಳ ಎಂದು ಹಲವರಿಗೆ ತಿಳಿದಿಲ್ಲ.ಗ್ರಾಮ ಸಭೆ ಎಂಬುದು ಆಯಾ ಊರಿನ ಸಹಕಾರಿ ಸಂಘಗಳ ಮಹಾಸಭೆಯಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಅಭಿವೃದ್ದಿಯ ಭಾಗ. ವಸತಿಹೀನರಿಗೆ ನಿವೇಶನ ನೀಡಲು,ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆಮಾಡುವ ಸ್ಥಳವೇ ಗ್ರಾಮ ಸಭೆ. ಎಲ್ಲಾ ಗ್ರಾ.ಪಂ.ಗಳಲ್ಲೂ ಅಲ್ಲಿನ ಸದಸ್ಯರು ಮಾಡಿದಲ್ಲಿ ಗ್ರಾ.ಪಂ.ಆಡಳಿತ ಚುರುಕುಗೊಳ್ಳುವುದು ಹಾಗೂ ವಾರ್ಡ್‍ಸಭೆ ಮತ್ತು ಗ್ರಾಮಸಭೆಗಳು ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸಾದ್ಯವಾಗುತ್ತದೆ.ಒಂದು ಭಾಗದಲ್ಲಿ ನಡೆದ ಪ್ರಯತ್ನ ಅಲ್ಲಿಗೆ ಮಾತ್ರ ಸೀಮೀತವಾಗಬಾರದು.ಈ ಪ್ರಯೋಗ ಎಲ್ಲೆಡೆ ನಡೆಯಬೇಕು.ಹಾಗಾದಾಗ ಮಾತ್ರ ಗ್ರಾಮಸರಕಾರ ಅಂದರೆ ಗ್ರಾ.ಪಂ.ಗಳು ಕೂಡ ಮಾದರಿ ಆಡಳಿತ ನಡೆಸಲು ಸಾಧ್ಯವಾಗುತ್ತದೆ.
ನಮ್ಮ ಗ್ರಾ.ಪಂ.ಸದಸ್ಯರು ಗ್ರಾಮ ಸಭೆಯ ಕುರಿತು ಮನೆಮನೆಗೆ ಕರಪತ್ರ ಹಂಚಿ ಗ್ರಾಮಸಭೆಯಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುವಂತೆ ಮಾಡುತ್ತಿದ್ದಾರೆ.ಇದು ಒಳ್ಳೆಯ ಬೆಳವಣಿಗೆ.ನಮ್ಮ ಗ್ರಾ.ಪಂ.ನಲ್ಲಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ಆಡಳಿತ ಮಂಡಳಿ,ಅ„ಕಾರಿ ವರ್ಗ ಇರುವುದರಿಂದ ಕಾರ್ಯಗಳು ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. – ಇಂದಿರಾ ಬಿ.ಕೆ ಅಧ್ಯಕ್ಷರು ಸವಣೂರು ಗ್ರಾ.ಪಂ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…