ಮರ್ಕಂಜ: ಮರ್ಕಂಜದ ಚೀಮಾಡ್ ನಲ್ಲಿರುವ ಪದ್ಮನಾಭ ಅವರ ಮನೆಗೆ ಬೆಳಕು ಹರಿಯಿತು.
ಈ ಮನೆಗೆ ಕಳೆದ ಅನೇಕ ವರ್ಷಗಳಿಂದ ವಿದ್ಯುತ್ ಸಂಪರ್ಕ ಬಿಡಿ, ರೇಶನ್ ಕಾರ್ಡೂ ಇರಲಿಲ್ಲ. ಯುವ ಬ್ರಿಗೆಡ್ ಗಮನಕ್ಕೆ ಈ ಸಂಗತಿ ಬಂದ ಬಳಿಕ ಮನೆಗೆ ಬೆಳಕು ಹರಿದಿತ್ತು. ಇದೀಗ ಮನೆಯಲ್ಲಿ ವಿದ್ಯುತ್ ದೀಪ ಉರಿಯುವ ಮೂಲಕ ಬೆಳಕೇ ಹರಿದಿದೆ. ಹೀಗಾಗಿ ಯುವಬ್ರಿಗೆಡ್ ತಂಡಕ್ಕೆ ಮನೆಯವರಿಂದ ಧನ್ಯವಾದ. ಸಾಮಾಜಿಕ ಕೆಲಸ ಮಾಡುತ್ತಿರುವ ಯುವಬ್ರಿಗೆಡ್ ತಂಡಕ್ಕೆ ಸುಳ್ಯನ್ಯೂಸ್.ಕಾಂ ಕಡೆಯಿಂದಲೂ ಅಭಿನಂದನೆ.
ಮರ್ಕಂಜದ ಚೀಮಾಡ್ ನಲ್ಲಿರುವ ಪದ್ಮನಾಭ ಅವರ ಮನೆಗೆ ಯುವ ಬ್ರಿಗೇಡ್ ಕಡೆಯಿಂದ ಸೋಲಾರ್ ಅಳವಡಿಸಿಕೊಡಲಾಗಿತ್ತು.ನಂತರ ತಹಶೀಲ್ದಾರಾದ ಕುಂಞಿ ಅಹಮ್ಮದ್ ಅವರ ಸಹಾಯದಿಂದ ರೇಶನ್ ಕಾರ್ಡ್ ಹಾಗೂ ಇತರೆ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗಿತ್ತು. ಭಾನುವಾರ ಮಧುಕಿರಣ್ ಅನ್ನಪೂರ್ಣ ಎಲೆಕ್ಟ್ರಿಕಲ್, ವೆಂಕಟ್ರಮಣ ಗೌಡ ಪರಿವಾರಕಾನ , ರವಿಕುಮಾರ್ ಕುರುಂಜಿ ಇವರೆಲ್ಲರ ಸಹಕಾರದೊಂದಿಗೆ ಯುವ ಬ್ರಿಗೇಡ್ ತಂಡವು ಉಚಿತವಾಗಿ ವಿದ್ಯುತ್ ವಯರಿಂಗ್ ವ್ಯವಸ್ಥೆ ಮಾಡಿತು.ಈಗ ಬೆಳಕು ಹರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw