ಬೆಳ್ಳಾರೆ : ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಗ್ರಾಮ ಪಂಚಾಯತ್ ಬೆಳ್ಳಾರೆ, ಜೆಸಿಐ ಬೆಳ್ಳಾರೆ ಹಾಗೂ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಸಹಭಾಗಿತ್ವದಲ್ಲಿ ಡೆಂಘೆ, ಮಲೇರಿಯಾ ವಿರುದ್ಧ ಸಾರ್ವಜನಿಕರಿಗೆ ಅರಿವು ನೀಡುವ ಹಾಗೂ ‘ಡ್ರೈವ್ ಡೇ’ ವಿಶೇಷ ಅಭಿಯಾನ ಕಾರ್ಯಕ್ರಮವು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿತು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶ್ವತೀ ಮಾತನಾಡಿ ಡೆಂಘೆ , ಮಲೇರಿಯಾ ಇನ್ನಿತರ ಮಾರಕ ಕಾಯಿಲೆಗಳು ಹರಡದಂತೆ ಪ್ರತಿ ಮನೆ, ಅಂಗಡಿ ಹಾಗೂ ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ಶೇಖರಣೆಗೊಳ್ಳದಂತೆ ಜಾಗೃತಿ ವಹಿಸುವಂತೆ ಮನವಿ ಮಾಡಿದರು. ಇಂತಹ ಪ್ರದೇಶದಲ್ಲಿ ಲಾರ್ವಗಳು ಉತ್ಪತ್ತಿಗೊಂಡು ಕಾಯಿಲೆಗಳು ಹಬ್ಬಲು ಸಹಕಾರಿಯಾಗುತ್ತದೆ. ಇದಕ್ಕೆ ಪರಿಹಾರ ಎಂಬಂತೆ, ಸ್ವಚ್ಛತೆ ಕಾಯ್ದುಗೊಳ್ಳುವುದು ಎಂದರಲ್ಲದೆ, ಜ್ವರಭಾದೆ ಕಾಣಿಸಿಕೊಂಡಲ್ಲಿ ವಿಳಂಬ ಮಾಡದೆ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ನುಡಿದರು.
ಸಭಾಧ್ಯಕ್ಷತೆ ವಹಿಸಿ, ಸ್ವಾಗತಿಸಿದ ರೋಟರಿ ಕ್ಲಬ್ ಬೆಳ್ಳಾರೆ ಟೌನ್‍ನ ಅಧ್ಯಕ್ಷ ಬಿ. ನರಸಿಂಹ ಜೋಶಿ ಮಾತನಾಡಿ ದೇಶದಲ್ಲಿ ಪೋಲಿಯೋ ನಿರ್ಮೂಲನೆಗೊಳಿಸಿದಂತೆ ಡೆಂಘೆ ಇನ್ನಿತರ ಮಾರಕ ಕಾಯಿಲೆಯ ವಿರುದ್ಧ ಜನಜಾಗೃತಿ ಮೂಡಿಸಿಕೊಂಡು ಕಾರ್ಯಚರಣೆ ನಡೆಸಿ, ಕಾಯಿಲೆ ಹಬ್ಬದಂತೆ ತಡೆಯಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಬೆಳ್ಳಾರೆಯ ಉಪಾಧ್ಯಕ್ಷ ಮಹಮ್ಮದ್ ಮುಸ್ತಾಫ, ಬೆಳ್ಳಾರೆ ಜೆ.ಸಿ.ಐ.ಯ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಬೆಳ್ಳಾರೆ ಪೇಟೆಯ ಬಸ್‍ಸ್ಟಾಂಡ್ ಬಳಿ ತೆರಳಿ ಸೊಳ್ಳೆಗಳು ಹರಡದಂತೆ ಪರಿಸರ ಸ್ವಚ್ಛತೆ, ನೀರು ಶೇಖರಣೆಗೊಳ್ಳದಂತೆ ಕ್ರಮ ಕೈಗೊಳ್ಳುವಂತೆ ಅಂಗಡಿ ವ್ಯವಹಾರಸ್ಥರಿಗೆ, ಪ್ರಯಾಣಿಕರಿಗೆ ಅರಿವು ನೀಡಿದರು.
ಈ ಕಾರ್ಯಾಚರಣೆಯಲ್ಲಿ ರೋಟರಿಯ ಝೋನಲ್ ಲೆಪ್ಟಿನೆಂಟ್ ಪ್ರಭಾಕರ ಆಳ್ವ ಬಜನಿಗುತ್ತು ಸ್ಥಾಪಕಾಧ್ಯಕ್ಷ ಶ್ಯಾಮಸುಂದರ ರೈ, ರವೀಂದ್ರ ಗೌಡ ಯಂ., ವೆಂಕಪ್ಪ ಗೌಡ ಎನ್. ಎಸ್., ಐತ್ತಪ್ಪ ಗೌಡ ಕಾವಿನಮೂಲೆ, ಸೀತಾರಾಮ ನೆಟ್ಟಾರು, ಆಸ್ಪತ್ರೆಯ ಸಿಬ್ಬಂದಿಗಳು, ಆಶಾಕಾರ್ಯಕರ್ತೆಯರು ಭಾಗವಹಿಸಿ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…