ಬೆಳ್ಳಾರೆ : ಸಾರ್ವಜನಿಕ ಗಣೇಶೋತ್ಸವ ಸಮಿತಿ ಕುಂಡಡ್ಕ-ಮುಕ್ಕೂರು ಇದರ ದಶಮಾನೋತ್ಸವದ ಪ್ರಯುಕ್ತ ನಡೆದ ಹತ್ತರ ಹುತ್ತರಿ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಎಂಟು ಮಂದಿಯನ್ನು ಸನ್ಮಾನಿಸಲಾಯಿತು.
ಡಾ|ನರಸಿಂಹ ಶರ್ಮಾ ಕಾನಾವು (ವೈದ್ಯ) ಭೂ ವಿಜ್ಞಾನಿ ಸಂದ್ಯಾ ಕುಮಾರಿ (ಭೂ ವಿಜ್ಞಾನಿ), ಜಗನ್ನಾಥ ಪೂಜಾರಿ ಮುಕ್ಕೂರು ಇಸ್ಮಾಯಿಲ್ ಕುಂಡಡ್ಕ ( ಪ್ರಗತಿಪರ ಕೃಷಿಕ), ಅಶ್ವಿನಿ ಕೋಡಿಬೈಲು (ಸಾಹಿತ್ಯ),ಯಶೋಧಾ ಬೀರುಸಾಗು (ನಾಟಿ ವೈದ್ಯ), ಕೊರಗ್ಗು ಅನೋವುಗುಂಡಿ(ದೈವ ಪರಿಚಾರಕ), ಕಂಜೋಲಿ (ಹಿರಿಯ ನಾಗರಿಕ) ಅವರನ್ನು ತಹಶೀಲ್ದಾರ್ ಕುಂಞ ಅಹ್ಮದ್ ಅವರು ಸಮ್ಮಾನಿಸಿದರು. ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಅಭಿನಂದನಾ ಮಾತುಗಳನ್ನಾಡಿದರು.
ದಶಮಾನೋತ್ಸವ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರಾದ್ಯಾಪಕ ಡಾ|ನರೇಂದ್ರ ರೈ ದೇರ್ಲ, ಕುಕ್ಕೇಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಬೆಳ್ಳಾರೆ ಠಾಣಾ ಸಬ್ ಇನ್ಸ್‍ಪೆಕ್ಟರ್ ಈರಯ್ಯ ಡಿ.ಎನ್., ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಪೊಡಿಯಾ, ಡಿಸಿಸಿ ಬ್ಯಾಂಕ್ ಮಾರಾಟಾಧಿಕಾರಿ ಸಂತೋಷ್ ಕುಮಾರ್ ಮರಕ್ಕಡ, ಪೆರುವಾಜೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಲಲಿತಾ, ಮುಕ್ಕೂರು ಶಾಲಾ ಮುಖ್ಯಗುರು ವಸಂತಿ, ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷ ತಿರುಮಲೇಶ್ವರ ಭಟ್ ಕಾನಾವು, ಕಾರ್ಯಾಧ್ಯಕ್ಷ ಉಮೇಶ್ ಕೆ.ಎಂಬಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಎನ್.ಕೆ, ಕೋಶಾದಿಕಾರಿ ರಮೇಶ್ ಕಾನಾವು ಉಪಸ್ಥಿತರಿದ್ದರು.
ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಉಮೇಶ್ ಕೆ.ಎಂ.ಬಿ ವಂದಿಸಿದರು. ರಕ್ಷಿತ್ ಗೌಡ ಕಾರ್ಯಕ್ರಮ ನಿರ್ವಹಿಸಿದರು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…