ದುಗಲಡ್ಕ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

August 24, 2019
1:10 PM

ದುಗಲಡ್ಕ:ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗಲಡ್ಕ ಇವರ ಆಶ್ರಯದಲ್ಲಿ 28ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಆ.23ರಂದು ದುಗಲಡ್ಕ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಸಿ.ನಾರಾಯಣ ಗೌಡ ನೆರವೇರಿಸಿದರು. ಮಿತ್ರ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕೊಯಿಕುಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಯಾಗಿ ದುಗಲಡ್ಕ ಪ್ರೌಢಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಎ.ಯು.ಮಂಗಳೂರಿನಲ್ಲಿ ಉದ್ಯಮಿಯಾಗಿರುವ ರಮೇಶ್ ಪಿ.ಕಾಮತ್, ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ರೈ ದುಗಲಡ್ಕ, ಸುಳ್ಯ ವೆಂಕಟರಮಣ ಸೊಸೈಟಿ ಉಪಾಧ್ಯಕ್ಷ ಪಿ.ಎಸ್.ಗಂಗಾಧರ್, ಕುರಲ್ ತುಳುಕೂಟದ ಗೌರವಾಧ್ಯಕ್ಷ ಸಿರಿಲ್ ಡಿ ಸೋಜಾ ,ಈಶ್ವರಿಯಾ ವಿಶ್ವ ವಿದ್ಯಾಲಯದ ಬ್ರಹ್ಮ ಕುಮಾರಿ ಉಮಾದೇವಿ, ಸುಳ್ಯ ರೋಟರ್ಯಾಕ್ಟ್ ಅಧ್ಯಕ್ಷ ಮೋಹಿತ್ ಹರ್ಲಡ್ಕ ಭಾಗವಹಿಸಿದರು. ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ, ಅಧ್ಯಕ್ಷ ನಾರಾಯಣ ಟೈಲರ್, ಯುವಕ ಮಂಡಲದ ಪ್ರ.ಕಾರ್ಯದರ್ಶಿ ಅಕ್ಷಯ್ ಮೂಡೆಕಲ್ಲು, ಕೋಶಾಧಿಕಾರಿ ಚಿದಾನಂದ ಕೊಯಿಕುಳಿ ಉಪಸ್ಥಿತರಿದ್ದರು. ರೋಹಿತ್ ಎಸ್.ಎನ್.ಪ್ರಾರ್ಥಿಸಿ, ಯುವಕ ಮಂಡಲದ ಗೌರವಾಧ್ಯಕ್ಷ ಭವಾನಿಶಂಕರ ಕಲ್ಮಡ್ಕ ಸ್ವಾಗತಿಸಿ, ತುಳುಕೂಟದ ಕೋಶಾಧಿಕಾರಿ ಮನೋಜ್ ಪಾನತ್ತಿಲ ವಂದಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಅತಿಥಿಗಳಿಗೆ ಪರಿಸರ ಕಾಳಜಿಯ ಸಲುವಾಗಿ ಗಿಡಗಳನ್ನು ನೀಡಲಾಯಿತು.
ಬಳಿಕ ಮಕ್ಕಳಿಗೆ, ಸ್ಥಳೀಯರಿಗೆ,ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.ಸಂಜೆ ನಡೆದ ಸಮಾರೋಪ ಸಮಾರಂಭ ನಡೆಯಿತು. ಸುಳ್ಯ ದ ಭಗವಾನ್ ಕನ್ ಸ್ಟ್ರಕ್ಷನ್ ಮಾಲಕ ಕೆ.ಎಸ್.ಗೋಪಾಲಕೃಷ್ಣ ಕರೋಡಿ ಬಹುಮಾನ ವಿತರಣೆ ಮಾಡಿದರು.ಕುರಲ್ ತುಳುಕೂಟದ ಅಧ್ಯಕ್ಷ ನಾರಾಯಣ ಟೈಲರ್ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ,ಹಿರಿಯ ವೈದ್ಯಾಧಿಕಾರಿ ಡಾ.ನಂದಕುಮಾರ್ ಬಿ. ದುಗಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಕೆ.ಯಂ.ಹಸೈನಾರ್ ಕೊಳಂಜಿಕೋಡಿ, ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬೀಟ್ ಪೋಲಿಸ್ ಮಹೇಶ್ ಕುಮಾರ್ ಮತ್ತು ಆರಕ್ಷಕ ಸಿಬ್ಬಂದಿ ಲೋಕೇಶ್ ಉಪಸ್ಥಿತರಿದ್ದರು.ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ, ಯುವಕ ಮಂಡಲ ಅಧ್ಯಕ್ಷ ದಿನೇಶ್ ಕೊಯಿಕುಳಿ ಮತ್ತು ಪದಾಧಿಕಾರಿಗಳು ವೇದಿಕೆಯಲ್ಲಿ ಇದ್ದರು.
ಮನೋಜ್ ಪಾನತ್ತಿಲ ಸ್ವಾಗತಿಸಿ, ರಮೇಶ್ ನೀರಬಿದಿರೆ ಬಹುಮಾನ ವಿಜೇತರ ಪಟ್ಟಿ ವಾಚಿಸಿ, ವಂದಿಸಿದರು. ಸಿರಿಲ್ ಡಿ.ಸೋಜಾ ಕಾರ್ಯಕ್ರಮ ನಿರೂಪಿಸಿದರು. ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಎಸ್.ಎಫ್.ಸಿ.ಕೂಟೇಲು ಪ್ರಥಮ ಹಾಗೂ ಮುತ್ತು ಶ್ರೀ ಕಂದಡ್ಕ ದ್ವಿತೀಯ ಬಹುಮಾನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದವರು ಭಾಗವಹಿಸಿದರು.

Advertisement

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದೇಶದ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ
July 10, 2025
11:26 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ವಿಧಾತ್ರಿ ಎಂ, ಮೈಸೂರು
July 10, 2025
10:42 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ನೈನಿಕಾ ಬಿ ಸಿ
July 10, 2025
10:27 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ನಯೋನಿಕಾ.ಬಿ.ಸಿ.
July 10, 2025
10:11 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group