Advertisement
The Rural Mirror ಫಾಲೋಅಪ್

“ನಾವು ಹೋಗುವುದು ಎಲ್ಲಿಗೆ….”, ನೀವೇ ಹೇಳಿ….? ಮೊಣ್ಣಂಗೇರಿ ಜನರ ಪ್ರಶ್ನೆ

Share

ಸಂಪಾಜೆ : ಹೌದು, ನೀವು ಹೇಳ್ತೀರಿ , ನಿಜ. ನಮ್ಮ ಭೂಮಿ , ನಮ್ಮ ದನ ಕರುಗಳು , ನಮ್ಮ ನಾಯಿ ಬಿಟ್ಟು ನಾವು ಮಾತ್ರಾ ಎಲ್ಲಿಗೆ ಹೋಗುವುದು ಹೇಳಿ…?. ಅವನ್ನೆಲ್ಲಾ ಕರೆದುಕೊಂಡು ಹೋಗೋಣವೇ, ಬಿಟ್ಟು ಹೋಗವೇ…? ಹೀಗಂತ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು  ಕೇಳುತ್ತಾ ಭೂಮಿಯ, ಕೃಷಿಯ ಜೊತೆಗಿನ ಒಟನಾಟವನ್ನು ಬಿಚ್ಚಿಡುತ್ತಾರೆ ಮೊಣ್ಣಂಗೇರಿಯ ಪಾರ್ವತಿ.

 

 

ಮೊಣ್ಣಂಗೇರಿಯ ವಿವಿಧ ಮನೆಗಳಿಗೆ “ಸುಳ್ಯನ್ಯೂಸ್.ಕಾಂ” ತಂಡ ಭೇಟಿ  ನೀಡಿ ಮಾತುಕತೆ ನಡೆಸುತ್ತಿದ್ದಾಗ ಕೇಳಿಬಂದ ಮಾತುಗಳು ಇದು. ಇದು ಪಾರ್ವತಿ ಅವರ ಒಬ್ಬರ ಮಾತಲ್ಲ. ಎಲ್ಲಾ ಮನೆಯಲ್ಲೂ ಇದೇ ಮಾತು. ಕಳೆದ ಅನೇಕ ವರ್ಷಗಳಿಂದ ಇಲ್ಲಿ ವಾಸವಿದ್ದು ಈಗ ಮಳೆ ಬರುವಾಗ ಹೋಗಿ ಎಂತ ಹೇಳುವುದು  ಸುಲಭ ನಿಜ. ಜೀವ ಉಳಿಯಬೇಕು ನಿಜ. ಆದರೆ ನಾವು ಬೆವರು ಸುರಿದ ಬೆಳೆದ ಕೃಷಿ, ನಮ್ಮ ಪ್ರೀತಿಯ ದನ ಇದರ ಮೇಲೆ ಪ್ರೀತಿ ಇದೆ, ಹೀಗಾಗಿ ಸುಲಭವಾಗಿ ಎದ್ದುಬಿಡಿ ಅಂತ ಹೇಳಿದರೆ ಹೇಗೆ ಎನ್ನವುದು  ಅವರ ಮಾತಿನ ಸಾರಾಂಶ.

 

ನಿಜ, ಮೊಣ್ಣಂಗೇರಿ ಪ್ರದೇಶದಲ್ಲಿ ಮೊದಲ ಮಳೆಗೇ ಭಯ ಶುರುವಾಗಿದೆ ಹೌದು. ಆದರೆ ಮೊಣ್ಣಂಗೇರಿ ಪ್ರದೇಶ ಸುಮಾರು 188 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಈ ಬಾರಿ ಸುಮಾರು 90 ಮನೆಗಳ ಸ್ಥಳಾಂತರ ಆಗಲೇಬೇಕು. ಆದರೆ ಅವರೆಲ್ಲರ ಪ್ರಶ್ನೆ, “ಎಲ್ಲಿಗೆ ಹೋಗುವುದು”.

ಕಳೆದ ವರ್ಷದ ಭಯಾನಕ ಸ್ಥಿತಿ ಮತ್ತೆ ಮರುಕಳಿಸಿದರೆ ?  ಎಂಬ ಪ್ರಶ್ನೆಯ ಜೊತೆಗೇ ಮೊನ್ನೆಯಿಂದ ಭೂಮಿಯ ಅಡಿಯಲ್ಲಿ ಬೆಟ್ಟ ಗುಡ್ಡಗಳಿಂದ ಭಯಾನಕ ಶಬ್ದ ಕೇಳಿ ಬರುತ್ತಿತ್ತು ಎನ್ನುತ್ತಾರೆ ಮೊಣ್ಣಂಗೇರಿಯ ವಾರಿಜಾ ವೆಂಕಪ್ಪ. ನಮ್ಮದೆಲ್ಲವನ್ನೂ ಬಿಟ್ಟು ಮತ್ತೆ ಮನೆ ಬಿಟ್ಟು ಹೋಗಾಬೇಕಾದ ಸ್ಥಿತಿ ಬರಬಹುದು ಎಂಬ ಆತಂಕ ಇದೆ. ಆದರೆ ಹೋಗುವುದಾದರು ಎಲ್ಲಿಗೆ ಎಂಬ ಪ್ರಶ್ನೆ ಕಾಡುತಿದೆ ಎನ್ನುತ್ತಾರೆ ಅವರು.

ಹೌದು ದೂರದಲ್ಲಿ ಕುಳಿತಿರುವ ಎಲ್ಲರಿಗೂ ಒಂದೇ ವಾಕ್ಯ ,” ಎಲ್ಲಾ ಬಿಟ್ಟು ಬನ್ನಿ…” , ಆದರೆ ಅಲ್ಲಿ ಕುಳಿತಿರುವ ಮಂದಿಯ ಭಾವನೆಗೆ ಬೆಲೆ ಕಟ್ಟಲು ಸಾಧ್ಯವೇ ?.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

4 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

4 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

1 day ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago