Advertisement
ಸುದ್ದಿಗಳು

ನೀರಿಂಗಿಸೋಣ ಬನ್ನಿ”ಅಭಿಯಾನದ 5 ನೇ ಕಾರ್ಯಕ್ರಮ

Share

ಸವಣೂರು: ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ವತಿಯಿಂದ ಸರ್ವೆ ಗ್ರಾಮದಲ್ಲಿ ನಡೆಯುತ್ತಿರುವ “ನೀರಿಂಗಿಸೋಣ ಬನ್ನಿ”ಅಭಿಯಾನದ 5 ನೆಯ ಕಾರ್ಯಕ್ರಮವಾಗಿ ಸರ್ವೆ ಕಂಚರಮೂಲೆ ಸತೀಶ್ ಮರಡಿತ್ತಾಯ ಅವರ ಜಮೀನಿನಲ್ಲಿ ನೀರಿಂಗಿಸಲು ಬೃಹತ್ ಹೊಂಡ ನಿರ್ಮಿಸಲಾಯಿತು. ಯುವಕ ಮಂಡಲದ ಸದಸ್ಯರು ಶ್ರಮದಾನದ ಮೂಲಕ ಸುತ್ತಲಿನ ಗುಡ್ಡದಲ್ಲಿ ಬೀಳುವ ಮಳೆ ನೀರನ್ನು ಇಂಗುಗುಂಡಿಗೆ ಸಂಪರ್ಕಿಸಲು ಚರಂಡಿ ನಿರ್ಮಿಸಿದರು.

ಸತೀಶ್ ಮರಡಿತ್ತಾಯ ಅವರು ಮಾತನಾಡಿ ಯುವಕ ಮಂಡಲದ ಸದಸ್ಯರು ಸರ್ವೆ ಗ್ರಾಮದಲ್ಲಿ ಹಮ್ಮಿಕೊಂಡಿರುವ “ನೀರಿಂಗಿಸೋಣ ಬನ್ನಿ ” ಅಭಿಯಾನವನ್ನು ಬೆಂಬಲಿಸಿ ಇಂಗು ಗುಂಡಿ ನಿರ್ಮಿಸಿದ್ದೇನೆ. ಯುವಕ ಮಂಡಲದ ಸದಸ್ಯರು ಅಂತರ್ಜಲ ವೃದ್ಧಿಗಾಗಿ ನಮ್ಮ ಜಮೀನಿನಲ್ಲಿ ಹಮ್ಮಿಕೊಂಡಿರುವ ಶ್ರಮದಾನ ಕಾರ್ಯಕ್ರಮ ಅಭಿನಂದನೀಯ ಎಂದರು.

ಎಸ್ ಜಿ ಎಂ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀನಿವಾಸ್ ಎಚ್ ಬಿ ಮಾತನಾಡಿ ಯುವಕ ಮಂಡಲದ ಯುವಕರೊಂದಿಗೆ “ನೀರಿಂಗಿಸೋಣ ಬನ್ನಿ ” ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಯುವಕ ಮಂಡಲದ ಪ್ರತಿ ಜನಪರ ಕಾರ್ಯಕ್ರಮಗಳಿಗೆ ನನ್ನ ಬೆಂಬಲ ಇದೆ ಎಂದರು.

ಯುವಕ ಮಂಡಲದ ಅಧ್ಯಕ್ಷರಾದ ಕಮಲೇಶ್ ಸರ್ವೆದೋಳಗುತ್ತು ಸತೀಶ್ ಮರಡಿತ್ತಾಯ ಅವರನ್ನು ಅಭಿನಂದಿಸಿ ಮಾತನಾಡಿ ಸತೀಶ್ ಮರಡಿತ್ತಾಯ ಅವರು ತಮ್ಮ ಜಮೀನಿನಲ್ಲಿರುವ ಬಹುಪಾಲು ಕಾಡನ್ನು ಸಂರಕ್ಷಿಸಿದ್ದಾರೆ. ಕಳೆದ ವರ್ಷ್ ಅಂತರ್ಜಲ ವೃದ್ಧಿಗಾಗಿ ವೆಂಟೆಡ್ ಡ್ಯಾಮ್ ನಿರ್ಮಿಸಿಕೊಂಡಿದ್ದಾರೆ. ಇದೀಗ ಯುವಕ ಮಂಡಲದ ಅಭಿಯಾನಕ್ಕೆ ಬೆಂಬಲವಾಗಿ ಇಂಗುಗುಂಡಿ ನಿರ್ಮಿಸಿರುವುದು ಅವರ ಪರಿಸರ ಪ್ರೇಮಕ್ಕೆ ಸಾಕ್ಷಿ ಎಂದರು.

ಕಾರ್ಯಕ್ರಮ ಸಂಯೋಜಕರಾದ ನಾಗೇಶ್ ಪಟ್ಟೆಮಜಲು ಕಾರ್ಯಕ್ರಮ ಸಂಯೋಜಿಸಿದರು.  ಯುವಕ ಮಂಡಲದ  ಗೌರವಾಧ್ಯಕ್ಷರು ಹಾಗು ಮುಂಡೂರು ಗ್ರಾಮ ಪಂ ಅಧ್ಯಕ್ಷರಾದ ವಸಂತ್ ಎಸ್ ಡಿ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಸುಭ್ರಮಣ್ಯ ಕರಂಬಾರು, ಉಪಾಧ್ಯಕ್ಷರಾದ ಪ್ರವೀಣ್ ಚೆನ್ನಾವರ, ಯುವಕ ಮಂಡಲದ ಅಧ್ಯಕ್ಶರಾದ ಕಮಲೇಶ್ ಸರ್ವೆದೋಳಗುತ್ತು, ಪ್ರ ಕಾರ್ಯದರ್ಶಿ ತಿಲಕ್ ರಾಜ್ ಕರಂಬಾರು, ಮಾಜಿ ಅಧ್ಯಕ್ಷರಾದ ರಾಜೇಶ್ ಎಸ್ ಡಿ, ಪದಾಧಿಕಾರಿಗಳಾದ ರಾಮಣ್ಣ ಪೂಜಾರಿ ವಿಜಯ ಬ್ಯಾಂಕ್, , ಅಶೋಕ್ ಎಸ್ ಡಿ, ಕಿಶೋರ್ ಸರ್ವೆದೋಳಗುತ್ತು, , ಗೌತಮ್ ರಾಜ್ ಕರಂಬಾರು, ಜಯರಾಜ್ ಸುವರ್ಣ ಸೊರಕೆ, ಮನೋಜ್ ಸುವರ್ಣ ಸೊರಕೆ, ಗುರುರಾಜ್ ಪಟ್ಟೆಮಜಲು, ಸದಸ್ಯರಾದ ರಾಮಕೃಷ್ಣ ಸರ್ವೆದೋಳಗುತ್ತು , ನಂದನ್ ಸರ್ವೆದೋಳಗುತ್ತು, ಯೋಗೀಶ್ ಮಡಿವಾಳ ಕಲ್ಪಣೆ, ಮೊದಲಾದವರು ಭಾಗವಹಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ

ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್‌ಗಳನ್ನು ಅಭಿವೃದ್ಧಿಪಡಿಸಿ,…

8 hours ago

ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…

9 hours ago

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ

ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್‌ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್‌ಎಂಎಸ್‌ಜಿ ಕಾಂಪ್ಲೆಕ್ಸ್‌ನಲ್ಲಿ…

10 hours ago

ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…

10 hours ago

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

2 days ago